Asianet Suvarna News Asianet Suvarna News

ಮುರುಗನ ಹುಳಿ ಎಂದರೆ ಮೂಗು ಮುರಿ ಬೇಡಿ, ಹಲವು ಕಾಯಿಲೆಗಳಿಗೆ ಮದ್ದಿದು

ಮಲೆನಾಡು ಮತ್ತು ಕರಾವಳಿಯಲ್ಲಿ ಬೆಳೆಯುವ ಕೋಕಂ ಅಥವಾ ಮುರುಗನಹುಳಿಯ ಮಹತ್ವ ಬಹುತೇಕರಿಗೆ ಗೊತ್ತಿಲ್ಲ. ಸಾರು, ಶರಬತ್ ಮಾಡಿ ಕುಡಿಯಬಹುದಾದ ಇದರಲ್ಲಿ ಹಲವು ಔಷಧೀಯ ಗುಣಗಳೂ ಇವೆ. 

ಹುಳಿ ಹುಳಿಯಾಗಿರೋ ಇದು ಪಿತ್ತ ಶಮನಕಾರಿಯಾಗಿದ್ದು, ತಲೆ ಬೇನೆ, ತಲೆ ಭಾರಕ್ಕೆ ಹೇಳಿ ಮಾಡಿಸಿದ ಮದ್ದು.  ಇದರಿಂದ ಇನ್ನೇನು ಲಾಭವಿದೆ?

- ಪ್ರಖರ ಕೆಂಪು ಬಣ್ಣ ಮತ್ತು  ಹುಳಿ ಇರುವ ಈ ಹಣ್ಣು ಅಮೃತ್ ಕೋಕಮ್ ಎಂದೂ ಹೆಸರು ಪಡೆದಿದೆ. ಯಕೃತ್‌ಗೆ ಶಕ್ತಿಯನ್ನು ಹೆಚ್ಚಿಸಬಲ್ಲದು. 

- ಅಧ್ಯಾಯನವೊಂದರ ಪ್ರಕಾರ ಕೋಕಂ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ರಕ್ತ ಸಂಚಾರ ಸುಸೂತ್ರವಾಗುವಂತೆ ಮಾಡಿ, ಕೆಟ್ಟ ಕೊಲೆಸ್ಟರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. 

- ಡೈಯೇರಿಯಾ ಮತ್ತು ಅತಿಸಾರವನ್ನು ನಿವಾರಿಸುತ್ತದೆ. ಅಲ್ಲದೇ ಅನೇಕ ಕಾಯಿಲೆಗಳಿಗೂ ರಾಮಬಾಣ. 

- ಇದರಲ್ಲಿ ಗಾರ್ಸಿನಲ್ ಎಂಬ ಅಂಶವಿದ್ದು, ಗ್ಯಾಸ್ರ್ಟಿಕ್ ಹುಣ್ಣುಗಳನ್ನು ನಿವಾರಿಸುತ್ತದೆ.

- ಹೈಡ್ರೊ ಸಿಟ್ರಿಕ್ ಆಮ್ಲವಿರುವ ಇದು ದೇಹದ ತೂಕವನ್ನು ಕಡಿಮೆ ಮಾಡಬಲ್ಲದು. 

- ಎಲಾಸ್ಟೇಸ್ ಎಂಬ  ಕಿಣ್ವ ಹೊಂದಿರುವ ಇದು ಚರ್ಮದ ಸುಕ್ಕು ನತ್ತು ಒಡಕನ್ನು ಕಡಿಮೆ ಮಾಡುತ್ತದೆ. 

- ಸಂಧಿವಾತ, ಕ್ಯಾನ್ಸರ್, ಮಧುಮೇಹ ಮತ್ತು ಮರುಗುಳಿ ರೋಗವನ್ನು ನಿವಾರಿಸುವ ಶಕ್ತಿ ಕೋಕಂಗಿದೆ.

-  ಒತ್ತಡ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

- ಯಕೃತ್‌ಗೆ ಕಾಡಬಹುದಾದ ಕೆಟ್ಟ ಅಂಶಗಳಿಂದ ದೂರವಿಟ್ಟು, ಪಿತ್ತ ದೋಷವನ್ನು ನಿವಾರಿಸುವಲ್ಲಿ ಇದರಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಔಷಧ ಮತ್ತೊಂದಿಲ್ಲ. ಪಿತ್ತ ದೋಷವನ್ನು ನಿಯಂತ್ರಿಸಿ, ದೇಹವನ್ನು ತಂಪಗಾಗಿಡುತ್ತದೆ. 

- ಊಟದ ಬಳಿಕ ಒಂದು ಲೋಟ ಕೋಕಂ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

Video Top Stories