Asianet Suvarna News Asianet Suvarna News

ಕರ್ನಾಟಕ ಲೋಕಸಭಾ ಚುನಾವಣೆ 2024, ರಾಜ್ಯದಲ್ಲಿ ಶೇ.69 ರಷ್ಚು ಮತದಾನ, ಬೆಂಗಳೂರಲ್ಲಿ ನಿರಾಸಕ್ತಿ!

2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಹೋಲಿಸಿದರೆ, ಈ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಇಳಿಕೆಯಾಗಿದೆ. ಮೊದಲ ಹಂತದ 14 ಕ್ಷೇತ್ರಗಳಲ್ಲಿ ಎಷ್ಟೇ ಪ್ರಮಾಣದಲ್ಲಿ ಮತದಾನವಾಗಿದೆ?
 

Karnataka Lok Sabha Elections 2024 voter turnout 69 percentage details gow
Author
First Published Apr 27, 2024, 12:12 AM IST | Last Updated Apr 27, 2024, 12:12 AM IST

ಬೆಂಗಳೂರು (ಏ.26):  ಲೋಕಸಭೆ ಚುನಾವಣೆ 2024 ರ ಎರಡನೇ ಹಂತದ 13 ರಾಜ್ಯಗಳ 88 ಸ್ಥಾನಗಳಿಗೆ ನಡೆದ ಮತದಾನ ಮುಕ್ತಾಯವಾಗಿದೆ. ಕರ್ನಾಟಕದ ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ 69.23ರಷ್ಟು ಮತದಾನವಾಗಿದೆ. ಒಟ್ಟು 247 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಬೂತ್ ಗಳ ನಂಬರ್ ಗಳಿಗೆ ಅನುಗುಣವಾಗಿ EVM ಮಷಿನ್ ಗಳು ಸ್ಟ್ರಾಂಗ್ ರೂಂ ಸೇರಿದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಂದು ಸ್ಟ್ರಾಂಗ್ ರೂಮ್ ಮಾಡಲಾಗಿದೆ. ಪ್ರತಿ ಸ್ಟ್ರಾಂಗ್ ರೂಂ ಗೆ ಸಿಸಿಟಿವಿ ಕಣ್ಗಾವಲು ಇರಲಿದೆ. 

ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು, ಜೂನ್ 4ರಂದು ಯಾರು ಆಯ್ಕೆಯಾಗಿದ್ದಾರೆಂದು ತಿಳಿದುಬರಲಿದೆ.

2024 ಮತದಾನ ಪ್ರಮಾಣ
ಬೆಂಗಳೂರು ಕೇಂದ್ರ - 52.81%
ಬೆಂಗಳೂರು ಉತ್ತರ - 54.42%
ಬೆಂಗಳೂರು ದಕ್ಷಿಣ - 52.15.% 

2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಹೋಲಿಸಿದರೆ, ಬೆಂಗಳೂರಿನಲ್ಲಿ 0.80% ಕಡಿಮೆ ಮತದಾನವಾಗಿದೆ. 14 ಕ್ಷೇತ್ರಗಳ ಒಟ್ಟಾರೆ ಮತದಾನದಲ್ಲಿ ಕೊಂಚ ಏರಿಕೆಯಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಹಂತದಲ್ಲಿ ಶೇಕಡಾ 68.96% ರಷ್ಟು ಮತದಾನವಾಗಿತ್ತು. ಈ ಬಾರಿ ಶೇಕಡಾ 69.23ರಷ್ಟು ಮತದಾನವಾಗಿದೆ.

2024ರ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣ(ಮೊದಲ ಹಂತದ 14 ಕ್ಷೇತ್ರ) Tentative
ಉಡುಪಿ ಚಿಕ್ಕಮಗಳೂರು :ಶೇ. 76.06
ಹಾಸನ: ಶೇ. 77.51
ದಕ್ಷಿಣ ಕನ್ನಡ: ಶೇ. 77.43
ಚಿತ್ರದುರ್ಗ:ಶೇ 73.11
ತುಮಕೂರು:ಶೇ  77.70
ಮಂಡ್ಯ: ಶೇ 81.48
ಮೈಸೂರು: ಶೇ 70.45
ಚಾಮರಾಜನಗರ: ಶೇ.76.59
ಬೆಂಗಳೂರು ಗ್ರಾಮಾಂತರ: ಶೇ.67.29
ಬೆಂಗಳೂರು ಉತ್ತರ:ಶೇ.54.42
ಬೆಂಗಳೂರು ಸೆಂಟ್ರಲ್: ಶೇ.52.81
ಬೆಂಗಳೂರು ದಕ್ಷಿಣ: ಶೇ.53.15
ಚಿಕ್ಕಬಳ್ಳಾಪುರ: ಶೇ.76.82
ಕೋಲಾರ: ಶೇ.78.07

