ಕರ್ನಾಟಕದಲ್ಲಿ ಕೊರೋನಾ ಅಬ್ಬರ, ನಟಿ ಮೇಲೆ ಅತ್ಯಾಚಾರ: ಜು.5ರ ಟಾಪ್ 10 ಸುದ್ದಿ!
ಕೊರೋನಾ ವೈರಸ್‌ಗೆ ದೇಶ ತತ್ತರಿಸಿದೆ. ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ 7ನೇ ಸ್ಥಾನಕ್ಕೇರಿದೆ. ಬಿಹಾರ ಸಿಎಂಗೂ ಕೊರೋನಾ ಭೀತಿ ಆವರಿಸಿದೆ. ಚೀನಾಗೆ ತಕ್ಕ ಶಾಸ್ತಿ ಮಾಡಲು ಅಮೆರಿಕ 2 ಯುದ್ಧ ನೌಕೆ ರವಾನಿಸಿದೆ. ಸ್ಯಾಂಡಲ್‌ವುಡ್ ಖ್ಯಾತ ನಟಿ ಮೇಲೆ ಅತ್ಯಾಚರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಡಿಯೋ ಮೂಲಕ ಸದ್ದು ಮಾಡುತ್ತಿದ್ದಾರೆ. ಚೀನಾಗೆ ತಿರುಗೇಟು ನೀಡಿದ ಹೀರೋ ಸೈಕಲ್, ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿಕೊಂಡ ಬಿಲ್ಡರ್ ಸೇರಿದಂತೆ ಜುಲೈ 5ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
ನಿತೀಶ್‌ಗೆ ಕೊರೋನಾ ಸೋಂಕು ಭೀತಿ: ಟೆಸ್ಟ್‌ಗೆ ಒಳಗಾದ ಬಿಹಾರ ಸಿಎಂ!
ಬಿಹಾರ ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿ ಅವ್‌ದೇಶ್ ನಾರಾಯಣ್ ಸಿಂಗ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಬೆನ್ನಲ್ಲೇ, ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಕೊರೋನಾ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ಬಂತೆಂದು ತಾಯಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟೋದ!...
ಕೊರೋನಾ ಸೋಂಕಿತ ತಾಯಿಯಿಂದ ಮನೆಮಂದಿಗೆಲ್ಲಾ ಸೋಂಕು ಹರಡುತ್ತದೆಂದು 80 ವರ್ಷದ ವೃದ್ಧ ತಾಯಿಯನ್ನು ಸ್ವತಃ ಪುತ್ರನೇ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಚೇರ್ಲಾದಲ್ಲಿ ನಡೆದಿದೆ.
ಚೀನಾಗೆ ಅಮೆರಿಕ ಸಡ್ಡು: 2 ಯುದ್ಧ ನೌಕೆ ರವಾನೆ!...
ಕ್ಷಿಣ ಚೀನಾ ಸಮುದ್ರ ವಲಯದಲ್ಲಿ ಜು.1ರಿಂದ 5 ದಿನಗಳ ಕಾಲ ಚೀನಾ ಸಮರಾಭ್ಯಾಸ ಹಮ್ಮಿಕೊಂಡಿರುವ ಹೊತ್ತಿನಲ್ಲೇ, ಅದೇ ವಲಯಕ್ಕೆ ಅಮೆರಿಕ ತನ್ನ 2 ಅತ್ಯಾಧುನಿಕ ಯುದ್ಧ ನೌಕೆಗಳನ್ನು ಕಳುಹಿಸಿ ತಾನು ಕೂಡ ಸಮರಾಭ್ಯಾಸ ಆರಂಭಿಸಿದೆ. ದಕ್ಷಿಣ ಚೀನಾ ವಲಯದ ಮೇಲಿನ ಚೀನಾ ಹಕ್ಕು ಸ್ಥಾಪನೆಗೆ ಅಮೆರಿಕ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆಯಾದರೂ, ಭಾರತ- ಚೀನಾ ನಡುವಿನ ಗಡಿ ಬಿಕ್ಕಟ್ಟು ಸಮರದ ಆತಂಕ ಹುಟ್ಟುಹಾಕಿರುವಾಗಲೇ ನಡೆದಿರುವ ಈ ಬೆಳವಣಿಗೆ ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.
