MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • News
  • ಸ್ವಂತ 'ಐಲ್ಯಾಂಡ್' ಹೊಂದಿರೋ ಈ ನಟಿ ಕನ್ನಡದಲ್ಲೂ ನಟಿಸಿದ್ದಾರೆ.. ಈಕೆಯ ಒಟ್ಟೂ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ!

ಸ್ವಂತ 'ಐಲ್ಯಾಂಡ್' ಹೊಂದಿರೋ ಈ ನಟಿ ಕನ್ನಡದಲ್ಲೂ ನಟಿಸಿದ್ದಾರೆ.. ಈಕೆಯ ಒಟ್ಟೂ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ!

ಸಿನಿಮಾ ತಾರೆಯರು ದುಬಾರಿ ಕಾರು, ಐಷಾರಾಮಿ ಮನೆ ಖರೀದಿಸುವುದು ಸಾಮಾನ್ಯ. ಆದರೆ ಬಾಲಿವುಡ್‌ನ ಈ ನಟಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನಲಾಗುತ್ತದೆ. ಮನೆ, ಕಾರುಗಳ ಜೊತೆಗೆ ತಮ್ಮದೇ ಆದ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ.

2 Min read
Author : Shriram Bhat
Published : Sep 18 2026, 06:57 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಜಾಕ್ವೆಲಿನ್ ಫರ್ನಾಂಡಿಸ್: ಮನೆ, ಕಾರು ಅಲ್ಲ... ನಟಿಯ ಬಳಿ ಇದೆ ಒಂದು ಖಾಸಗಿ ದ್ವೀಪ!

ಸಿನಿಮಾ ತಾರೆಯರು ದುಬಾರಿ ಕಾರು, ಐಷಾರಾಮಿ ಮನೆ ಖರೀದಿಸುವುದು ಸಾಮಾನ್ಯ. ಆದರೆ ಬಾಲಿವುಡ್‌ನ ಈ ನಟಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನಲಾಗುತ್ತದೆ. ಮನೆ, ಕಾರುಗಳ ಜೊತೆಗೆ ತಮ್ಮದೇ ಆದ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ ಎಂಬ ಕಾರಣಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಆಗಾಗ್ಗೆ ಸುದ್ದಿಯಾಗುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Instagram

ಶ್ರೀಲಂಕಾದ ಕೊಲಂಬೊದಲ್ಲಿ ಜನಿಸಿದ ಜಾಕ್ವೆಲಿನ್, ಮಾಡೆಲಿಂಗ್ ಕ್ಷೇತ್ರದಿಂದ ತಮ್ಮ ವೃತ್ತಿಜೀವನ ಆರಂಭಿಸಿ ಬಳಿಕ ಬಾಲಿವುಡ್‌ನಲ್ಲಿ ಗುರುತಿಸಿಕೊಂಡರು. 2006ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಕಿರೀಟ ಗೆದ್ದ ಅವರು, 2009ರಲ್ಲಿ ‘ಅಲ್ಲಾದೀನ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು.

Related Articles

Related image1
Dr Vishnuvardhan 75th Birthday: ವಿಷ್ಣುವರ್ಧನ್ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲದ ಹಲವು ಸೀಕ್ರೆಟ್‌ಗಳು ಇಲ್ಲಿವೆ ನೋಡಿ!
Related image2
ಲೇಟ್ ನೈಟ್ ಹೊಟ್ಟೆ ಬಿರಿಯುವಷ್ಟು ಊಟ ಮಾಡ್ತೀರಾ? ಹಾಗಿದ್ರೆ ನಿಮ್ಮನ್ನು ಆ ದೇವ್ರೇ ಕಾಪಾಡ್ಬೇಕು..!
37
Image Credit : Instagram

ಆರಂಭದ ದಿನಗಳ ಬಳಿಕ ‘ಮರ್ಡರ್ 2’, ‘ಹೌಸ್‌ಫುಲ್ 2’, ‘ರೇಸ್ 2’ ಮತ್ತು ‘ಕಿಕ್’ ಸಿನಿಮಾಗಳ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ವಿಶೇಷವಾಗಿ ಗ್ಲಾಮರ್ ಮತ್ತು ಡ್ಯಾನ್ಸ್‌ ಮೂಲಕ ಬಾಲಿವುಡ್‌ನಲ್ಲಿ ಜನಪ್ರಿಯತೆ ಪಡೆದರು. ಕನ್ನಡದಲ್ಲಿ ಸ್ಟಾರ್ ನಟ ಕಿಚ್ಚ ಸುದೀಪ್ ಎದುರು 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಟಿಸಿದ್ದಾರೆ. ಕಿಚ್ಚ-ಜಾಕ್ವೆಲಿನ್ ಜೋಡಿಯ 'ರಾ ರಾ ರುಕ್ಕಮ್ಮ..' ಹಾಡು ಸಖತ್ ಫೇಮಸ್ ಆಗಿದ್ದು, ಇಂದಿಗೂ ಆ ಹಾಡು ಜನಮೆಚ್ಚುಗೆ ಕಳೆದುಕೊಂಡಿಲ್ಲ.

