- Home
- Technology
- Mobiles
- ಕೇವಲ 17 ನಿಮಿಷದಲ್ಲಿ iPhone 18 Pro ಮನೆ ಬಾಗಿಲಿಗೆ! ಸರತಿ ಸಾಲಲ್ಲಿ ಕಾಯದೆ ಇಷ್ಟು ಮಾಡಿ ಸಾಕು
ಕೇವಲ 17 ನಿಮಿಷದಲ್ಲಿ iPhone 18 Pro ಮನೆ ಬಾಗಿಲಿಗೆ! ಸರತಿ ಸಾಲಲ್ಲಿ ಕಾಯದೆ ಇಷ್ಟು ಮಾಡಿ ಸಾಕು
ಭಾರತ ಸೇರಿದಂತೆ ಹಲವು ದೇಶಗಳಲ್ಲಿ iPhone 18 Pro ಮಾರಾಟ ಭರ್ಜರಿ ಆರಂಭವಾಗಿದೆ, ಮುಂಗಡ ಬುಕಿಂಗ್ ಮಾಡಿದ ಜನರು ಐಫೋನ್ ಮಳಿಗೆಗಳ ಮುಂದೆ ಕಿಮೀ ಗಟ್ಟಲೇ ಸರತಿ ಸಾಲಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಮನೆಯಲ್ಲೇ ಕುಳೀತು ಕೇವಲ ಹದಿನೇಳು ನಿಮಿಷದಲ್ಲೇ ಪಡೆಯುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಕೇವಲ 17 ನಿಮಿಷದಲ್ಲಿ iPhone 18 Pro ಮನೆ ಬಾಗಿಲಿಗೆ!
ಭಾರತ ಸೇರಿದಂತೆ ಹಲವು ದೇಶಗಳಲ್ಲಿ iPhone 18 Pro ಮಾರಾಟ ಭರ್ಜರಿ ಆರಂಭವಾಗಿದೆ. ಮುಂಗಡವಾಗಿ ಬುಕ್ ಮಾಡಿದ್ದ ಫೋನ್‌ಗಳನ್ನು ಪಡೆಯಲು Apple Storeಗಳ ಮುಂದೆ ಜನ ಈಗಲೇ ಸರತಿ ಸಾಲಲ್ಲಿ ಕಾದು ನಿಂತಿದ್ದಾರೆ. ಆದರೆ iPhone 18 Pro ಖರೀದಿಸುವ ಬಹಳಷ್ಟು ಜನರಿಗೆ ಒಂದು ವಿಚಾರ ಗೊತ್ತಿಲ್ಲ. ಅದೇನೆಂದರೆ ನೆಚ್ಚಿನ ಐಫೋನ್‌ಗಾಗಿ ಸರತಿ ಸಾಲಲ್ಲಿ ನಿಂತು ಕಾಯಬೇಕಿಲ್ಲ. ಕೆಲವೇ ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೇ ಬರುತ್ತದೆ. ನೀವು ಮಾಡಬೇಕಿರೋದು ಇಷ್ಟೇ; iPhone 18 Pro ಅನ್ನು ಮನೆ ಬಾಗಿಲಿಗೇ ತರಿಸಿಕೊಳ್ಳಲು Blinkit ಮತ್ತು Zeptoನಲ್ಲಿ ಅವಕಾಶವಿದೆ. ಎರಡೂ ಆ್ಯಪ್‌ಗಳಲ್ಲಿ iPhone 18 Pro ಸ್ಟಾಕ್ ಲಭ್ಯವಿದೆ. ನೀವು ಆರ್ಡರ್ ಮಾಡಿದ ಹದಿನೇಳು ನಿಮಿಷದಲ್ಲೇ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.
Blinkit, Zepto ನಲ್ಲಿ iPhone 18 Pro ಆಫರ್‌ಗಳೇನು?
iPhone 18 Pro ಅಥವಾ iPhone 18 Pro Max ನಾಲ್ಕು ಬಣ್ಣಗಳಲ್ಲಿ ಖರೀದಿಸಬಹುದು. ಜೊತೆಗೆ ಆಯ್ದ ಬ್ಯಾಂಕ್‌ಗಳ ಕಾರ್ಡ್‌ಗಳ ಮೂಲಕ ಹೆಚ್ಚುವರಿ ರಿಯಾಯಿತಿ ಹಾಗೂ ನೋ-ಕಾಸ್ಟ್ EMI ಸೌಲಭ್ಯವೂ ಲಭ್ಯವೂ ಇರಲಿದೆ.
