ನೀವು ಹೊಸ ಫೋನ್ ಖರೀದಿಸುವ ಪ್ಲಾನ್‌ನಲ್ಲಿ ಇದ್ದೀರಾ? ಹಾಗಿದ್ದರೆ ಒಂದು ಫೋನ್ ಖರೀದಿಸುವಾಗ ಏನೆಲ್ಲ ಯೋಚನೆ ಮಾಡಬೇಕು? ಇವತ್ತಿನ ದಿನದಲ್ಲಿ ಒಂದು ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲ ಇರಬೇಕು? 20 ಸಾವಿರ ರೂಪಾಯಿ ಒಳಗಿನ ಒಳ್ಳೊಳ್ಳೆ ಫೋನ್‌ಗಳು ಯಾವುದು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಫೋನ್ ಖರೀದಿ ಮಾಡುವಾಗ ಗಮನಿಸಬೇಕಾದ ಪ್ರಮುಖ ವಿಚಾರ ಏನೆಂದರೆ.. ಕ್ಯಾಮೆರಾ, ಬ್ಯಾಟರಿ ಮತ್ತು ಪ್ರೊಸೆಸರ್ ಜೊತೆಗೆ, ನೀರು ಮತ್ತು ಧೂಳಿನ ರಕ್ಷಣೆಯೂ ಬಹಳ ಮುಖ್ಯ. ಅದರಲ್ಲೂ ವಿಶೇಷವಾಗಿ ಮಳೆಗಾಲದಲ್ಲಿ ನಮ್ಮ ಫೋನ್ ಅನ್ನು ಹೇಗೆ ರಕ್ಷಿಸಿಕೊಳ್ಳಬಹುದು ಅಂತಾ. ಯಾಕೆಂದರೆ ನಾವು ಫೋನ್ ಬಳಸುತ್ತಿದ್ದೇವೆ ಅಂದರೆ ಅದು ನೀರಿನ ಸಂಪರ್ಕಕ್ಕೆ ಬರೋದಂತೂ ಗ್ಯಾರಂಟಿ.

ಹಾಗಾಗಿ ಹೊಸ ಫೋನ್ ಖರೀದಿಸುವಾಗ ಫೋನ್‌ನ ಐಪಿ ರೇಟಿಂಗ್ ಪರಿಶೀಲಿಸಬೇಕು. ಐಪಿ ರೇಟಿಂಗ್ ಸಾಧನವು ಧೂಳು ಮತ್ತು ನೀರಿನಿಂದ ಎಷ್ಟು ರಕ್ಷಣೆ ನೀಡುತ್ತದೆ ಅಂತಾ ತೋರಿಸುತ್ತದೆ. ಮಳೆಯಲ್ಲಿ ಫೋನ್ ಬಳಸುವವರಿಗೆ ಇದು ತುಂಬಾನೇ ಮುಖ್ಯವಾಗುತ್ತದೆ. ಪ್ರಸ್ತುತ ಐಪಿ 68 ಮತ್ತು ಐಪಿ 69 ರೇಟಿಂಗ್‌ ಟ್ರೆಂಡಿಂಗ್‌ನಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A33 5G ಮತ್ತು ಗ್ಯಾಲಕ್ಸಿ A34 5G

IP67 ರೇಟಿಂಗ್ ಹೊಂದಿರುವ ಫೋನ್‌ ಬಯಸುವ ಬಳಕೆದಾರರಿಗೆ Samsung Galaxy A33 5G ಮತ್ತು Galaxy A34 5G ಒಳ್ಳೆಯ ಆಯ್ಕೆ. ಭಾರತದಲ್ಲಿ Galaxy A33 5G ಯ ​​ಪ್ರಸ್ತುತ ಬೆಲೆ ₹19,980 ರಿಂದ ₹33,990 ವರೆಗೆ ಇದೆ. Samsung Galaxy A34 5G ಬೆಲೆ ₹20,790 ರಿಂದ ಪ್ರಾರಂಭವಾಗುತ್ತದೆ. Galaxy A34 5G IP67 ರೇಟಿಂಗ್, ಉತ್ತಮ ಕ್ಯಾಮೆರಾ ಮತ್ತು ದೀರ್ಘಕಾಲೀನ ಸಾಫ್ಟ್‌ವೇರ್ ಸಪೋರ್ಟಿಂಗ್ ಸಿಸ್ಟಮ್ ಹೊಂದಿದೆ.

