ಕನ್ನಡ ಚಿತ್ರರಂಗದ ಹೆಸರಾಂತ ನಟಿ ಮೇಲೆ ಅತ್ಯಾಚಾರ ಆಗಿರುವುದು ಬೆಳಕಿಗೆ ಬಂದಿದೆ. ಕಳೆದ ವರ್ಷ ನಡೆದ ಘಟನೆಯಿಂದ ಬೇಸತ್ತು ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. 

ಬೆಂಗಳೂರಿನ ನಾಯಂಡಹಳ್ಳಿ ನಿವಾಸಿಯಾಗಿರುವ ಮೋಹಿತ್ ಎಂಬಾತ ನಟಿಗೆ ತನ್ನ ಕಂಪನಿಯ ಬ್ರಾಂಡ್ ಅಂಬಾಸಿಡರ್  ಮಾಡುವುದಾಗಿ ಪರಿಚಯವಾಗಿದ್ದಾರೆ. ಪರಿಚಯವಾದ ಕೆಲವೇ  ದಿನಗಳಲ್ಲಿ ಇಬ್ಬರು ಸ್ನೇಹಿತರಾಗಿದ್ದಾರೆ. ಇದೇ ಆಪ್ತತೆಯಿಂದ ಮೋಹಿತ್ ತಮ್ಮ ಹುಟ್ಟುಹಬ್ಬಕ್ಕೆ ನಟಿಯನ್ನು ನಿವಾಸಕ್ಕೆ ಆಹ್ವಾನಿಸುತ್ತಾರೆ. 

ಕೊರೋನಾ ವೈರಸ್‌ಗೆ ಖ್ಯಾತ ನಿರ್ಮಾಪಕ ರಾಮ ರಾವ್‌ ನಿಧನ! 

ಮೋಹಿತ್ ಬರ್ತಡೇ ಪಾರ್ಟಿಯಲ್ಲಿ ನಟಿಗೆ ಕೂಲ್ ಡ್ರಿಂಕ್‌ನಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಆಕೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೋಹಿತ್, ಆತನ ತಂದೆ ಮಹದೇವ್, ತಾಯಿ ನಾಗವೇಣಿ ಮತ್ತ ಸಹೋದರ ರಾಹುಲ್ ವಿರುದ್ಧ ಜಗಜೀವನ್ ರಾವ್‌ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಅಷ್ಟೇ ಅಲ್ಲದೆ ನಟಿಗೆ  ಹಣ ನೀಡುವಂತೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದರಂತೆ. ಹಣ ನೀಡದಿದ್ದರೆ ಅತ್ಯಾಚಾರ ಮಾಡಿರುವ ವಿಡಿಯೋಗಳನ್ನು ಯುಟ್ಯೂಬ್‌ನಲ್ಲಿ ಲೀಕ್ ಮಾಡುವುದಾಗಿ ಹೆದರಿಸಿದ್ದಾರೆ.  ಈಗಾಗಲೇ ನಟಿಯಿಂದ ಮೋಹಿತ್ 20 ಲಕ್ಷ ಹಣ ಪಡೆದುಕೊಂಡಿದ್ದಾರೆ. 

ಕಿರುತೆರೆ ನಟಿ ನವ್ಯಾಸ್ವಾಮಿಯಿಂದ ಸಹ ನಟ ರವಿಕೃಷ್ಣಗೂ ಕೊರೋನಾ ಪಾಸಿಟಿವ್! 

ಕಳೆದ ವರ್ಷ 2019 ಜನವರಿಯಲ್ಲಿ ಗೋವಾಗೆ ಕರೆದುಕೊಂಡು ಕಂಪನಿ ಅಂಬಾಸಿಡರ್ ಮಾಡುವುದಾಗಿ ಫೋಟೋ ಶೂಟ್ ಮಾಡಿಸಿಕೊಂಡು ಹಣ ನೀಡದೆ ಕೆಲಸ ಮಾಡಿಸಿಕೊಂಡಿದ್ದಾರೆ. ಇದರ ಜೊತೆ ಇತ್ತೀಚಿಗೆ ಕಂಪನಿ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಮತ್ತೆ 1 ಲಕ್ಷ ಸಾಲ ಪಡೆದಿದ್ದಾರೆ. ಮೋಹಿತ್ ಮಾತ್ರವಲ್ಲದೆ ಆತನ ಪೋಷಕರು ಕೂಡ ಪರಾರಿ ಆಗಿದ್ದು  ಪೊಲೀಸರು ತನಿಖೆ ಆರಂಭಿಸಿದ್ದಾರೆ.