ಸುಮ್ಮನೆ ನೀವು ಶೋ ರೂಂಗೆ ಹೋಗಿ ನೂಕುನುಗ್ಗಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ಸುಸ್ತಾಗುವುದಕ್ಕಿಂತ ಮನೆಯಲ್ಲೇ ಕುಳಿತು ತಿಂಡಿ ಆರ್ಡರ್ ಮಾಡಿದ ರೀತಿಯೇ iPhone 18 Pro ಆರ್ಡರ್ ಮಾಡಿದ್ರೆ ಸಾಕು. Blinkitನಲ್ಲಿ iPhone 18 Pro ಮತ್ತು 18 Pro Max ಖರೀದಿಗೆ ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೂಲಕ ರಿಯಾಯಿತಿ ಸಿಗಲಿದೆ. ನೋ-ಕಾಸ್ಟ್ EMI ಆಯ್ಕೆಯೂ ಲಭ್ಯವಿದೆ. ಮಾರಾಟ ಆರಂಭದ ದಿನವೇ Blinkit ಮೂಲಕ ದೆಹಲಿ-NCR, ಮುಂಬೈ, ಬೆಂಗಳೂರು, ಪುಣೆ, ಚೆನ್ನೈ, ಜೈಪುರ ಮತ್ತು ಲಖನೌ ನಗರಗಳಲ್ಲಿ iPhone 18 Pro ಡೆಲಿವರಿ ಪಡೆಯಬಹುದಾಗಿದೆ. ಹೀಗಿರುವಾಗ ಸರತಿ ಸಾಲಲ್ಲಿ ನಿಲ್ಲುವ ಕಷ್ಟವೇಕೆ?
ಭಾರತದಲ್ಲಿ iPhone 18 Pro, 18 Pro Max ಬೆಲೆ ಎಷ್ಟು?
ಇನ್ನು Zeptoನಲ್ಲಿ iPhone 18 Pro ಮತ್ತು 18 Pro Maxನ ವಿವಿಧ ವೇರಿಯಂಟ್‌ಗಳ ಮೇಲೆ ₹7,000ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಸದ್ಯ ಎಲ್ಲೆಡೆ ಈ ಸೌಲಭ್ಯವಿಲ್ಲದಿದ್ದರೂ ದೇಶದ ದೊಡ್ಡ ನಗರಗಾದ ದೆಹಲಿ-NCR, ಮುಂಬೈ, ಬೆಂಗಳೂರು ಮತ್ತು ಚೆನ್ನೈನಲ್ಲಿ Zepto ಮೂಲಕ iPhone 18 Pro ಖರೀದಿಸಬಹುದಾಗಿದೆ.
iPhone 18 Proನ 256GB ಮೂಲ ಮಾದರಿಯ ಬೆಲೆ ಭಾರತದಲ್ಲಿ ₹1,64,900ರಿಂದ ಆರಂಭವಾಗುತ್ತದೆ. iPhone 18 Pro Maxನ 256GB ಮಾದರಿಯ ಬೆಲೆ ₹1,79,900ರಿಂದ ಆರಂಭವಾಗುತ್ತದೆ. ಈ ಬಾರಿ iPhone 18 Pro ಸರಣಿಯ ಫೋನ್‌ಗಳು ನೀಲಿ, ಕಪ್ಪು, ಸಿಲ್ವರ್ ಬಣ್ಣಗಳಲ್ಲಿ ಸಿಗಲಿದೆ. ನಿಮಗೆ ಇಷ್ಟವಾಗುವ ಬಣ್ಣದಲ್ಲಿ ಐಫೋನ್ ಖರೀದಿಸಬಹುದು.
ಇನ್ನು ನಿಮಗೆ ಹಣ ಕೊರತೆ ಇಲ್ಲವೆಂದರೆ iPhone 18 Pro ಮತ್ತು 18 Pro Max ಅನ್ನು ಗರಿಷ್ಠ 2TB ಸ್ಟೋರೇಜ್‌ನಲ್ಲೂ ಖರೀದಿಸಬಹುದು. 2TB iPhone 18 Pro ಬೆಲೆ ₹3,14,900 ಆಗಿದ್ದರೆ, 2TB iPhone 18 Pro Max ಬೆಲೆ ₹3,29,900 ಇದೆ. ನಿಮ್ಮ ಬಜೆಟ್‌ಗೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಿ ಖರೀದಿ ಮಾಡಿದರೆ ಒಳ್ಳೆಯದು.
ಇಂದಿನಿಂದಲೇಮಾರಾಟ ಶುರು
iPhone 18 Pro ಸರಣಿಯ ಫೋನ್‌ಗಳು ಇಂದಿನಿಂದ ಮಾರಾಟ ಆರಂಭವಾಗಿದೆ. ಇನ್ನು Appleನ ಹೊಸ ಫೋಲ್ಡಬಲ್ iPhone ಮಾದರಿಯ ಮುಂಗಡ ಬುಕ್ಕಿಂಗ್ ಅಕ್ಟೋಬರ್ 16ರಿಂದ ಆರಂಭವಾಗಲಿದೆ. ಭಾರತದಲ್ಲಿ ಇದರ ಮಾರಾಟ ಅಕ್ಟೋಬರ್ 23ರಿಂದ ಶುರುವಾಗಲಿದೆ. ಅದರ ಬೆಲೆ, ವೈಶಿಷ್ಯಗಳ ತಿಳಿಯಲು ನಮ್ಮ ಡಿಜಿಟಲ್ ಸುದ್ದಿಗಳನ್ನ ಫಾಲೋ ಮಾಡಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.
