ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ

ತಮಿಳು ನಟ ಹಾಗೂ ತಮಿಳುನಾಡು ರಾಜಕೀಯ ನಾಯಕ ದಳಪತಿ ವಿಜಯ್ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 

Share this Video
  • FB
  • Linkdin
  • Whatsapp

ತಮಿಳು ನಟ ಹಾಗೂ ತಮಿಳುನಾಡು ರಾಜಕೀಯ ನಾಯಕ ದಳಪತಿ ವಿಜಯ್ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ದ್ರಾವಿಡ ರಾಜಕೀಯ ನಾಯಕರಾದ ಎಂಜಿಆರ್, ಜಯಲಲಿತಾ, ಸ್ಟಾಲಿನ್ ಕುಟುಂಬ ಸೇರಿದಂತೆ ಅನೇಕ ತಮಿಳು ನಾಯಕರು ಮೂಕಾಂಬಿಕೆ ದೇವಿಯ ಭಕ್ತರಾಗಿರುವುದು ವಿಶೇಷ. ಎಂಜಿಆರ್ ಆರಂಭಿಸಿದ ಈ ಸಂಪ್ರದಾಯ ಇಂದಿಗೂ ಮುಂದುವರಿದಿದ್ದು, ದಳಪತಿ ವಿಜಯ್ ಕೂಡ ಅದೇ ನಂಬಿಕೆಯಲ್ಲಿ ದೇವಿಯ ದರ್ಶನ ಪಡೆಯಲಿದ್ದಾರೆ. ತಮಿಳುನಾಡಿನ ರಾಜಕೀಯ ಮತ್ತು ಮೂಕಾಂಬಿಕೆ ಕ್ಷೇತ್ರದ ನಡುವಿನ ವಿಶೇಷ ನಂಟು ಮತ್ತೆ ಚರ್ಚೆಗೆ ಬಂದಿದೆ.

Related Video