ಮೂಲತಃ ಮೈಸೂರಿನವರಾದ ನವ್ಯಾ ಸ್ವಾಮಿ ತಲುಗು ಕಿರುತೆರೆ ನಟಿ ಹಾಗೂ ಮಾಡಲ್. ಲಾಕ್‌ಡೌನ್‌ ಸಡಿಲಿಕೆ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡ ನವ್ಯಾ ಅವರಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿತ್ತು. ಯಾವುದೇ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳದೇ ಪಾಸಿಟಿವ್ ಬಂದಿರುವ ಕಾರಣ ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಸಹ ಕಲಾವಿರು, ತಂತ್ರಜ್ಞರಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು. 

ನಟಿ, ನಿರೂಪಕಿ ನವ್ಯಾ ಸ್ವಾಮಿ ನಿಜಕ್ಕೂ ಸಿಂಗಲ್ಲಾ?

ಇದರ ಬೆನ್ನಲ್ಲೇ  ಧಾರಾವಾಹಿಯಲ್ಲಿ ನವ್ಯಾಗೆ ಜೋಡಿಯಾಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟ ರವಿಕೃಷ್ಣ ಅವರು ಕೂಡ ಪರೀಕ್ಷೆ ಮಾಡಿಸಿಕೊಂಡ ನಂತರ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ.  ಈ ಬಗ್ಗೆ ಸ್ವತಃ ರವಿಕೃಷ್ಣ ಸ್ಪಷ್ಟನೆ ನೀಡಿದ್ದಾರೆ.

ರವಿಕೃಷ್ಣ ಪೋಸ್ಟ್‌:

'ಎಲ್ಲರಿಗೂ ನಮಸ್ಕಾರ. ನಿಮ್ಮೊಟ್ಟಿಗೆ ಒಂದು ವಿಚಾರವನ್ನು ಹಂಚಿಕೊಳ್ಳಬೇಕು. ನನಗೆ ಕೊರೋನಾ ಪಾಸಿಟಿವ್ ಎಂದು ತಿಳಿದುಬಂದಿದೆ.  ಈಗಾಗಲೇ ಮೂರು ದಿನಗಳಿಂದ ನಾನು ಐಸೋಲೇಟ್‌ ಆಗಿರುವೆ.ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಆರೋಗ್ಯವಾಗಿರುವೆ, ಯಾವುದೇ ರೀತಿಯ ಲಕ್ಷಣಗಳು ಕಂಡು ಬಂದಿಲ್ಲ. ನನಗೆ ಹೇಗೆ ಕೊರೊನಾ ಬಂತು  ಎಂಬುದರ ಬಗ್ಗೆ ಈಗ ಚಿಂತಿಸುತ್ತಾ ಕೂರುವುದಿಲ್ಲ. ಯಾರೆಲ್ಲಾ ಕೆಲ ದಿನಗಳಿಂದ ನನ್ನ ಸಂಪರ್ಕದಲ್ಲಿದ್ದರೋ ನೀವು ಕೂಡ ದಯವಿಟ್ಟು ಆರೋಗ್ಯದ ದೃಷ್ಟಿಯಲ್ಲಿ ಕೋವಿಡ್ ಟೆಸ್ಟ್‌ ಮಾಡಿಸಿಕೊಳ್ಳಿ. ಸ್ವಯಂ ಪ್ರೇರಿತರಾಗಿ ಐಸೋಲೇಟ್‌ ಆಗಿ. ಕೊರೋನಾ ಸೋಂಕಿತ ಬಗ್ಗೆ ತಪ್ಪಾಗಿ ಮಾತನಾಡುವ ಬದಲು ಅವರ ಪರ ನಿಂತುಕೊಳ್ಳಿ. ದಯವಿಟ್ಟು ನೆಗೆಟಿವಿಟ್ ಹರಡಿಸಬೇಡಿ, ನಾನು ಮಾನಸಿಕವಾಗಿ ಧೈರ್ಯವಾಗಿರಬೇಕು ಧೈರ್ಯವಾಗಿರುವೆ' ಎಂದು ನಟ ರವಿಕೃಷ್ಣ ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Rᴀᴠɪ ᴋʀɪsʜɴᴀ (@ravikrishna_official) on Jul 3, 2020 at 10:57am PDT

ಕುಸಿದು ಬಿದ್ದ ನವ್ಯಾ:

'ಕೊರೋನಾ ಪಾಸಿಟಿವ್ ಇರುವ ವಿಚಾರ ತಿಳಿಯುತ್ತಿದ್ದಂತೆ ಶೂಟಿಂಗ್ ಸೆಟ್‌ನಲ್ಲಿದ್ದ ನವ್ಯಾ ಕುಸಿದು ಬಿದ್ದರು. ಅವರ ಸಂಪರ್ಕದಲ್ಲಿದ ವ್ಯಕ್ತಿಗಳು ದೂರ ಹೋಗಲು ಪ್ರಾರಂಭಿಸಿದ್ದರು. ಇದರಿಂದ ನವ್ಯಾ ಅವರಿಗೆ ತುಂಬಾನೇ ನೋವು ತಂದಿತ್ತು. ಆ ಕ್ಷಣ ಅವರೊಟ್ಟಿಗೆ ನಾವು ಇರಬೇಕೆಂದು ನಿರ್ಮಾಪಕರು ಮತ್ತು ನಾನು ಇದ್ದೆ. ಈಗ ನಾನು ನವ್ಯಾ ಅವರನ್ನು ನೋಡಿ ಸ್ಟ್ರಾಂಗ್ ಆಗಲು ನಿರ್ಧರಿಸಿದೆ' ಎಂದು ರವಿಕೃಷ್ಣ ಹೇಳಿದ್ದಾರೆ.