ವಾಷಿಂಗ್ಟನ್(ಜು.05): ದಕ್ಷಿಣ ಚೀನಾ ಸಮುದ್ರ ವಲಯದಲ್ಲಿ ಜು.1ರಿಂದ 5 ದಿನಗಳ ಕಾಲ ಚೀನಾ ಸಮರಾಭ್ಯಾಸ ಹಮ್ಮಿಕೊಂಡಿರುವ ಹೊತ್ತಿನಲ್ಲೇ, ಅದೇ ವಲಯಕ್ಕೆ ಅಮೆರಿಕ ತನ್ನ 2 ಅತ್ಯಾಧುನಿಕ ಯುದ್ಧ ನೌಕೆಗಳನ್ನು ಕಳುಹಿಸಿ ತಾನು ಕೂಡ ಸಮರಾಭ್ಯಾಸ ಆರಂಭಿಸಿದೆ. ದಕ್ಷಿಣ ಚೀನಾ ವಲಯದ ಮೇಲಿನ ಚೀನಾ ಹಕ್ಕು ಸ್ಥಾಪನೆಗೆ ಅಮೆರಿಕ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆಯಾದರೂ, ಭಾರತ- ಚೀನಾ ನಡುವಿನ ಗಡಿ ಬಿಕ್ಕಟ್ಟು ಸಮರದ ಆತಂಕ ಹುಟ್ಟುಹಾಕಿರುವಾಗಲೇ ನಡೆದಿರುವ ಈ ಬೆಳವಣಿಗೆ ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.

ಕೊರೋನಾ ಬಗ್ಗೆ WHOಗೂ ಹೇಳಿರಲಿಲ್ಲ ಕಪಟ ಚೀನಾ!

ದಕ್ಷಿಣ ಚೀನಾ ಸಮುದ್ರದ 1500 ಕಿ.ಮೀ ಪ್ರದೇಶದ ಪೈಕಿ ಶೇ.90ರಷ್ಟುತನ್ನದೆಂದು ಚೀನಾ ವಾದಿಸಿಕೊಂಡು ಬಂದಿದೆ. ಆದರೆ ಇಂಡೋ- ಪೆಸಿಫಿಕ್‌ ವಲಯದಲ್ಲಿ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಈ ಮಾರ್ಗದ ಮೇಲಿನ ಚೀನಾದ ಹಕ್ಕುಸ್ಥಾಪನೆಯ ಯತ್ನವನ್ನು ಅಮೆರಿಕ ಆರಂಭದಿಂದಲೂ ವಿರೋಧಿಸಿಕೊಂಡು ಬಂದಿದೆ. ಹೀಗಾಗಿ ಈ ವಲಯಕ್ಕೆ ಆಗಾಗ್ಗೆ ತನ್ನ ಯುದ್ಧ ನೌಕೆಗಳನ್ನು ಕಳುಹಿಸುವ ಮೂಲಕ ಚೀನಾಕ್ಕೆ ಸಡ್ಡು ಹೊಡೆಯುವ ಯತ್ನ ಮಾಡುತ್ತಲೇ ಇರುತ್ತದೆ.

ಇದೀಗ ತನ್ನ ಯುಎಸ್‌ಎಸ್‌ ರೊನಾಲ್ಡ್‌ ರೇಗನ್‌ ಮತ್ತು ಯುಎಸ್‌ಎಸ್‌ ನಿಮಿಟ್‌್ಜ ನೌಕೆಗಳನ್ನು ರವಾನಿಸಿ, ತಾನು ಕೂಡ ಸಮರಾಭ್ಯಾಸ ಆರಂಭಿಸಿದೆ.

ಬಂಧಿತರ ಕೂದಲಿಂದ ಚೀನಾ ತಯಾರಿಸಿದ್ದ 13 ಟನ್‌ ಉತ್ಪನ್ನ ವಶ!

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಡ್ಮಿರಲ್‌ ಜಾಜ್‌ರ್‍ ಎಂ.ವಿಕಾಫ್‌, ‘ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆ ಕಾಪಾಡುವ ಕುರಿತು ಪಾಲುದಾರರು ಮತ್ತು ಸ್ನೇಹಿತರಿಗೆ ನಮ್ಮ ಬದ್ಧತೆಯ ಕುರಿತು ಖಚಿತ ಸಂದೇಶ ನೀಡುವುದೇ ಈ ಅಭ್ಯಾಸ’ದ ಮೂಲ ಉದ್ದೇಶ ಎಂದಿದ್ದಾರೆ.

ಅಮೆರಿಕದ ಇಂಥದ್ದೊಂದು ಹೇಳಿಕೆ ದಕ್ಷಿಣ ಚೀನಾ ಸಮುದ್ರದ ವಲಯದ ಜೊತೆಗೆ ಆ ವಲಯದ ತನ್ನ ಎಲ್ಲಾ ಮಿತ್ರರ ಸಂಕಷ್ಟಗಳಿಗೆ ನೆರವಾಗಲು ತಾನು ಸಿದ್ಧ ಎಂಬ ಸಂದೇಶವನ್ನು ಚೀನಾಕ್ಕೆ ರವಾನಿಸುವುದೇ ಆಗಿದೆ ಎಂದು ಮೂಲಗಳು ತಿಳಿಸಿವೆ.