- Home
- Technology
- Mobiles
- ₹10 ಸಾವಿರದೊಳಗೆ ಬೆಸ್ಟ್ ಸ್ಮಾರ್ಟ್‌ಫೋನ್ ಬೇಕಾ? 120Hz, 5G, 50MP ಕ್ಯಾಮೆರಾ ಇರುವ Top 10 ಫೋನ್‌ಗಳಿವು
₹10 ಸಾವಿರದೊಳಗೆ ಬೆಸ್ಟ್ ಸ್ಮಾರ್ಟ್‌ಫೋನ್ ಬೇಕಾ? 120Hz, 5G, 50MP ಕ್ಯಾಮೆರಾ ಇರುವ Top 10 ಫೋನ್‌ಗಳಿವು
10 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದೀರಾ? ನಿಮಗಾಗಿ ಮಾರುಕಟ್ಟೆಯಲ್ಲಿ ಭರ್ಜರಿ ಆಪ್ಷನ್‌ಗಳಿವೆ. ಬಜೆಟ್ ಬೆಲೆಯಲ್ಲಿ 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ, 50MP ಕ್ಯಾಮೆರಾ ಹಾಗೂ ಫಾಸ್ಟ್ 5G ಕನೆಕ್ಟಿವಿಟಿ ನೀಡುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ.

10 ಸಾವಿರದೊಳಗೆ ಬೆಸ್ಟ್ ಸ್ಮಾರ್ಟ್‌ಫೋನ್ ಬೇಕಾ? ಟಾಪ್ 10 ಮಾಡೆಲ್‌ಗಳ ಲಿಸ್ಟ್ ಇಲ್ಲಿದೆ
ಕಡಿಮೆ ಬಜೆಟ್‌ನಲ್ಲಿ ಒಳ್ಳೆ ಫೀಚರ್‌ಗಳಿರುವ ಸ್ಮಾರ್ಟ್‌ಫೋನ್ ಖರೀದಿಸುವುದು ಈಗ ತುಂಬಾನೇ ಸುಲಭ. ನಿಮ್ಮ ಬಜೆಟ್ ₹10,000 ಕ್ಕಿಂತ ಕಡಿಮೆಯಿದ್ದರೆ, ಹೊಸ ಫೋನ್ ಖರೀದಿಸಲು ಈಗ ಸಾಕಷ್ಟು ಆಪ್ಷನ್‌ಗಳಿವೆ. ಇದೇ ಬೆಲೆಗೆ ದೊಡ್ಡ ಸ್ಕ್ರೀನ್, 120Hz ರಿಫ್ರೆಶ್ ರೇಟ್, 5G ಕನೆಕ್ಟಿವಿಟಿ, ಪವರ್‌ಫುಲ್ ಬ್ಯಾಟರಿ ಹಾಗೂ ಅದ್ಭುತ ಕ್ಯಾಮೆರಾ ಇರುವ ಫೋನ್‌ಗಳು ಸಿಗುತ್ತಿವೆ. ಮಾರುಕಟ್ಟೆಯಲ್ಲಿರುವ ಟಾಪ್ ಮಾಡೆಲ್‌ಗಳ ಡೀಟೇಲ್ಸ್ ಇಲ್ಲಿದೆ ನೋಡಿ.
ಮೊಟೊ, ಲಾವಾ 5G ಆಪ್ಷನ್ಸ್
Moto G05: ಮೊಟೊರೊಲಾದಿಂದ ಬಂದಿರುವ ಮೊಟೊ G05 ಫೋನ್ 6.67 ಇಂಚಿನ 90Hz ಡಿಸ್‌ಪ್ಲೇಯೊಂದಿಗೆ ಸಿಗುತ್ತದೆ. ಇದರಲ್ಲಿ Helio G81 Extreme ಪ್ರೊಸೆಸರ್ ಬಳಸಿದ್ದಾರೆ. ಕ್ಲಾರಿಟಿ ಫೋಟೋಗಳಿಗಾಗಿ 50MP ಕ್ಯಾಮೆರಾ, 5200mAh ಬ್ಯಾಟರಿ ಇದರಲ್ಲಿದೆ. ಇದರ ಬೆಲೆ ₹7,299.
Lava Storm Lite 5G: ಕಡಿಮೆ ಬೆಲೆಯಲ್ಲಿ 5G ಬೇಕೆನ್ನುವವರಿಗೆ ಇದು ಬೆಸ್ಟ್ ಆಪ್ಷನ್. ಇದರಲ್ಲಿ Dimensity 6400 ಪ್ರೊಸೆಸರ್ ಇದೆ. 6.74 ಇಂಚಿನ 120Hz ಡಿಸ್‌ಪ್ಲೇ, 50MP ಕ್ಯಾಮೆರಾ, 5000mAh ಬ್ಯಾಟರಿಯೊಂದಿಗೆ ಬರುತ್ತಿರುವ ಈ 5G ಫೋನ್ ಬೆಲೆ ಕೇವಲ ₹7,999.
ಟೆಕ್ನೋ ಸ್ಪಾರ್ಕ್, ವಿವೋ ಫೋನ್‌ಗಳು
Tecno Spark Go 2: ಈ ಸ್ಮಾರ್ಟ್‌ಫೋನ್ 6.67 ಇಂಚಿನ 120Hz ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ Unisoc T7250 ಪ್ರೊಸೆಸರ್ ಇದೆ. 13MP ಕ್ಯಾಮೆರಾ, 5000mAh ಬ್ಯಾಟರಿಯೊಂದಿಗೆ ಸಿಗುವ ಈ ಫೋನ್ ಬೆಲೆಯನ್ನು ₹7,499 ಕ್ಕೆ ನಿಗದಿಪಡಿಸಿದ್ದಾರೆ.
