ಚೀನಾಗೆ ಸದ್ದಿಲ್ಲದೆ ಹೊಡೆತ ನೀಡಿದ ಹೀರೋ ಸೈಕಲ್; ಕಂಗಾಲಾದ ಡ್ರ್ಯಾಗನ್ ರಾಷ್ಟ್ರ!
ಚೀನಾ ಕಂತ್ರಿ ಬುದ್ದಿಗೆ ಭಾರತ ಸರಿಯಾಗಿ ತಿರುಗೇಟು ನೀಡಿದೆ. ಗಡಿಯಲ್ಲಿ ಭಾರತೀಯ ಸೇನೆ ನೀಡಿದ ಏಟಿಗೆ ಚೀನಾ ಪತರಗುಟ್ಟಿದೆ. ಇನ್ನು ಕೇಂದ್ರ ಸರ್ಕಾರ 59 ಚೀನಾ ಆ್ಯಪ್ ಬ್ಯಾನ್ ಮಾಡಿ ಶಾಕ್ ನೀಡಿತ್ತು. ನಾಗರೀಕರು ಚೀನಾ ವಸ್ತು ಬಹಿಷ್ಕರಿಸಿ ಎದಿರೇಟು ನೀಡಿದ್ದಾರೆ. ಇದೀಗ ಭಾರತದ ಹೀರೋ ಕಂಪನಿ ನೀಡಿದ ಹೊಡೆತಕ್ಕೆ ಚೀನಾ ಕಂಗಾಲಾಗಿದೆ.
ನವದೆಹಲಿ(ಜು.05): ಗಡಿ ಸಂಘರ್ಷ ಆರಂಭಿಸಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಚೀನಾ ತಂತ್ರ ಈ ರೀತಿ ತಿರುಗುಬಾಣವಾಗುತ್ತದೆ ಅನ್ನೋ ಸೂಚನೆ ಡ್ರ್ಯಾಗನ್ ರಾಷ್ಟ್ರಕ್ಕೆ ಇರಲಿಲ್ಲ. ಭಾರತೀಯ ಸೇನೆ, ಕೇಂದ್ರ ಸರ್ಕಾರ, ಭಾರತೀಯ ಪ್ರಜೆಗಳು, ಭಾರತೀಯ ಕಂಪನಿಗಳು ಚೀನಾಗೆ ಒಂದರ ಮೇಲೊಂದರಂತೆ ಹೊಡೆತ ನೀಡುತ್ತಿದೆ. ಇದೀಗ ಭಾರತದ ಮೋಟಾರ್‌ಸೈಕಲ್ ಹಾಗೂ ಬೈಸಿಕಲ್ ತಯಾರಿಕಾ ಹೀರೋ ಕಂಪನಿ ಚೀನಾಗೆ ಸದ್ದಿಲ್ಲದೆ ಪೆಟ್ಟು ನೀಡಿದೆ.
ದಿನ ನಿತ್ಯ ಬಳಕೆ ಹಾಗೂ ಲಾಂಗ್ ರೈಡ್; ಇಲ್ಲಿದೆ ಮೂರು ಕಡಿಮೆ ಬೆಲೆಯ ಬೈಕ್!
ಹೀರೋ ಸೈಕಲ್ ಭಾರತದಲ್ಲಿ ಮಾತ್ರವಲ್ಲ ಏಷ್ಯಾದಲ್ಲೇ ಪ್ರಸಿದ್ದಿಯಾಗಿದೆ. ಸೈಕಲ್ ಉತ್ಪಾದನೆ ಮಾಡುತ್ತಿರುವ ಹೀರೋ, ಬಿಡಿ ಭಾಗಕ್ಕಾಗಿ ಚೀನಾ ಆಶ್ರಯಿಸಿತ್ತು. ಕಡಿಮೆ ಬೆಲೆಯಲ್ಲಿ ಚೀನಾದ ಬಿಡಿ ಭಾಗಗಳು ಭಾರತಕ್ಕೆ ಪೂರೈಕೆಯಾಗುತ್ತಿತ್ತು. ಸೈಕಲ್ ಉತ್ವಾದನೆ ವೇಗ ಹೆಚ್ಚಿಸಲು ಹೀರೋ ಕಂಪನಿ ಚೀನಾದ ಬಿಡಿ ಭಾಗ ಕಂಪನಿಯೊಂದಿಗೆ 900 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿತ್ತು. ಆದರೆ ಚೀನಾ ನರಿ ಬುದ್ದಿಯಿಂದ ಇದೀಗ ಹೀರೋ ಒಪ್ಪಂದ ರದ್ದು ಮಾಡಿದೆ.
ಆಕರ್ಷಕ ಹಾಗೂ ದಕ್ಷತೆಯ ಹೀರೋ Xtreme 160R ಬೈಕ್ ಬಿಡುಗಡೆ!..
ಸದ್ಯ ಭಾರತದಲ್ಲಿ ಬಹುತೇಕ ವಸ್ತುಗಳು ನಿರ್ಮಾಣವಾಗುತ್ತಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್ ಸೇರಿದಂತೆ ಬಹುತೇಗ ಬಿಡಿ ಭಾಗಗಳು ಭಾರತದಲ್ಲೇ ತಯಾರಾಗುತ್ತಿದೆ. ಹೀಗಿರುವಾಗ ಸೈಕಲ್ ಬಿಡಿ ಭಾಗವೂ ಭಾರತದಲ್ಲೇ ನಿರ್ಮಾಣ ಮಾಡಲಿದ್ದೇವೆ. ಹೀರೋ ಕಂಪನಿ ಚೀನಾ ವಸ್ತುಗಳನ್ನು ಬಹಿಷ್ಕರಿಸುತ್ತಿದೆ ಎಂದು ಹೀರೋ ಕಂಪನಿ ಚೇರ್ಮೆನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಮುಂಜಾಲ್ ಹೇಳಿದ್ದಾರೆ.
ಹೀರೋ ಕಂಪನಿ ಇದೀಗ ಯುರೋಪ್ ದೇಶದಲ್ಲಿ ಘಟಕ ಸ್ಥಾಪಿಸಲು ಪ್ಲಾನ್ ಮಾಡಿದೆ. ಚೀನಾ ಅತೀ ಬುದ್ದಿ ತೋರಿಸಿ ಇದೀಗ ಎಲ್ಲಾ ಕ್ಷೇತ್ರದಿಂದ ಹೊಡೆತ ತಿನ್ನುತ್ತಿದೆ. ಇದೇ ಕಾರಣಕ್ಕೆ ಭಾರತ ಈಗ 1971ರ ದೇಶವಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚೀನಾಗೆ ತಿರುಗೇಟು ನೀಡಿದ್ದನ್ನು ಸ್ಮರಿಸಿಕೊಳ್ಳಬಹುದು