Asianet Suvarna News Asianet Suvarna News

ರಾಹುಲ್ ಗಾಂಧಿ ಬುದ್ಧಿ ಮೆದುಳಲ್ಲಿಲ್ಲ, ತೊಡೆಯಲ್ಲಿದೆ ಇಂಥವನಿಗೆ ದೇಶ ಕೊಡ್ತೀರಾ? ಯತ್ನಾಳ್ ವಾಗ್ದಾಳಿ

ರಾಹುಲ್ ಗಾಂಧಿಗೆ ಬುದ್ಧಿ ಮೆದುಳಿನಲ್ಲಿಲ್ಲ, ತೊಡೆಯಲ್ಲಿದೆ. ನಮ್ಮ ದೇಶ ಆಳಲು ರಾಹುಲ್ ಗಾಂಧಿ ಸಮರ್ಥನಿದ್ದಾನಾ? ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಹುಲ್ ಗಾಂಧಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

Lok sabha election 2024 in Karnataka Vijayapur MLA Basangowda patil yatnal controversy stats about rahul gandhi rav
Author
First Published Apr 26, 2024, 11:49 PM IST | Last Updated Apr 26, 2024, 11:49 PM IST

ಹುಬ್ಬಳ್ಳಿ, (ಏ.26): ರಾಹುಲ್ ಗಾಂಧಿಗೆ ಬುದ್ಧಿ ಮೆದುಳಿನಲ್ಲಿಲ್ಲ, ತೊಡೆಯಲ್ಲಿದೆ. ನಮ್ಮ ದೇಶ ಆಳಲು ರಾಹುಲ್ ಗಾಂಧಿ ಸಮರ್ಥನಿದ್ದಾನಾ? ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಹುಲ್ ಗಾಂಧಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಇಂದು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಡೆದ ಪ್ರಲ್ಹಾದ್ ಜೋಶಿ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್, ಅವನು ಏನು ಮಾತಾಡ್ತಾನೆ ಅಂತಾ ಅವನನಿಗೆ ಗೊತ್ತಿಲ್ಲ. ಮೊನ್ನೆ ರಾಣೇಬೆನ್ನೂರು ಕಡೆ ಬಂದಿದ್ದ. ಈ ವೇಳೆ ಹುಚ್ಚರಾದ ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಅವನಿಗೆ ಮೆಣಸಿನಕಾಯಿ ತೋರಿಸಿದ್ದರು. ಆಗ ರಾಹುಲ್ ಗಾಂಧಿ ಎಲ್ರೂ ಯಾಕೆ ಕೆಂಪು ಮೆಣಸಿನಕಾಯಿ ಬೆಳೆದಿದ್ದೀರಿ ಅಂತಾ ಕೇಳಿದ್ನಂತೆ ಇಂತವನಿಗೆ ನೀವು ದೇಶ ಕೊಡ್ತೀರಾ ಎಂದು ವ್ಯಂಗ್ಯ ಮಾಡಿದರು.. 

ಅನ್ನ ಕೊಟ್ಟ ಕಾಂಗ್ರೆಸ್ ಬೇಕಾ? ಬಡವರ ಹೊಟ್ಟೆ ಮೇಲೆ ಹೊಡೆದ ಬಿಜೆಪಿ ಬೇಕಾ? : ಸಿದ್ದರಾಮಯ್ಯ

ಈ ಚುನಾವಣೆಯಲ್ಲಿ ರಾಹುಲ್ ಗಾಂಧಿ ಗೆದ್ರೆ ಬಟಾಟೆಯಿಂದ ಬಂಗಾರ ಬರುತ್ತದೆ. ಇದನ್ನ ರಾಹುಲ್ ಗಾಂಧಿನೇ ಹೇಳಿದ್ದರು. ಅಲ್ಲಾ ಬಟಾಟೆಯಿಂದ ಬಂಗಾರವಂಗಿದ್ರ ನಮ್ಮ ದೇಶದಲ್ಲಿ ಯಾಕ ಬಡತನ ಇರ್ತಿತ್ತು ರಾಹುಲ್ಲಾ ಎಂದು ಹಾಸ್ಯ ಚಟಾಕಿ ಹಾರಿಸಿದ ಯತ್ನಾಳ್. ಭಾಷಣದುದ್ದಕ್ಕೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದ್ದು, ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ತನ್ನ ಭದ್ರಕೋಟೆಯಲ್ಲೂ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುವ ವಿಶ್ವಾಸದಲ್ಲಿ‌ ಇಲ್ಲ - ಸಚಿವ ದಿನೇಶ್ ಗುಂಡೂರಾವ್

Latest Videos
Follow Us:
Download App:
  • android
  • ios