Asianet Suvarna News Asianet Suvarna News

ಕಟ್ಟಡ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿಕೊಂಡ ಮಂಗಳೂರಿನ ಬಿಲ್ಡರ್!

ಮಂಗಳೂರಿನ ಬಿಲ್ಡರ್ ಪಶ್ಚಿಮ ಬಂಗಾಳದಿಂದ ಐವರು ಮೇಸ್ತ್ರಿಗಳನ್ನು ಮಂಗಳೂರಿಗೆ ತರೆಸಿದ್ದಾರೆ. ಈ ಲಾಕ್‌ಡೌನ್ ಸಮಯದಲ್ಲೂ ಕಟ್ಟಡ ಕೆಲಸಕ್ಕೆ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿಕೊಂಡಿರೋದು ವಿಶೇಷ. ಇಲ್ಲಿದೆ ವಿಡಿಯೋ

ಮಂಗಳೂರು(ಜು.05): ಮಂಗಳೂರಿನ ಬಿಲ್ಡರ್ ಪಶ್ಚಿಮ ಬಂಗಾಳದಿಂದ ಐವರು ಮೇಸ್ತ್ರಿಗಳನ್ನು ಮಂಗಳೂರಿಗೆ ತರೆಸಿದ್ದಾರೆ. ಈ ಲಾಕ್‌ಡೌನ್ ಸಮಯದಲ್ಲೂ ಕಟ್ಟಡ ಕೆಲಸಕ್ಕೆ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿಕೊಂಡಿರೋದು ವಿಶೇಷ. ಇಲ್ಲಿದೆ ವಿಡಿಯೋ

ಮಂಗಳೂರಿನ ಮೇರಿಯನ್ ಬಿಲ್ಡರ್ಸ್ ಮಾಲಕ ನವೀನ್ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತ ಹಿನ್ನೆಲೆ ಕೊಲ್ಕತ್ತಾ ಮೂಲಕ ಮಂಗಳೂರಿಗೆ ಬಂದ ಐವರು ಮೇಸ್ತ್ರಿಗಳನ್ನು ತರೆಸಿದ್ದಾರೆ.

ಶಾಸಕರ ನೆರವಿಂದ ದುರಸ್ತಿಯಾಯ್ತು ಬಡ ವೃದ್ಧೆಯ ಮನೆ..! ಹಳೆ ಮನೆಗೆ ಹೊಸ ಲುಕ್

ಲಾಕ್ ಡೌನ್ ವೇಳೆ ಕಳೆದ ಮಾರ್ಚ್ ನಲ್ಲಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಕಾರ್ಮಿಕರು ತಲಾ 7 ಸಾವಿರದಂತೆ 35 ಸಾವಿರ ರೂ. ವಿಮಾನ ಟಿಕೆಟ್‌ಗಾಗಿ ಖರ್ಚು ಮಾಡಿದ್ದಾರೆ.

ಐವರು ಕಾರ್ಮಿಕರಿಗೆ ಮಂಗಳೂರಿನಲ್ಲಿ ಕ್ವಾರೆಂಟೈನ್ ವ್ಯವಸ್ಥೆ ಮಾಡಿದ್ದು ಮಂಗಳೂರಿನಲ್ಲಿ ಸೂಕ್ತ ಕಟ್ಟಡ ಕಾರ್ಮಿಕರು ಮತ್ತು ಮೇಸ್ತಿಗಳ ಕೊರತೆ ಹಿನ್ನೆಲೆ ಅನ್ಯ ರಾಜ್ಯದ ಕಾರ್ಮಿಕರನ್ನೇ ಅವಲಂಬಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ 40 ಸಾವಿರದಷ್ಟು ಕಾರ್ಮಿಕರು ಬಿಹಾರ, ಝಾರ್ಖಂಡ್, ಪಶ್ಚಿಮ ಬಂಗಾಳಕ್ಕೆ ವಾಪಾಸ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಬಸ್ ವ್ಯವಸ್ಥೆ ಮಾಡಿ ಮಂಗಳೂರಿಗೆ ಕರೆಸಲು ಚಿಂತನೆ ನಡೆಸಲಾಗಿದೆ.

Video Top Stories