ಭೋಪಾಲ್‌ನಲ್ಲಿ ಪತ್ನಿ ತವರಿಗೆ ಹೋದಾಗ ಪತಿಯೊಬ್ಬ ಹೋಟೆಲ್‌ಗೆ ಕಾಲ್ ಗರ್ಲ್ ಬುಕ್ ಮಾಡಿದ್ದನು. ಆದರೆ ಆತನ ಬಳಿ ಬಂದ ಕಾಲ್ ಗರ್ಲ್ ಬೇರಾರೂ ಆಗಿರದೆ ಆತನ ಸ್ವಂತ ಪತ್ನಿಯೇ ಆಗಿದ್ದಳು. ಈ ವಿಚಿತ್ರ ಘಟನೆಯ ಕಥೆ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಭೋಪಾಲ್​: ಆತನ ಪತ್ನಿ ತವರಿಗೆ ಹೋಗುತ್ತೇನೆಂದು ಹೋದಳು. ಒಂಟಿಯಾದ ಪತಿ ಮಹಾಶಯನಿಗೆ ತುಂಬಾ ಬೇಸರವಾಗತೊಡಗಿತು. ಹೇಳಿಕೇಳಿ ಪತ್ನಿ ಮನೆಯಲ್ಲಿ ಇಲ್ಲ. ತವರಿಗೆ ಹೋಗಿದ್ದಾಳೆ ಎಂದರೆ, ಅಷ್ಟು ಬೇಗ ವಾಪಸ್​ ಕೂಡ ಬರಲ್ಲ ಎನ್ನುವುದು ಖಚಿತವಾಗಿತ್ತು. ಏಕೆಂದರೆ ಅವಳು ಹೋಗುವಾಗಲೂ ಒಂದಷ್ಟು ದಿನ ಅಲ್ಲಿಯೇ ಇದ್ದು ಬರುತ್ತೇನೆ ಎಂದು ಹೋಗಿದ್ದಳು. ಆಕೆಯನ್ನು ಖುಷಿಯಿಂದ ಬೀಳ್ಕೊಟ್ಟಿದ್ದ ಈ ಪತಿರಾಯ. ಅದಕ್ಕೆ ಕಾರಣ ಬೇರೆನೇ ಇತ್ತು. ಪತ್ನಿ ಅತ್ತ ಹೋಗುತ್ತಿದ್ದಂತೆಯೇ ಕಾಲ್​ ಗರ್ಲ್​ಗಾಗಿ ಹುಡುಕಾಟ ನಡೆಸಿದ ಈತ. ಆದರೆ ಮುಂದಾಗಿದ್ದು ಮಾತ್ರ ಯಾವ ಸಿನಿಮಾದಲ್ಲಿಯೂ ತೋರಿಸದ ಸ್ಟೋರಿ!

ಇದು ಭೋಪಾಲ್​ನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಈ ಪತಿ ಮಹಾಶಯನ ಹೆಸರನ್ನು ಪ್ರಮೋದ್​ ಎನ್ನಲಾಗಿದ್ದು, ಪತ್ನಿಯ ಹೆಸರನ್ನು ಸೀಕ್ರೇಟ್​ ಆಗಿ ಇಡಲಾಗಿದೆ. ಪತ್ನಿ ಅತ್ತ ತವರಿಗೆ ಹೋಗುತ್ತಿದ್ದಂತೆಯೇ ಕಾಲ್​ ಗರ್ಲ್​ಗಾಗಿ ಸರ್ಚ್​ ಮಾಡಿದ ಪ್ರಮೋದ್​. ಇಂಥವರಿಗಾಗಿಯೇ ಇರುವ ಸೆಂಟರ್​ಗೆ ಕರೆ ಮಾಡಿ, ತನಗೆ ಇಂಥವಳು ಬೇಕೆಂದು ಹೇಳಿದಾಗ, ಒಬ್ಬಳನ್ನು ಅವರು ಕಳುಹಿಸಿಕೊಟ್ಟರು. ಅದಕ್ಕಾಗಿ ಈತ 3 ಸಾವಿರ ರೂಪಾಯಿಗಳನ್ನು ಪಾವತಿ ಮಾಡಿದ. ಇಂತಿಷ್ಟು ಗಂಟೆಗಳ 'ಸೇವೆ'ಗೆ ಫಿಕ್ಸ್​ ಮಾಡಿಕೊಂಡು 3 ಸಾವಿರ ಪೇ ಮಾಡಿದ.

ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತಿದ್ದ ಪತಿರಾಯ

ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತಿದ್ದ ಈ ಪತಿರಾಯ. ತವರಿಗೆ ಹೋದ ಪತ್ನಿಯನ್ನು ಮನಸ್ಸಿನಲ್ಲಿಯೇ ಕೊಂಡಾಡಿದ. ಅವಳು ಅಲ್ಲಿಗೆ ಹೋದ ಕಾರಣಕ್ಕೇನೇ ತನಗೆ ಈ ಒಂದು ಛಾನ್ಸ್​ ಸಿಕ್ಕಿತು ಎಂದು ಆಕೆಗೆ ಧನ್ಯವಾದ ಕೂಡ ಸಲ್ಲಿಸಿದ. ಈ ಹಿಂದೆ ಅದೆಷ್ಟು ಸಲ ಹೀಗೆ ಮಾಡಿದ್ನೋ ಗೊತ್ತಿಲ್ಲ. ಆದರೆ ಈ ಸಲ ಆಗಿದ್ದು ಮಾತ್ರ ಯಾರೂ ಊಹಿಸದ ಟ್ವಿಸ್ಟ್​. ತಮ್ಮ ಈ ಭೇಟಿಯಾಗಿ ಒಂದು ಹೋಟೆಲ್​ ಕೂಡ ಬುಕ್​ ಮಾಡಿ, ಅಲ್ಲಿಯೇ ಬರುವಂತೆ ಕಾಲ್​ ಗರ್ಲ್​ಗೆ ವಿಳಾಸ ವಿನಿಮಯವನ್ನೂ ಮಾಡಿದ. ಆ ಸುಂದರಿಯ ಬರುವಿಕೆಗಾಗಿ ಕಾಯುತ್ತಾ ಕುಳಿತ ಪ್ರಮೋದ್​.

ಕಾಲ್​ಗರ್ಲ್​ ಎಂಟ್ರಿ ಆದಾಗ...

ನಿರೀಕ್ಷೆಯಂತೆ ಹೇಳಿದ ಟೈಮ್​ಗೆ ಕರೆಕ್ಟಾಗಿ ಅವಳ ಎಂಟ್ರಿ ಆಯಿತು. ಖುಷಿಯಿಂದ ಬಾಗಿಲ ಬಳಿ ಅವಳಿಗಾಗಿ ಸ್ವಾಗತಕ್ಕೆ ಕಾಯುತ್ತಿದ್ದ ಪ್ರಮೋದ್​ ಅವಳನ್ನು ನೋಡಿ ಕಕ್ಕಾಬಿಕ್ಕಿಯಾದ. ಅಲ್ಲಿ ಬಂದ ಕಾಲ್​​ಗರ್ಲ್​ಗೂ ಇವನನ್ನು ನೋಡಿ ತಲೆತಿರುಗಿ ಹೋಯ್ತು. ಏಕೆಂದ್ರೆ, ಅಲ್ಲಿಗೆ ಬಂದಿದ್ದ ಕಾಲ್​ಗರ್ಲ್​ ಬೇರೆ ಮಹಿಳೆಯಲ್ಲ, ಬದಲಿಗೆ ಇವನ ಧರ್ಮಪತ್ನಿಯೇ ಆಗಿದ್ದಳು! ಇಬ್ಬರೂ ಸಿಕ್ಕಿಬಿದ್ದಿದ್ದರು. ಪರಸ್ಪರ ದೂಷಿಸಿಕೊಳ್ಳುವಂತೆ ಇರಲೇ ಇಲ್ಲ. ಇವನೂ ಮಾಡಬಾರದ ಕೆಲಸ ಮಾಡಿದ್ದ, ಅವಳೂ ಅದನ್ನೇ ಮಾಡಿದ್ದಳು. ತವರಿಗೆ ಹೋಗುತ್ತೇನೆ ಎಂದು ಒಂದಿಷ್ಟು ಹಣ ಸಂಪಾದನೆ ಮಾಡಲು ಈ ಹಾದಿ ತುಳಿದಿದ್ದಳು ಪತ್ನಿ! ಈ ಸ್ಟೋರಿ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಆದರೆ ಇದರ ಸತ್ಯಾಸತ್ಯತೆ ಮಾತ್ರ ತಿಳಿದವರೇ ಹೇಳಬೇಕು. ಮುಂದೇನಾಯ್ತು ಎನ್ನುವುದು ಮಾತ್ರ ಸದ್ಯ ಗೊತ್ತಿಲ್ಲ!

ಆದ್ದರಿಂದ ಹಲವರು ಒಂದೇ ಬೇಡಿಕೆ ಇಡುತ್ತಿದ್ದಾರೆ. ಅದೇನಂದರೆ ಕಾಲ್​ ಗರ್ಲ್​ ಕಳುಹಿಸುವಂತೆ ಹೇಳುವಾಗ ಅವರ ಫೋಟೋ ಕಡ್ಡಾಯ ಮಾಡಬೇಕು ಎನ್ನುವುದು ಈ ಎಲ್ಲರ ಬೇಡಿಕೆಯಾಗಿದೆ! ಇಲ್ಲದಿದ್ದರೆ ಹೀಗೆಯೇ ಎಡವಟ್ಟಾಗುತ್ತದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ತಮಾಷೆಯ ಕಮೆಂಟ್ಸ್​ ಬರುತ್ತಿವೆ.