Vivo Y19e: ವಿವೋ ಬ್ರ್ಯಾಂಡ್‌ನ ಈ ಮಾಡೆಲ್ 6.74 ಇಂಚಿನ 90Hz ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದರಲ್ಲಿ Unisoc T7225 ಪ್ರೊಸೆಸರ್ ಕೊಟ್ಟಿದ್ದಾರೆ. 13MP ಕ್ಯಾಮೆರಾ, 5500mAh ದೊಡ್ಡ ಬ್ಯಾಟರಿ ಇದರಲ್ಲಿದೆ. ಈ ಫೋನ್ ಬೆಲೆ ₹8,999.
ಲಾವಾ ಶಾರ್ಕ್ 2
Lava Shark 2: ಲಾವಾ ಸಂಸ್ಥೆ ನೀಡುತ್ತಿರುವ ಮತ್ತೊಂದು ಹೊಸ ಮಾಡೆಲ್ ಲಾವಾ ಶಾರ್ಕ್ 2. ಇದು 6.75 ಇಂಚಿನ 120Hz ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದರಲ್ಲಿ Unisoc T7250 ಪ್ರೊಸೆಸರ್, 50MP ಪ್ರೈಮರಿ ಕ್ಯಾಮೆರಾ, 5000mAh ಬ್ಯಾಟರಿ ಕೊಟ್ಟಿದ್ದಾರೆ. ವೇಗವಾಗಿ ಚಾರ್ಜ್ ಆಗಲು 18W ಚಾರ್ಜಿಂಗ್ ಸಪೋರ್ಟ್ ಕೂಡ ಇದೆ. ಈ ಫೋನ್ ಬೆಲೆ ₹7,999.
ಐಟೆಲ್, ಟೆಕ್ನೋ ಸೀರೀಸ್
Itel Zeno 200: ಐಟೆಲ್ ಝೆನೋ 200 ಮಾಡೆಲ್ 6.75 ಇಂಚಿನ 120Hz ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದರಲ್ಲಿ Unisoc T7250 ಪ್ರೊಸೆಸರ್ ಬಳಸಿದ್ದಾರೆ. ಈ ಫೋನ್‌ನಲ್ಲಿ 13MP ಕ್ಯಾಮೆರಾ, 5000mAh ಬ್ಯಾಟರಿ, 128GB ಸ್ಟೋರೇಜ್ ಲಭ್ಯವಿದೆ. ಇದರ ಬೆಲೆ ₹9,999.
Tecno Pop X: ಟೆಕ್ನೋ ಕಂಪನಿಯ ಈ ಡಿವೈಸ್ 6.75 ಇಂಚಿನ 120Hz ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ Unisoc T7250 ಚಿಪ್‌ಸೆಟ್ ಇದೆ. ಹಿಂಭಾಗದಲ್ಲಿ 13MP ಕ್ಯಾಮೆರಾ, ಮುಂಭಾಗದಲ್ಲಿ 8MP ಫ್ರಂಟ್ ಕ್ಯಾಮೆರಾ ಕೊಟ್ಟಿದ್ದಾರೆ. 5000mAh ಬ್ಯಾಟರಿ ಇರುವ ಈ ಫೋನ್ ಬೆಲೆ ₹9,499.
ಬೋಲ್ಟ್, ಪೊಕೊ, ಲಾವಾ ಮಾಡೆಲ್‌ಗಳು
Boltt Evo: ಈ ಫೋನ್ 6.79 ಇಂಚಿನ 120Hz ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ Unisoc T7250 ಪ್ರೊಸೆಸರ್ ಕೊಟ್ಟಿದ್ದಾರೆ. ಫೋಟೋಗ್ರಫಿಗೆ 50MP ಕ್ಯಾಮೆರಾ ಇದೆ. ಇಡೀ ದಿನ ಚಾರ್ಜಿಂಗ್ ಬರಲು 6000mAh ದೊಡ್ಡ ಬ್ಯಾಟರಿ ನೀಡಿದ್ದಾರೆ. ಇದರ ಬೆಲೆ ₹9,999.
POCO C71: ಪೊಕೊದಿಂದ ಬಂದಿರುವ ಈ ಮಾಡೆಲ್ 6.88 ಇಂಚಿನ 120Hz ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ Unisoc T7250 ಚಿಪ್ ಬಳಸಿದ್ದಾರೆ. 32MP ಪ್ರೈಮರಿ ಕ್ಯಾಮೆರಾ, 5200mAh ಬ್ಯಾಟರಿ ಸಿಗುತ್ತದೆ. ಈ ಫೋನ್ ಬೆಲೆ ಕೇವಲ ₹8,999.
Lava Virat V1: ಲಾವಾದ ಈ ಬಜೆಟ್ ಫೋನ್ 6.75 ಇಂಚಿನ 90Hz ಡಿಸ್‌ಪ್ಲೇಯೊಂದಿಗೆ ಲಭ್ಯವಿದೆ. ಇದರಲ್ಲಿ 13MP ಕ್ಯಾಮೆರಾ, 5000mAh ಬ್ಯಾಟರಿ, 4GB RAM ಕೊಟ್ಟಿದ್ದಾರೆ. ಇದರ ಬೆಲೆ ₹9,999.
ಇವುಗಳಷ್ಟೇ ಅಲ್ಲದೆ ₹10,000 ಆಸುಪಾಸಿನಲ್ಲಿ ಅದ್ಭುತ ಫೀಚರ್‌ಗಳು, 5G ಕನೆಕ್ಟಿವಿಟಿ, ಪವರ್‌ಫುಲ್ ಕ್ಯಾಮೆರಾಗಳಿರುವ ಹಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