ಸಂಜೆ 5 ಗಂಟೆ ವರೆಗೆ ಉಡುಪಿ ಚಿಕ್ಕಮಗಳೂರು ಶೇ. 72.13, ಹಾಸನ ಶೇ. 77.42, ದಕ್ಷಿಣ ಕನ್ನಡ ಶೇ. 71.83, ಚಿತ್ರದುರ್ಗ ಶೇ. 67.00, ತುಮಕೂರು ಶೇ. 72.10, ಮಂಡ್ಯ ಶೇ. 74.87, ಮೈಸೂರು ಶೇ. 65.85, ಚಾಮರಾಜನಗರ ಶೇ. 69.60, ಬೆಂಗಳೂರು ಗ್ರಾಮಾಂತರ ಶೇ. 61.78, ಬೆಂಗಳೂರು ಉತ್ತರ ಶೇ. 50.04, ಬೆಂಗಳೂರು ಕೇಂದ್ರ ಶೇ. 48.61, ಬೆಂಗಳೂರು ದಕ್ಷಿಣ ಶೇ. 49.37, ಚಿಕ್ಕಬಳ್ಳಾಪುರ ಶೇ. 70.97 ಹಾಗೂ ಕೋಲಾರ ಶೇ. 71.26ರಷ್ಟು ಮತದಾನವಾಗಿದೆ.

ಕರ್ನಾಟಕದ 28 ಸ್ಥಾನಗಳಲ್ಲಿ 14 ಸ್ಥಾನಗಳಿಗೆ ಮೊದಲ ಹಂತದ ಮತದಾನವಾಗಿದ್ದು, ಒಟ್ಟು ಶೇಕಡಾ 69.23ರಷ್ಟು ಮತದಾನವಾಗಿದೆ. 2019ರಲ್ಲಿ ಮೊದಲ ಹಂತದಲ್ಲಿ 68.96% ಮತದಾನವಾಗಿತ್ತು. 

ಆಸ್ಪತ್ರೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ ನಾರಾಯಣ ಮೂರ್ತಿ!

2019ರ ಲೋಕಸಭಾ ಚುನಾವಣೆಯ ಶೇಕಡಾವಾರು ಮತದಾನದ ಮಾಹಿತಿ ಇಂತಿದೆ.
ಲೋಕಸಭಾ ಕ್ಷೇತ್ರಗಳು (2019ರ ಶೇ.ಮತದಾನ)
ಉಡುಪಿ ಚಿಕ್ಕಮಗಳೂರು: 76.07%
ಹಾಸನ: 77.35%
ದಕ್ಷಿಣ ಕನ್ನಡ: 77.99%
ಚಿತ್ರದುರ್ಗ: 70.80%
ತುಮಕೂರು: 77.43%
ಮಂಡ್ಯ: 80.59%
ಮೈಸೂರು: 69.51%
ಚಾಮರಾಜನಗರ: 75.35%
ಬೆಂಗಳೂರು ಗ್ರಾಮಾಂತರ: 64.98%
ಬೆಂಗಳೂರು ಉತ್ತರ: 54.76%
ಬೆಂಗಳೂರು ಕೇಂದ್ರ: 54.32% 
ಬೆಂಗಳೂರು ದಕ್ಷಿಣ: 53.70%
ಚಿಕ್ಕಬಳ್ಳಾಪುರ: 76.74%
ಕೋಲಾರ: 77.25%

ರಾಜ್ಯದ ಮೊದಲ ಹಂತದ ಚುನಾವಣೆ ಏಪ್ರಿಲ್ 26ರಂದು ನಡೆದಿದೆ. ಮತ್ತು ಎರಡನೇ ಹಂತದ ಚುನಾವಣೆ ಮೇ 7ರಂದು ನಡೆಯಲಿದೆ. ಫಲಿತಾಂಶ ಜೂನ್ 4ರಂದು ಹೊರಬೀಳಲಿದೆ.  2019ರಲ್ಲಿ ಮಂಡ್ಯದಲ್ಲಿ ಅತಿಹೆಚ್ಚು ಶೇ. 80.59, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತಿಕಮ್ಮಿ ಶೇ. 53.70 ಮತದಾನವಾಗಿತ್ತು.
 

Latest Videos
Follow Us:
Download App:
  • android
  • ios