Asianet Suvarna News Asianet Suvarna News

’ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ನೋಡಿದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ..!

Oct 2, 2018, 4:09 PM IST

ಬೆಂಗಳೂರು[ಅ.02]: ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಕೊನೆಯ ಚಿತ್ರ ಎಂದೇ ಬಿಂಬಿತವಾಗಿರುವ ’ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರವನ್ನು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ ನೋಡಿದ್ದಾರೆ ಎನ್ನಲಾಗಿದೆ.

ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಯಾಗಿರುವ ರಾಹುಲ್ ಏಷ್ಯಾಕಪ್ ಮುಕ್ತಾಯದ ಬಳಿಕ ಸಿಕ್ಕ ಒಂದು ದಿನದ ಬಿಡುವಿನಲ್ಲಿ ’ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ನೋಡಿದ್ದಾರೆ. ಇವರಿಗೆ ಅಂಬರೀಶ್ ಮಗ ಮತ್ತು ಚಿತ್ರನಟ ಚಿಕ್ಕಣ್ಣ ಸಾಥ್ ನೀಡಿದ್ದಾರೆ.