ಮೋಟೋ G96 5G

  • Moto G96 5G ಬೆಲೆ ₹18,999 ರಿಂದ ₹21,099 ವರೆಗೆ ಇದೆ
  • ಸ್ಟೋರೇಜ್ ಮೇಲೆ ಬೆಲೆ ನಿರ್ಧಾರ ಮಾಡಲಾಗುತ್ತದೆ
  • Moto G96 5G ಈ ಪಟ್ಟಿಯಲ್ಲಿ ಅತ್ಯುತ್ತಮ ಆಯ್ಕೆ
  • 144Hz ರಿಫ್ರೆಶ್ ದರ ಮತ್ತು 1600 nits ಹೊಂದಿದೆ
  • 6.67-ಇಂಚಿನ ಬಾಗಿದ P-OLED ಡಿಸ್ಪ್ಲೇಯನ್ನು ಹೊಂದಿದೆ
  • ಫೋನ್ ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್,
  • 8GB RAM ಮತ್ತು 128GB/256GB ಚಾಲಿತ ಫೋನ್
  • 50MP ಮುಖ್ಯ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ,
  • 32MP ಮುಂಭಾಗದ ಕ್ಯಾಮೆರಾ, 5,500mAh ಬ್ಯಾಟರಿ ಹೊಂದಿದೆ
  • ಪ್ರಮುಖವಾಗಿ ಇದು IP68 ರೇಟಿಂಗ್ ಹೊಂದಿದೆ

ಒಪ್ಪೋ ಎ6ಸಿ

OPPO A6c ಸ್ಮಾರ್ಟ್‌ಫೋನ್ IP64 ರೇಟಿಂಗ್ ಹೊಂದಿದೆ. ಕಂಪನಿ ಹೇಳಿಕೊಂಡಿರುವ ಪ್ರಕಾರ.. ಇದು ಸಾಮಾನ್ಯ ಬಳಕೆಯ ಸಮಯದಲ್ಲಿ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆ ನೀಡುತ್ತದೆ. 4GB+64GB ರೂಪಾಂತರದ ಪ್ರಸ್ತುತ ಬೆಲೆ ಸುಮಾರು ₹16,999. ಈ ಫೋನ್ 6.75-ಇಂಚಿನ 120Hz ಡಿಸ್ಪ್ಲೇ, ಸ್ನಾಪ್‌ಡ್ರಾಗನ್ 685 ಪ್ರೊಸೆಸರ್ ಮತ್ತು 6,500mAh ಬ್ಯಾಟರಿ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G

Samsung Galaxy A06 5G IP54 ರೇಟಿಂಗ್ ಹೊಂದಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆ ನೀಡುತ್ತದೆ. ಆದರೆ ಇದನ್ನು ಮುಳುಗುವಿಕೆಗಾಗಿ ವಿನ್ಯಾಸಗೊಳಿಸಲಾಗಿಲ್ಲ. ಇದರ ಬೆಲೆ ₹17,499. ಫೋನ್ 5G ಸಂಪರ್ಕವನ್ನು ನೀಡುತ್ತದೆ.

ರೆಡ್ಮಿ ಎ7 ಪ್ರೊ 5ಜಿ

Redmi A7 Pro 5G ಸ್ಮಾರ್ಟ್‌ಫೋನ್ IP52 ರೇಟಿಂಗ್ ಹೊಂದಿದೆ. ಧೂಳು ಮತ್ತು ನೀರಿನ ಸ್ಪ್ಲಾಶ್‌ಗಳ ವಿರುದ್ಧ ರಕ್ಷಣೆ ನೀಡುತ್ತದೆ. ಮೂಲ ಬೆಲೆ ₹14,499 ರಿಂದ ಪ್ರಾರಂಭವಾಗುತ್ತದೆ. ಈ ಫೋನ್ 6.9-ಇಂಚಿನ 120Hz ಡಿಸ್‌ಪ್ಲೇ ಹೊಂದಿದೆ.

ಪೊಕೊ ಸಿ85 5ಜಿ

POCO C85 5G ಸ್ಮಾರ್ಟ್‌ಫೋನ್ ಐಪಿ ರೇಟಿಂಗ್ ಜೊತೆಗೆ ಧೂಳು ಮತ್ತು ನೀರಿನ ಪ್ರತಿರೋಧವನ್ನೂ ಹೊಂದಿದೆ. 128GB ರೂಪಾಂತರದ ಪ್ರಸ್ತುತ ಬೆಲೆ ಸುಮಾರು ₹16,999 ರಿಂದ ಪ್ರಾರಂಭಗುತ್ತದೆ. 8GB+128GB ಮಾಡೆಲ್ ₹17,999 ವರೆಗೆ ಇದೆ. ಈ ಫೋನ್ 6.9-ಇಂಚಿನ 120Hz HD+ ಡಿಸ್ಪ್ಲೇ ಮತ್ತು 50MP ಹಿಂಬದಿಯ ಕ್ಯಾಮೆರಾ ಹೊಂದಿದೆ.