47
Image Credit : Instagram

ಜಾಕ್ವೆಲಿನ್ ಅವರ ಆಸ್ತಿಗಳ ಪೈಕಿ ಅತ್ಯಂತ ಕುತೂಹಲ ಮೂಡಿಸುವುದು ಅವರ ಹೆಸರಿನೊಂದಿಗೆ ಕೇಳಿಬರುವ ಖಾಸಗಿ ದ್ವೀಪದ ಕಥೆ. 2012ರಲ್ಲಿ ಶ್ರೀಲಂಕಾ ಸಮೀಪ ಸುಮಾರು 5 ಎಕರೆ ವಿಸ್ತೀರ್ಣದ ದ್ವೀಪವನ್ನು ಖರೀದಿಸಿದ್ದಾರೆ ಎಂದು ಹಲವು ವರದಿಗಳು ಹೇಳುತ್ತವೆ. ಅದರ ಬೆಲೆ ಸುಮಾರು 3 ಕೋಟಿ ರೂಪಾಯಿ ಎಂದು ವರದಿಯಾಗಿತ್ತು. ಹಸಿರಿನಿಂದ ಆವೃತವಾಗಿರುವ ಈ ದ್ವೀಪವೇ ನಟಿಯ ಐಷಾರಾಮಿ ಜೀವನಶೈಲಿಯ ಮತ್ತೊಂದು ಉದಾಹರಣೆಯಾಗಿ ಚರ್ಚೆಯಾಗುತ್ತದೆ.

57
Image Credit : Instagram

ಕನ್ನಡ ಪ್ರೇಕ್ಷಕರಿಗೂ ಜಾಕ್ವೆಲಿನ್ ಪರಿಚಿತ ಮುಖ. ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾದ ‘ರಕ್ಕಮ್ಮ’ ಪಾತ್ರದ ಮೂಲಕ ಅವರು ಸ್ಯಾಂಡಲ್‌ವುಡ್‌ನಲ್ಲೂ ಗಮನ ಸೆಳೆದಿದ್ದರು.

67
Image Credit : Instagram

ಇಷ್ಟೇ ಅಲ್ಲ, ಮುಂಬೈನ ಪಾಲಿ ಹಿಲ್‌ನಲ್ಲಿ ಐಷಾರಾಮಿ 5 BHK ಅಪಾರ್ಟ್‌ಮೆಂಟ್, ಕೊಲಂಬೊದಲ್ಲಿ ರೆಸ್ಟೋರೆಂಟ್ ಹಾಗೂ ವಿವಿಧ ಉದ್ಯಮಗಳಲ್ಲಿ ಹೂಡಿಕೆ ಹೊಂದಿದ್ದಾರೆ ಎಂಬ ವರದಿಗಳಿವೆ. ಸಿನಿಮಾಗಳ ಸಂಭಾವನೆ, ಜಾಹೀರಾತುಗಳು ಮತ್ತು ಇತರ ವಾಣಿಜ್ಯ ಚಟುವಟಿಕೆಗಳಿಂದಲೂ ಅವರು ಆದಾಯ ಗಳಿಸುತ್ತಾರೆ ಎನ್ನಲಾಗಿದೆ. ಒಂದು ವರ್ಷಕ್ಕೆ ಇವರ ಆದಾಯ 12 ಕೋಟಿಗೂ ಅಧಿಕ ಎನ್ನಲಾಗಿದೆ.

77
Image Credit : Instagram

ಒಟ್ಟಿನಲ್ಲಿ, ಜಾಕ್ವೆಲಿನ್ ಫರ್ನಾಂಡಿಸ್ ಅವರ ಸಿನಿಮಾ ಜರ್ನಿಯಷ್ಟೇ ಅವರ ಐಷಾರಾಮಿ ಆಸ್ತಿ ಮತ್ತು ಉದ್ಯಮದ ಕುರಿತ ಸುದ್ದಿಗಳೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಕಿಚ್ಚ ಸುದೀಪ್
ಸ್ಯಾಂಡಲ್‌ವುಡ್
ಬಾಲಿವುಡ್
ಮನರಂಜನಾ ಸುದ್ದಿ
 

Latest Videos
Recommended Stories
Recommended image1
ಅಜಿತ್ ‘ಡೇರ್ ಡೆವಿಲ್’ನಿಂದ ಮೋಹನ್‌ಲಾಲ್ ಔಟ್: ಇವರ ಜಾಗಕ್ಕೆ ಬರ್ತಿದ್ದಾರಾ ಕಿಚ್ಚ ಸುದೀಪ್?
Recommended image2
'ಹೆಣ್ಣುಮಕ್ಕಳ ಮೇಲಿನ ಒತ್ತಡ ದುಪ್ಪಟ್ಟು': 16ನೇ ವಯಸ್ಸಿನ ಆ ಅನುಭವ ಬಿಚ್ಚಿಟ್ಟ ನಟಿ ಶೋಭಿತಾ
Recommended image3
ಸೂಪರ್ ಹಿಟ್ 'ಅರ್ಜುನ್ ರೆಡ್ಡಿ' ಸಿನಿಮಾದಲ್ಲಿ ನಟಿಸಿದ್ದು ಇವರೇನಾ? ಈಗಿನ ಲುಕ್ ನೋಡಿ ಫ್ಯಾನ್ಸ್ ಶಾಕ್!
Related Stories
Recommended image1
Dr Vishnuvardhan 75th Birthday: ವಿಷ್ಣುವರ್ಧನ್ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲದ ಹಲವು ಸೀಕ್ರೆಟ್‌ಗಳು ಇಲ್ಲಿವೆ ನೋಡಿ!
Recommended image2
ಲೇಟ್ ನೈಟ್ ಹೊಟ್ಟೆ ಬಿರಿಯುವಷ್ಟು ಊಟ ಮಾಡ್ತೀರಾ? ಹಾಗಿದ್ರೆ ನಿಮ್ಮನ್ನು ಆ ದೇವ್ರೇ ಕಾಪಾಡ್ಬೇಕು..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved