ಭಾರತದಲ್ಲಿ ಇಂದಿನಿಂದ ಐಫೋನ್ 18 ಸಿರೀಸ್ ಮಾರಾಟಕ್ಕೆ ಲಭ್ಯವಿದೆ. ಐಫೋನ್ ಸ್ಟೋರ್‌ಗಳಲ್ಲಿ ಭಾರಿ ಜನಜಂಗುಳಿ ಸೃಷ್ಟಿಯಾಗಿದೆ. ಬರೋಬ್ಬರಿ 9 ಗಂಟೆ ಪ್ರಯಾಣ ಮಾಡಿ, ಬೆಳಗ್ಗೆ 6 ಗಂಟೆಗೆ ಕ್ಯೂನಲ್ಲಿ ನಿಂತು ಐಫೋನ್ ಖರೀದಿಸಿದ ವ್ಯಕ್ತಿಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.
ಮುಂಬೈ (ಸೆ.18) ಭಾರತದಲ್ಲಿ ಇತ್ತೀಚೆಗೆ ಐಫೋನ್ 18 ಸಿರೀಸ್ ಫೋನ್ ಬಿಡುಗಡೆಯಾಗಿದೆ. ಇಂದಿನಿಂದ (ಸೆ.18) ಭಾರತದಾದ್ಯಂತ ಐಫೋನ್ 18 ಮಾರಾಟ ಆರಂಭಗೊಂಡಿದೆ. ಆ್ಯಪಲ್ ಸ್ಟೋರ್, ಆನ್‌ಲೈನ್ ಮೂಲಕ ನೂತನ ಐಫೋನ್ 18 ಸಿರೀಸ್ ಲಭ್ಯವಿದೆ. ಅಧಿಕೃತ ಆ್ಯಪಲ್ ಸ್ಟೋರ್ ಮೂಲಕ ಐಫೋನ್ ಖರೀದಿಸಲು ಜನಸಗಾರವೇ ಹರಿದು ಬಂದಿದೆ. ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ಆ್ಯಪಲ್ ಸ್ಟೋರ್ ಮುಂದೆ ಜನರು ಸರದಿ ಸಾಲಿನಲ್ಲಿ ನಿಂತು ಐಫೋನ್ 18 ಖರೀದಿಸುತ್ತಿದ್ದಾರೆ. ವಿಶೇಷ ಅಂದರೆ ಬರೋಬ್ಬರಿ 9 ಗಂಟೆ ಪ್ರಯಾಣ ಮಾಡಿ, ಬೆಳಗ್ಗೆ 6 ಗಂಟೆಗೆ ಕ್ಯೂನಲ್ಲಿ ನಿಂತ ವ್ಯಕ್ತಿ ಐಫೋನ್ 18 ಡ್ಯು ಖರೀದಿಸಿದ್ದಾರೆ. ಹೀಗೆ ಸುದೀರ್ಘ ಪ್ರಯಾಣದ ಬಳಿಕ ಐಫೋನ್ ಖರೀದಿಸಿದ ವ್ಯಕ್ತಿಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.
ಗುಜರಾತ್‌ನಿಂದ ಮುಂಬೈಗೆ ತೆರಳಿದ ಐಫೋನ್ ಖರೀದಿ
ಗುಜರಾತ್‌ನ ಮುಕೇಶ್ ಪಟೇಲ್ ಕಟ್ಟಡ ನಿರ್ಮಾಣ ಉದ್ಯಮ ನಡೆಸುತ್ತಿದ್ದಾರೆ. ಐಫೋನ್ 18 ಡ್ಯು ಖರೀದಿಸಲು ಗುಜರಾತ್‌ನಿಂದ ಮುಂಬೈಗೆ ಪ್ರಯಾಣ ಬೆಳೆಸಿದ ಮುಕೇಶ್ ಪಟೇಲ್, ಬೆಳಗ್ಗೆ 6 ಗಂಟೆಗೆ ಮುಂಬೈ ಆ್ಯಪಲ್ ಸ್ಟೋರ್ ಮುಂದೆ ಕ್ಯೂ ನಿಂತಿದ್ದಾರೆ. ದುಬಾರಿ ಬೆಲೆ ನೀಡಿ ಐಫೋನ್ 18 ಡ್ಯು ಫೋನ್ ಖರೀದಿಸಿದ್ದಾರೆ.
ಮುಕೇಶ್ ಪಟೇಲ್‌ಗೆ ಸ್ಪೆಷಲ್ ಕಿರೀಟ
ಸುದೀರ್ಘ ಪ್ರಯಾಣ, ಕ್ಯೂನಲ್ಲಿ ಸುದೀರ್ಘ ಸಮಯ ನಿಂತು ಐಫೋನ್ 18 ಡ್ಯು ಫೋನ್ ಖರೀದಿಸಿದ ಮುಕೇಶ್‌ಗೆ ವಿಶೇಷ ಕಿರೀಟವೊಂದು ಲಭ್ಯವಾಗಿದೆ. ಮುಂಬೈ ಆ್ಯಪಲ್ ಸ್ಟೋರ್‌ನಿಂದ ಐಫೋನ್ 8 ಪ್ರೋ ಸಿರೀಸ್ ಖರೀದಿಸಿದ ಮೊದಲ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಮುಕೇಶ್ ಪಟೇಲ್ ಪಾತ್ರರಾಗಿದ್ದಾರೆ.
ಆಪಲ್ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾರುಕಟ್ಟೆ ಲಗ್ಗೆ ಇಟ್ಟಿದೆ. ಅಧಿಕೃತ ಮಾರಾಟ ಆರಂಭ ಹಿನ್ನಲೆಯಲ್ಲಿ ಐಫೋನ್ ಖರೀದಿಗೆ ಜನರು ಮುಗಿಬಿದಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ ಆಪಲ್ ಸ್ಟೋರಗಳ ಮುಂದೆ ಜನ ಸಾಲಾಗಿ ನಿಂತಿದ್ದಾರೆ.
ಐಫೋನ್ 18 ಬೆಲೆ
ಐಫೋನ್ 18 ಸಿರೀಸ್ ಅತ್ಯಂತ ದುಬಾರಿ ಫೋನ್ ಎಂದೇ ಗುರುತಿಸಿಕೊಂಡಿದೆ. ಐಫೋನ್ 18 ಆರಂಭಿಕ ಬೆಲೆ 1,64,900 ರೂಪಾಯಿ ಪ್ರೋ ಮ್ಯಾಕ್ಸ್ 1,79,900 ರೂಪಾಯಿ. ಇನ್ನು ಟಾಪ್ ಮಾಡೆಲ್ ಆರಂಭಿಕ ಬೆಲೆ 3,29,900 ರೂಪಾಯಿ. ಐಫೋನ್ 18 ಸಿರೀಸ್ ಬೆಲೆ ಕಾರಣದಿಂದ ಮೀಮ್ಸ್ ಹರಿದಾಡಿತ್ತು. ಕಿಡ್ನಿ ಮಾರಿದರೂ ಐಫೋನ್ 18 ಸಿರೀಸ್ ಖರೀದಿಸಲು ಸಾಧ್ಯವಾಗಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು.
ಐಫೋನ್ 18 ಪ್ರೋ 6.3 ಇಂಚು ಹಾಗೂ 18 ಪ್ರೋ ಮ್ಯಾಕ್ಸ್ 6.9 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ ಹೊಂದಿದೆ. 120Hz ರೀಫ್ರೆಶ್ ರೇಟ್ ಹೊಂದಿದೆ. ಆ್ಯಪಲ್ A20 ಪ್ರೋ ರೀಸೆಟ್, 12GB RAM ಹಾಗೂ 256GB ಸ್ಟೋರೇಜ್ ಹೊಂದಿದೆ. ಟ್ರಿಪಲ್ ಕ್ಯಾಮೆರಾ, 48MP ಪ್ರೈಮರಿ ಶೂಟರ್, 48MP ಪೆರಿಸ್ಕೋಪ್ ಟೆಲಿಫೋಟೋ ಶೂಟರ್, 48MP ಅಲ್ಟ್ರಾವೈಡ್ ಸ್ನಾಪರ್, 18MP ಫ್ರಂಟ್ ಕ್ಯಾಮೆರಾ ಹೊಂದಿದೆ.

