‘ಬೆಂಟ್ಲಿ’ ಸಿನಿಮಾ ವಿಮರ್ಶೆ: ಸಂತೋಷ್‌ ಬಾಲರಾಜ್‌ ನಟಿಸಿ ನಿರ್ದೇಶಿಸಿರುವ ‘ಬೆಂಟ್ಲಿ’ ಚಿತ್ರದಲ್ಲಿ ಮಾಸ್‌, ಆ್ಯಕ್ಷನ್‌, ಪ್ರೀತಿ, ಸೆಂಟಿಮೆಂಟ್‌ ಮತ್ತು ಫ್ಯಾಮಿಲಿ ಡ್ರಾಮಾ ಪ್ರಮುಖ ಅಂಶಗಳಾಗಿವೆ. ‘ಬೆಂಟ್ಲಿ’ ಸಿನಿಮಾಗೆ 3 ಸ್ಟಾರ್ ರೇಟಿಂಗ್.

ಕೇಶವ

ಸಂತೋಷ್‌ ಬಾಲರಾಜ್‌ ನಟಿಸಿ, ನಿರ್ದೇಶಿಸಿರುವ ಕೊನೆಯ ಚಿತ್ರವಿದು. ಮಾಸ್‌, ಆ್ಯಕ್ಷನ್‌ ಜೊತೆಗೆ ಸೆಂಟಿಮೆಂಟ್‌ ಹಾಗೂ ಫ್ಯಾಮಿಲಿ ಡ್ರಾಮಾ ಒಳಗೊಂಡ ಸಿನಿಮಾ ‘ಬೆಂಟ್ಲಿ’. ಕಲರ್‌ ಫುಲ್‌ ಹಾಡುಗಳು, ಅದ್ದೂರಿ ಮೇಕಿಂಗ್‌, ರೋಚಕ ಎನಿಸುವ ಸಾಹಸ ದೃಶ್ಯಗಳು ಚಿತ್ರದ ಹೈಲೈಟ್‌. ಪ್ರೀತಿ ಮತ್ತು ಆಸ್ತಿ, ಕೊಲೆಯ ತಿರುವುಗಳಲ್ಲಿ ಸಾಗುವ ಕತೆ ಇದು. ಇಲ್ಲಿ ಕೊಲೆ ಯಾಕೆ ನಡೆಯಿತು, ಅದರ ಹಿಂದಿರುವುದು ಯಾರು, ವಿದೇಶದಿಂದ ಬರುವ ನಾಯಕಿಯ ಹಿನ್ನೆಲೆ ಏನೆಂಬುದು, ನಾಯಕನಿಗೆ ನಾಯಕಿ ಕುಟುಂಬ ಯಾವ ರೀತಿ ಕನೆಕ್ಟ್‌ ಆಗಿರುತ್ತದೆ ಚಿತ್ರಕಥೆ.

ವಿದೇಶದಿಂದ ಬಂದು ತನ್ನ ಚಿಕ್ಕಪ್ಪನ ಬಳಿ ಬೆಳೆಯುತ್ತಿರುವ ನಾಯಕಿಗೆ ಇಲ್ಲಿನ ಅಗಸರ ಹುಡುಗನ ಮೇಲೆ ಲವ್ವಾಗುತ್ತದೆ.ಈ ಪ್ರೀತಿ ನಾಯಕಿಯ ಚಿಕ್ಕಪ್ಪನಿಗೆ ಗೊತ್ತಾಗುವ ಹೊತ್ತಿಗೆ ನಾಯಕಿಗೂ ಒಂದು ನಿಗೂಢ ಸತ್ಯ ತಿಳಿಯುತ್ತದೆ. ಅದು ತನ್ನ ತಾಯಿ ಯಾರು, ತನ್ನ ಅಪ್ಪನ ಹಿನ್ನೆಲೆ ಏನೆಂಬುದು. ಆ ಹಂತದಲ್ಲಿ ಈ ಕತೆಗೆ ಒಂದು ಅನಿರೀಕ್ಷಿತ ತಿರುವು ಎದುರಾಗುತ್ತದೆ.

ಚಿತ್ರ: ಬೆಂಟ್ಲಿ

ತಾರಾಗಣ: ಸಂತೋಷ್‌ ಬಾಲರಾಜ್‌, ಸಿಮ್ರಾನ್‌ ನಟೇಕರ್‌, ಶ್ರುತಿ, ಚರಣ್‌ ರಾಜ್‌, ಬಲರಾಜವಾಡಿ,

ನಿರ್ದೇಶನ: ಸಂತೋಷ್‌ ಬಾಲರಾಜ್‌

ರೇಟಿಂಗ್‌: 3

ಕುಟುಂಬ ಕಲಹದಲ್ಲಿ ಹುಟ್ಟಿಕೊಳ್ಳುವ ಪ್ರೀತಿಯ ಅಲೆಗಳ ಜೊತೆಗೆ ನಿರ್ಮಾಪಕ ಆನೇಕಲ್‌ ಬಾಲರಾಜ್‌ ಪುತ್ರ ಸಂತೋಷ್‌ ಬಾಲರಾಜ್‌ ನಟನೆ ಜೊತೆಗೆ ನಿರ್ದೇಶಕರಾಗಿಯೂ ತಮ್ಮ ಪ್ರತಿಭೆ ಪರೀಕ್ಷೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಲರಾಜವಾಡಿ ಚಿತ್ರದ ಪ್ರಮುಖ ಕೇಂದ್ರಬಿಂದುವಾಗುತ್ತಾರೆ.