ಕೊರೋನಾ ಸೋಂಕಿನ ಅಬ್ಬರ: ದೇಶದಲ್ಲೀಗ ಕರ್ನಾಟಕ ನಂ.7 ರಾಜ್ಯ!...
ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಉಬ್ಬರ ಕಂಡುಬರುತ್ತಿದ್ದು, ಅತಿ ಹೆಚ್ಚು ಸೋಂಕು ಪತ್ತೆಯಾಗಿರುವ ಟಾಪ್ 10 ರಾಜ್ಯಗಳ ಪಟ್ಟಿಯಲ್ಲಿ ಈ ನಾಲ್ಕೂ ಸ್ಥಾನ ಪಡೆದಿವೆ ಎಂದು ಅಂಕಿ-ಸಂಖ್ಯೆ ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಮೊದಲಿನಿಂದಲೂ ಟಾಪ್10 ಪಟ್ಟಿಹೊರಗಿದ್ದ ಕರ್ನಾಟಕ, ಇದೀಗ ದೇಶದಲ್ಲೇ 8ನೇ ಸ್ಥಾನಕ್ಕೇರಿರುವುದು ಆತಂಕಕಾರಿಯಾಗಿ ಪರಿಣಮಿಸಿದೆ.
ಕಟ್ಟಡ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿಕೊಂಡ ಮಂಗಳೂರಿನ ಬಿಲ್ಡರ್!
ಮಂಗಳೂರಿನ ಬಿಲ್ಡರ್ ಪಶ್ಚಿಮ ಬಂಗಾಳದಿಂದ ಐವರು ಮೇಸ್ತ್ರಿಗಳನ್ನು ಮಂಗಳೂರಿಗೆ ತರೆಸಿದ್ದಾರೆ. ಈ ಲಾಕ್‌ಡೌನ್ ಸಮಯದಲ್ಲೂ ಕಟ್ಟಡ ಕೆಲಸಕ್ಕೆ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿಕೊಂಡಿರೋದು ವಿಶೇಷ.
ವಿಡಿಯೋ ಮೂಲಕ ಸಂಚಲನ ಮೂಡಿಸಿದ ರನ್ ಮಷಿನ್ ವಿರಾಟ್ ಕೊಹ್ಲಿ..!...
ಟೀಂ ಇಂಡಿಯಾದ ನಾಯಕ ವಿರಾಟ್ ಕೋಹ್ಲಿ ಏನೇ ಮಾಡಿದರೂ ಸುದ್ದಿಯಾಗುತ್ತಾರೆ. ಸದ್ಯ ಮಹಾಮಾರಿ ಕೊರೋನಾ ವೈರಸ್‌ನಿಂದ ಯಾರಿಗೂ ಕಾಣದ ಹಾಗೆ ಅಗಿದ್ದಾರೆ. ಏಕೆಂದರೆ ಕೋವಿಡ್‌ನಿಂದ ಎಲ್ಲ ರೀತಿಯ ಕ್ರಿಕೆಟ್ ಪಂದ್ಯಾವಳಿಗಳನ್ನ ಬಂದ್ ಮಾಡಲಾಗಿದೆ. ಅದರೂ ಕೂಡ ಕೊಹ್ಲಿ ಅಲ್ಲೊಂದು ಇಲ್ಲೊಂದು ಫೋಟೋ, ವಿಡಿಯೊ ಹಾಕುವ ಮೂಲಕ ಸುದ್ದಿಯಾಗುತ್ತಾರೆ.
ಕೂಲ್ ಡ್ರಿಂಕ್‌ನಲ್ಲಿ ಮತ್ತು ಬರುವ ಔಷಧಿ; ಹುಟ್ಟುಹಬ್ಬದಂದೇ ನಟಿಯ ಮೇಲೆ ಅತ್ಯಾಚಾರ!
