ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್' ಸಿನಿಮಾ ಇನ್ನೂ ತನ್ನ ಪ್ರದರ್ಶನವನ್ನು ಮುಂದುವರಿಸಿದೆಯೇ? ಸದ್ಯದ ಮಾಹಿತಿ ಪ್ರಕಾರ, ಈ ಚಿತ್ರವು ಭಾರತೀಯ ಮಾರುಕಟ್ಟೆಯಲ್ಲಿ ಗಳಿಸಿದ್ದೆಷ್ಟು? ವಿಶ್ವ ಮಾರುಕಟ್ಟೆ ಕಲೆಕ್ಷನ್ ಎಷ್ಟು? ಈ ಸ್ಟೋರಿ ನೋಡಿ..

ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಆ್ಯಕ್ಷನ್ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ವಿಶ್ವದಾದ್ಯಂತ ಬಿಡುಗಡೆ ಆಗಿ ಭಾರೀ ಸಂಚಲನ ಸೃಷ್ಟಿಸಿದ್ದು ಗೊತ್ತೇ ಇದೆ. 26 ಆಗಸ್ಟ್ 2026ರಂದು ಬಿಡುಗಡೆಯಾಗಿ ಉತ್ತಮ ಓಪನಿಂಗ್ ಪಡೆದಿದ್ದ ಟಾಕ್ಸಿಕ್ ಸಿನಿಮಾ, ಬಳಿಕ ಮಿಶ್ರ ಪ್ರತಿಕ್ರಿಯೆ ಪಡೆದು ಬಾಕ್ಸ್ ಆಫೀಸ್‌ನಲ್ಲಿ ನಿಧಾನಗತಿ ಪಡೆದುಕೊಂಡಿದ್ದು ಇಡೀ ಜಗತ್ತಿಗೇ ಗೊತ್ತಿದೆ. ಗೊತ್ತಿರದ ಸಂಗತಿ ಎಂದರೆ, ಇನ್ನೂ ಟಾಕ್ಸಿಕ್ ಸಿನಿಮಾ ಕೆಲವು ಕಡೆಗಳಲ್ಲಿ ಪ್ರದರ್ಶನ ಆಗುತ್ತಿದೆಯೇ? ಸದ್ಯಕ್ಕೆ ಈ ಸಿನಿಮಾದ ಕಲೆಕ್ಷನ್ ಎಷ್ಟಾಗಿದೆ? ಈ ಸ್ಟೋರಿ ನೋಡಿ..

ಬಿಡುಗಡೆಯಾದ ಮೊದಲ ದಿನ ಬೆಳ್ಳಿಪರದೆಯ ಮೇಲೆ ಹೊಸ ಸಂಚಲನ ಸೃಷ್ಟಿಸಿದ್ದ ಟಾಕ್ಸಿಕ್, ನಟ ಯಶ್ ಅವರ ಮಾಸ್ ಅವತಾರ ಹಾಗೂ ವಿಭಿನ್ನ ಮೇಕಿಂಗ್ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಈ ಸಿನಿಮಾ ಅಂದುಕೊಂಡಷ್ಟು ಜನಮೆಚ್ಚುಗೆ ಪಡೆಯಲು ಹಾಗೂ ಗಳಿಕೆ ಮಾಡಲು ಸಾಧ್ಯವಾಗಲಿಲ್ಲ ಎಂಬುದೂ ಅಷ್ಟೇ ಸತ್ಯ ಹಾಗೂ ಸೀಕ್ರೆಟ್ ಸಂಗತಿಯೇನಲ್ಲ. ಆದರೆ, ಈ ಸಿನಿಮಾ ಈಗಲೂ ಕೆಲವು ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ.. ಇದು ಸತ್ಯ!

ಇನ್ನೂ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಹೇಳೋದಾದರೆ, ಈ ಸಿನಿಮಾದ ನಿರ್ಮಾಪಕರು ಅಧಿಕೃತವಾಗಿ ಸಿನಿಮಾದ ಕಲೆಕ್ಷನ್ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಆದರೆ, ಕೆಲವು ವರದಿಗಳಲ್ಲು ಆಧರಿಸಿದ ಗಳಿಕೆ ಸುದ್ದಿ ಮುಂದಿದೆ ನೋಡಿ..

ಸ್ಯಾಕ್ನಿಲ್ಕ್ ವರದಿಯ ಪ್ರಕಾರ- ಟಾಕ್ಸಿಕ್ ಸಿನಿಮಾದ ಗಳಿಕೆ 300ಕೋಟಿಗೂ ಅಧಿಕ...

ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯ ಪ್ರಕಾರ, 26 ಆಗಸ್ಟ್ 2026 ರಂದು ತೆರೆಕಂಡ ಟಾಕ್ಸಿಕ್ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಈವರೆಗೆ ₹333.45 ಕೋಟಿಗೂ ಅಧಿಕ ಗಳಿಕೆ ಮಾಡಿದೆ.

ಇತರ ವರದಿಯನ್ನು ಆಧರಿಸಿದ ಅಂಕಿಅಂಶಗಳು-

ವಿಶ್ವದಾದ್ಯಂತ ಒಟ್ಟು ಕಲೆಕ್ಷನ್: ₹334.50 ಕೋಟಿ

ಭಾರತದ ಒಟ್ಟು ಕಲೆಕ್ಷನ್: ₹290.64 ಕೋಟಿ

ಹಿಂದಿ ಬೆಲ್ಟ್ ಗಳಿಕೆ: ಸುಮಾರು ₹149 ಕೋಟಿ.

ವಿದೇಶಿ ಗಳಿಕೆ: ₹44.00 ಕೋಟಿ

ಆದರೆ, ಮತ್ತೊಂದು ವರದಿ ಪ್ರಕಾರ, ಟಾಕ್ಸಿಕ್ ಸಿನಿಮಾದ ಗಳಿಕೆ 341.39 ಕೋಟಿ ರೂ.

ಈ ಚಿತ್ರವು ಭಾರತದಲ್ಲಿ ಒಟ್ಟು 1,54,613 ಶೋಗಳ ಪ್ರದರ್ಶನ ಕಾಣುವ ಮೂಲಕ ಇನ್ನೂ ತನ್ನ ಪ್ರದರ್ಶನವನ್ನು ಕೆಲವು ಕಡೆಗಳಲ್ಲಿ ಮುಂದುವರಿಸಿದೆ. ಸದ್ಯದ ಮಾಹಿತಿ ಪ್ರಕಾರ, ಈ ಚಿತ್ರವು ಭಾರತೀಯ ಮಾರುಕಟ್ಟೆಯಲ್ಲಿ ₹290 ಕೋಟಿ ನಿವ್ವಳ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ ಎಂಬ ವರದಿ ಇದೆ.

ಸ್ವಾತಂತ್ರ್ಯೋತ್ತರ ಗೋವಾದ ಹಿನ್ನೆಲೆಯಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಕಥಾಹಂದರವನ್ನು ಹೊಂದಿರುವ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್, ವಿವೇಕ್ ಒಬೆರಾಯ್ ಹಾಗೂ ಸುದೇವ್ ನಾಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಒಟ್ಟಿನಲ್ಲಿ, ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸದ್ಯ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ಸೆಪ್ಟೆಂಬರ್ 25ರಂದು ಜೀ5 (ZEE5) ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ನಿರ್ಮಾಪಕರ ಕಡೆಯಿಂದ ಇನ್ನೂ ಈ ಚಿತ್ರದ ಗಳಿಕೆ ಬಗ್ಗೆ ಯಾವುದೇ ಅಧಿಕೃತ ಬಹಿರಂಗ ಹೇಳಿಕೆ ಬಂದಿಲ್ಲ ಎಂಬುದನ್ನು ಗಮನಿಸಬೇಕು.