Asianet Suvarna News Asianet Suvarna News

ರಸ್ತೆ ಅಪಘಾತ: ಗಾಯಾಳು ಯುವಕನನ್ನ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್!

ಯಲ್ಲಾಪುರ-ಶಿರಸಿ ರಸ್ತೆಯಲ್ಲಿ  ಬೈಕ್ ಸ್ಕಿಡ್ ಆಗಿ ಬಿದ್ದಿದ್ದ ಗಾಯಾಳುವನ್ನು ತನ್ನದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಉತ್ತರಕನ್ನಡ  ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ.

Lok sabha election 2024 in Karnataka Uttara kannada congress candidate dr anjali nimbalkar showed humanity rav
Author
First Published Apr 27, 2024, 12:27 AM IST | Last Updated Apr 27, 2024, 12:29 AM IST

ಕಾರವಾರ, ಉತ್ತರಕನ್ನಡ (ಏ.27): ಯಲ್ಲಾಪುರ-ಶಿರಸಿ ರಸ್ತೆಯಲ್ಲಿ  ಬೈಕ್ ಸ್ಕಿಡ್ ಆಗಿ ಬಿದ್ದಿದ್ದ ಗಾಯಾಳುವನ್ನು ತನ್ನದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಉತ್ತರಕನ್ನಡ  ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ.

ವಿನಾಯಕ್ ಶೆಟ್ಟರ್,  ಗಾಯಗೊಂಡ ಬೈಕ್ ಸವಾರ. ಬೈಕ್ ಸ್ಕಿಡ್ ಆಗಿ ಯುವಕ ರಸ್ತೆಗೆ ಬಿದ್ದ ವೇಳೆಯೇ ಹಳಿಯಾಳದಿಂದ ಯಲ್ಲಾಪುರದ ಕಡೆಗೆ ಹೊರಟಿದ್ದ ಡಾ. ಅಂಜಲಿ ನಿಂಬಾಳ್ಕರ್ ಅಪಘಾತದಿಂದ ಬಿದ್ದ ಯುವಕನನ್ನು ಗಮನಿಸಿ ಕಾರು ನಿಲ್ಲಿಸಿದ್ದಾರೆ. ತಕ್ಷಣ ಗಾಯಗೊಂಡ ಯುವಕ ಆರೋಗ್ಯ ವಿಚಾರಿಸಿ ತನ್ನದೇ ಕಾರಿನಲ್ಲಿ ಶಿರಸಿಯ ಪಂಡಿತ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರು ಆಗಿರುವ ಅಂಜಲಿ ನಿಂಬಾಳ್ಕರ್ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡುವ ವೇಳೆ ವೈದ್ಯರಿಗೆ ಸಹಾಯ ಮಾಡಿದ್ದಾರೆ.

ಅಂಜಲಿ ನಿಂಬಾಳ್ಕರ್ ಸಮಯಪ್ರಜ್ಞೆ, ಮಾನವೀಯತೆ ಮೆಚ್ಚುಗೆ ವ್ಯಕ್ತವಾಗಿದೆ.

ರೈತರು, ಬಡವರ ಮಕ್ಕಳು ಉನ್ನತ ಹುದ್ದೆಗೆ ಹೋಗಲು ಕಾಂಗ್ರೆಸ್‌ಗೆ ಮತ ಹಾಕಿ: ಅಂಜಲಿ‌ ನಿಂಬಾಳ್ಕರ್

Latest Videos
Follow Us:
Download App:
  • android
  • ios