ಕನ್ನಡ ಚಿತ್ರರಂಗದ ಹೆಸರಾಂತ ನಟಿ ಮೇಲೆ ಅತ್ಯಾಚಾರ ಆಗಿರುವುದು ಬೆಳಕಿಗೆ ಬಂದಿದೆ. ಕಳೆದ ವರ್ಷ ನಡೆದ ಘಟನೆಯಿಂದ ಬೇಸತ್ತು ನಟಿ ಪೊಲೀಸರಿಗೆ ದೂರು ನೀಡಿದ್ದಾರೆ.
ನಿಮ್ಮ ಫೇಸ್ಬುಕ್ ಲಾಗಿನ್ ವಿವರ ಕದಿಯುವ ಈ ಆ್ಯಪ್ ಡಿಲೀಟ್ ಮಾಡಿ..!.
ನಿಮ್ಮ ಮೊಬೈಲ್‌ನಲ್ಲಿರುವ ಆ್ಯಪ್‌ಗಳೇ ನಿಮ್ಮ ಮಾಹಿತಿಯನ್ನು ಕದಿಯುತ್ತವೆ. ಸ್ವಲ್ಪ ಗೊತ್ತಿಲ್ಲದೆ ನೀವು ಈ ಆ್ಯಪ್‌ಗಳನ್ನು ಬಳಸುತ್ತಿದ್ದೀರೆಂದಾದರೆ ಈಗಲೇ ಎಚ್ಚೆತ್ತುಕೊಳ್ಳಿ. ಈ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಂತೆಯೆ ನಿಮ್ಮ ಫೇಸ್ಬುಕ್ ಲಾಗಿನ್ ಮಾಹಿತಿಯನ್ನು ಕಬಳಿಸುತ್ತವೆ ಎಂಬ ಆತಂಕಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ.
ಚೀನಾಗೆ ಸದ್ದಿಲ್ಲದೆ ಹೊಡೆತ ನೀಡಿದ ಹೀರೋ ಸೈಕಲ್; ಕಂಗಾಲಾದ ಡ್ರ್ಯಾಗನ್ ರಾಷ್ಟ್ರ!
ಚೀನಾ ಕಂತ್ರಿ ಬುದ್ದಿಗೆ ಭಾರತ ಸರಿಯಾಗಿ ತಿರುಗೇಟು ನೀಡಿದೆ. ಗಡಿಯಲ್ಲಿ ಭಾರತೀಯ ಸೇನೆ ನೀಡಿದ ಏಟಿಗೆ ಚೀನಾ ಪತರಗುಟ್ಟಿದೆ. ಇನ್ನು ಕೇಂದ್ರ ಸರ್ಕಾರ 59 ಚೀನಾ ಆ್ಯಪ್ ಬ್ಯಾನ್ ಮಾಡಿ ಶಾಕ್ ನೀಡಿತ್ತು. ನಾಗರೀಕರು ಚೀನಾ ವಸ್ತು ಬಹಿಷ್ಕರಿಸಿ ಎದಿರೇಟು ನೀಡಿದ್ದಾರೆ. ಇದೀಗ ಭಾರತದ ಹೀರೋ ಕಂಪನಿ ನೀಡಿದ ಹೊಡೆತಕ್ಕೆ ಚೀನಾ ಕಂಗಾಲಾಗಿದೆ.
ಕಿರುತೆರೆ ನಟಿ ನವ್ಯಾಸ್ವಾಮಿಯಿಂದ ಸಹ ನಟ ರವಿಕೃಷ್ಣಗೂ ಕೊರೋನಾ ಪಾಸಿಟಿವ್!
ಮೂಲತಃ ಮೈಸೂರಿನವರಾದ ನವ್ಯಾ ಸ್ವಾಮಿ ತಲುಗು ಕಿರುತೆರೆ ನಟಿ ಹಾಗೂ ಮಾಡಲ್. ಲಾಕ್‌ಡೌನ್ ಸಡಿಲಿಕೆ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡ ನವ್ಯಾ ಅವರಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿತ್ತು. ಯಾವುದೇ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳದೇ ಪಾಸಿಟಿವ್ ಬಂದಿರುವ ಕಾರಣ ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಸಹ ಕಲಾವಿರು, ತಂತ್ರಜ್ಞರಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು.