ಕಡಲೆಬೇಳೆ, ಪುದೀನಾ ಮತ್ತು ಮಸಾಲೆಗಳನ್ನು ಬಳಸಿ ಸ್ಟ್ರೀಟ್ ಫುಡ್ ಶೈಲಿಯ ಗರಿಗರಿ ಮಸಾಲಾ ವಡಾ ತಯಾರಿಸುವ ಸುಲಭ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಎಣ್ಣೆಯಲ್ಲಿ ಕರಿಯುವ ಸಾಂಪ್ರದಾಯಿಕ ವಿಧಾನದ ಜೊತೆಗೆ, ಏರ್ ಫ್ರೈಯರ್ ಮತ್ತು ಓವನ್ ಬಳಸಿ ಆರೋಗ್ಯಕರವಾಗಿ ವಡಾ ಮಾಡುವ ಬಗೆಯನ್ನೂ ತಿಳಿಸಲಾಗಿದೆ.
ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತೀಯರಿಗೆ ಇಡ್ಲಿಯೊಂದಿಗೆ, ಚಿತ್ರಾನ್ನ, ಪಲಾವ್ ಜೊತೆ ಒಂದು ವಡಾ ಇರಲೇಬೇಕು. ಇಲ್ಲದಿದ್ರೆ ತಿಂಡಿ ಪೂರ್ಣವಾಗಲ್ಲ. ಹೀಗಾಗಿ ಯಾವುದೇ ಹೋಟೆಲ್‌ಗೆ ಹೋದ್ರೂ ಇಡ್ಲಿಯೊಂದಿಗೆ, ಚಿತ್ರಾನ್ನದೊಂದಿಗೆ ಒಂದು ವಡಾ ನಮ್ಮನ್ನು ಕೇಳದೆಯೂ ಸೇರಿಸಿಯೇ ಕೊಡುತ್ತಾರೆ. ಕೆಲವರಿಗೆ ಸಂಜೆಯ ಚಹಾದೊಂದಿಗೆ ಬಿಸಿ ಬಿಸಿ ವಡಾ ತಿಂದರಂತೂ ಸ್ವರ್ಗ. ಅಷ್ಟರಮಟ್ಟಿಗೆ ನಮ್ಮಲ್ಲಿ ಗರಿಗರಿ ವಡಾ ಒಂದು ಬೇಕೇಬೇಕು ಎಸಿಸುವಂತಹ ತಿಂಡಿ ಎಂಬ ತಪ್ಪಾಗಲಾರದು.
ವಡಾದಲ್ಲೂ ಬೇರೆ ಬೇರೆ ವರೈಟಿಗಳಿವೆ. ಎಲ್ಲವೂ ಒಂದು ರುಚಿಯಾದರೆ ಕಡಲೆ ಬೇಳೆಯಿಂದ(ಚಣಾ ದಾಲ್ ವಡಾ) ತಯಾರಿಸುವ ವಡಾದ ರುಚಿಯೇ ಬೇರೆ. ಇದನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ತಯಾರಿಸುವ ವಿಧಾನ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ:ಪಕ್ಕಾ ದಾವಣಗೆರೆ ಸ್ಟೈಲ್ ಬೆಣ್ಣೆ ದೋಸೆ ಮನೆಯಲ್ಲೇ ಮಾಡ್ಬೇಕಾ? ಮರಿದೇ ಈ ಪದಾರ್ಥ ಹಾಕಿ
ಮಸಾಲಾ ವಡಾ ರೆಸಿಪಿ (ಏರ್ ಫ್ರೈಯರ್ ಮತ್ತು ಓವನ್ ಬೇಕ್ಡ್ ): ಮಸಾಲಾ ವಡಾವನ್ನು ಚಣಾ ದಾಲ್(ಕಡಲೆಬೇಳೆ) ವಡಾ ಅಥವಾ ಪರುಪ್ಪು ವಡೈ ಎಂದೂ ಕರೆಯುತ್ತಾರೆ. ಇದು ಕಡಲೆಬೇಳೆ ಮಸಾಲೆ, ಈರುಳ್ಳಿ ಮತ್ತು ಹಸಿರು ಸೊಪ್ಪಿನಿಂದ ತಯಾರಿಸಲಾಗುತ್ತೆ. ನೀವು ಬೆಂಗಳೂರಿನಂತಹ ನಗರಗಳಲ್ಲಿ ವಾಸಿಸುತ್ತಿದ್ದರೆ ಸಂಜೆಯ ಸ್ಟೀಟ್ ಫುಡ್, ಬೀದಿ ಬದಿ ಅಂಗಡಿಗಳಲ್ಲಿ ಈ ತಿನಿಸು ಸವಿದಿರುತ್ತೀರಿ. ಹೆಚ್ಚಿನವರಿಗೆ ಇದನ್ನ ಮನೆಯಲ್ಲೇ ತಯಾರಿಸುವ ರೆಸಿಪಿ ಗೊತ್ತಿಲ್ಲ. ಹೀಗಾಗಿ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುವ ಚಣಾ ದಾಲ್ ವಡಾ ಹೇಗೆ ಮಾಡುವುದು ಎಂಬುದನ್ನ ಇಲ್ಲಿ ತಿಳಿಸಿಕೊಡುತ್ತೇವೆ.
ಮಸಲಾ ವಡಾ ಎಂದರೇನೆ ಮಸಾಲೆಗಳ ಮಿಶ್ರಣ. ವಡಾ ಎಂದರೆ ಹುರಿದ ಬೇಳೆಯ ತಿಂಡಿ. ಆದ್ದರಿಂದ ಮಸಾಲಾ ವಡಾ ಎಂದರೆ ದಾಲ್ ಮತ್ತು ಮಸಾಲೆಗಳಿಂದ ತಯಾರಿಸಿದ ಹುರಿದ ತಿಂಡಿ.
ನೆನೆಸಿದ ಚಣಾ ದಾಲ್(ಕಡಲೆ ಬೇಳೆ) ಅನ್ನು ಸ್ವಲ್ಪ ಒರಟಾಗಿ ರುಬ್ಬಿ, ಮಸಾಲೆ, ಈರುಳ್ಳಿ ಮತ್ತು ಹಸಿರು ಸೊಪ್ಪು ಸೇರಿಸಿ ಹಿಟ್ಟು ಮಾಡಿಕೊಳ್ಳಿ. ಚಿತ್ರದಲ್ಲಿ ತೋರಿಸುವಂತೆ ಸಣ್ಣ ಸಣ್ಣ ವೃತ್ತಾಕಾರ ಎಣ್ಣೆಯಲ್ಲಿ ಹೆಚ್ಚು ಹೊತ್ತು ಹುರಿಯುತ್ತಾರೆ. ಸ್ಟ್ರೀಟ್‌ಫುಡ್ ಶೈಲಿಯ ಮಸಾಲಾ ವಡಾ ಬೇಕಾದರೆ ಈ ರೆಸಿಪಿ ನಿಮಗೆ ಸೂಕ್ತ. ಇದು ರುಚಿಕರ, ರುಚಿಯಾದ ಮತ್ತು ಗರಿಗರಿಯಾಗಿರುತ್ತೆ. ವಿಜಯನಗರ, ಗಾಂಧಿನಗರದಂತಹ ಸ್ಟ್ರೀಟ್‌ಫುಡ್‌ಗಳಲ್ಲಿ ಮಸಾಲಾ ವಡಾಗಳು ಪುದೀನ ಸೊಪ್ಪು, ಪುಡಿಮಾಡಿದ ಮಸಾಲೆಗಳು (ವಿಶೇಷವಾಗಿ ದಾಲ್ಚಿನ್ನಿ) ಸೇರಿಸುವುದರಿಂದ ಹೆಚ್ಚು ಘಮ್ಮೆನ್ನುತ್ತವೆ.
ಮಸಲಾ ವಡಾ ಹೇಗೆ ತಯಾರಿಸುವುದು ಸ್ಟೆಪ್ ಬೈ ಸ್ಟೆಪ್ ಇಲ್ಲಿದೆ
ಹಾಗಾದರೆ ಸ್ಟ್ರೀಟ್‌ಫುಡ್ ಶೈಲಿಯ ಘಮ್ಮೆನ್ನುವ ಮಸಾಲಾ ವಡಾ ಮನೆಯ್ಲೇ ಹೇಗೆ ಮಾಡುವುದು? ತಯಾರಿಸುವುದ ವಿಧಾನ:
ಮೊದಲನೇ ಹಂತ: 1 ಕಪ್ ಚಣಾ ದಾಲ್(ಕಡಲೆಬೇಳೆ) ತೆಗೆದುಕೊಳ್ಳಿ. ಎರಡು ಮೂರು ಬಾರಿ ಸ್ವಚ್ಛವಾದ ನೀರಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಬಳಿಕ 2 ಗಂಟೆ ನೀರಿನಲ್ಲಿ ನೆನೆಸಿ. ನೀರನ್ನು ಬಸಿದು ಬದಿಗಿಡಿ. ದಾಲ್‌ನಲ್ಲಿ ನೀರು ಇರಬಾರದು. ಹೆಚ್ಚು ನೆನೆಸಬೇಡಿ. ಚಣಾ ದಾಲ್ ಸಂಪೂರ್ಣವಾಗಿ ಮೃದುವಾಗಿ, ಗಟ್ಟಿ ಭಾಗವಿಲ್ಲದೆ ನೆನೆಸಿರಬೇಕು.
ಈಗ ಬ್ಲೆಂಡರ್ ಜಾರ್‌ಗೆ ಸೇರಿಸಿ:
- ¾ ಟೀಸ್ಪೂನ್ ಜೀರಿಗೆ (ಕ್ಯೂಮಿನ್ ಸೀಡ್ಸ್)
- ¾ ಟೀಸ್ಪೂನ್ ಸೊಂಪು (ಫೆನ್ನಲ್ ಸೀಡ್ಸ್)
- 1 ರಿಂದ 2 ಒಣ ಕೆಂಪು ಮೆಣಸಿನಕಾಯಿ (ಮಕ್ಕಳಿಗಾಗಿ ತಯಾರಿಸಿದ್ರೆ ಕಡಿಮೆ ಮಾಡಿ)
- 1 ಇಂಚು ದಾಲ್ಚಿನ್ನಿ ತುಂಡು ಹಾಕಿ
- ಸ್ವಲ್ಪ ಒರಟಾದ ಪುಡಿ ಮಾಡಿ. ಬದಿಗಿಡಿ.
ದಾಲ್‌ನಿಂದ ನೀರನ್ನು ಬಸಿಯಿರಿ. 2 ಚಮಚದಷ್ಟು ನೆನೆಸಿದ ದಾಲ್ ಅನ್ನು ಮಸಾಲಾ ಪುಡಿಯೊಂದಿಗೆ ಬದಿಗಿಡಿ. ಉಳಿದ ನೆನೆಸಿದ ದಾಲ್, ½ ಟೀಸ್ಪೂನ್ ಉಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಕೆಲವು ದಾಲ್ ಹಾಗೆಯೇ ಇರಬೇಕು (ಟೆಕ್ಸ್ಚರ್‌ಗಾಗಿ). ಈಗ ಮಿಕ್ಸಿಂಗ್ ಬೌಲ್‌ಗೆ ರುಬ್ಬಿದ ಚಣಾ ದಾಲ್ ಮಿಶ್ರಣ ಮತ್ತು ಬದಿಗಿಟ್ಟ ದಾಲ್ ಸೇರಿಸಿ.
ಇದನ್ನು ಸೇರಿಸಿ:
- 1 ಹೆಚ್ಚು ಕತ್ತರಿಸಿದ ಈರುಳ್ಳಿ
- ಹಿಡಿತುಂಬಾ ಕತ್ತರಿಸಿದ ಪುದೀನ ಸೊಪ್ಪು (ಇಲ್ಲದಿದ್ದರೆ ಬಿಟ್ಟುಬಿಡಿ)
- ಬೇಕಾದಷ್ಟು ಕರಿಬೇವಿನ ಎಲೆಗಳು
- 1 ರಿಂದ 2 ಕತ್ತರಿಸಿದ ಹಸಿರು ಮೆಣಸಿನಕಾಯಿ
- 1¼ ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
- ರುಬ್ಬಿದ ಮಸಾಲೆಗಳು
ಮಸಾಲಾ ವಡಾ ಆಕಾರ ಮಾಡುವುದು
ಎಲ್ಲವನ್ನೂ ಚೆನ್ನಾಗಿ ಕಲೆಸಿ ಮಿಶ್ರಣ ಮಾಡಿ. ಸಣ್ಣ ಭಾಗವನ್ನು ತೆಗೆದು ವಡಾ ಆಕಾರಕ್ಕೆ ಮಾಡಿ ನೋಡಿ. ಅದು ದುಂಡಾಕಾರದಲ್ಲಿ ಇರಬೇಕು ಮುರಿಯಬಾರದು. ಹೀಗೆ ಒಂದೊಂದಾಿ 9 ಭಾಗಗಳಾಗಿ ವಿಭಾಗಿಸಿ. ಸಣ್ಣ ಭಾಗವನ್ನು ತೆಗೆದುಕೊಂಡು ಅಂಗೈಯಲ್ಲಿ ಒತ್ತಿ ದುಂಡಗೆ ಮಾಡಿ ನಂತರ ಚಪ್ಪಟೆಯಾಗಿಸಿ ಹುರಿಯಿರಿ.(ಕೆಳಗಿನ ಚಿತ್ರ ನೋಡ.)

ಹುರಿಯುವುದು ಹೇಗೆ?
ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಬಿಸಿಮಾಡಿ. ಮೊದಲಿಗೆ ಸಣ್ಣ ಭಾಗವನ್ನು ಹಾಕಿ ಪರೀಕ್ಷಿಸಿ. ಅದು ಕಂದು ಬಣ್ಣವಾಗದೆ ಮೇಲಕ್ಕೆ ಬರಬೇಕು. ವಡಾಗಳನ್ನು ಒಂದೊಂದಾಗಿ ಸ್ಲೈಡ್ ಮಾಡಿ (ಪ್ರತಿ ಬ್ಯಾಚ್‌ನಲ್ಲಿ 3). 2 ನಿಮಿಷಗಳು ಚೆನ್ನಾಗಿ ಹುರಿಯಲಿ. ನಂತರ ತಿರುಗಿಸಿ ಎರಡೂ ಬದಿಗಳಲ್ಲಿ ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಹುರಿಯಿರಿ. ನಂತರ ಮುಂದಿನ ಬ್ಯಾಚ್‌ಗೆ ಎಣ್ಣೆ ಸರಿಯಾದ ಬಿಸಿಯಿರಲಿ. ಒಟ್ಟಿಗೆ ಹೆಚ್ಚು ಹಾಕಬೇಡಿ.
ಈಗ ಮಸಾಲಾ ವಡಾ ರೆಡಿ:
ಮಸಾಲಾ ವಡಾವನ್ನು ಬಿಸಿಯಾಗಿ ಸಾಸ್ ಅಥವಾ ಕೊಬ್ಬರಿ ಚಟ್ನಿಯೊಂದಿಗೆ ಬಡಿಸಿ. ಮಸಾಲಾ ವಡಾಗಳನ್ನು ಹೆಚ್ಚಿನ ದಕ್ಷಿಣ ಭಾರತೀಯ ಮನೆಗಳಲ್ಲಿ ಹಬ್ಬಗಳಲ್ಲಿ ತಯಾರಿಸುತ್ತಾರೆ. ಚಹಾದೊಂದಿಗೆ ತಿಂಡಿಯಾಗಿ ಅಥವಾ ಕಾಯಿ ಚಟ್ನಿಯೊಂದಿಗೆ ಬೆಳಗಿನ ಉಪಾಹಾರವಾಗಿ ತಿನ್ನುತ್ತಾರೆ. ಹಬ್ಬದ ಊಟದ ಭಾಗವಾಗಿಯೂ ನೀಡಬಹುದು
ಏರ್ ಫ್ರೈಯರ್ ಮತ್ತು ಓವನ್ ಬೇಕ್ಡ್ ಏರ್ ಫ್ರೈಯರ್‌ನಲ್ಲಿ ಮಾಡಿದವು ಆರೋಗ್ಯಕರವಾಗಿರುತ್ತವೆ. ಮಸಾಲಾ ವಡಾ ಹಿಟ್ಟನ್ನು 4-5 ದಿನಗಳು ಫ್ರಿಜ್‌ನಲ್ಲಿ ಇಡಬಹುದು (ಈರುಳ್ಳಿ ಸೇರಿಸಬಾರದು). ಮೇಲಿನ ಚಿತ್ರದಲ್ಲಿ ತೋರಿಸಿದಂತೆ ದುಂಡಗೆ ಮಾಡಿ ಪಾರ್ಚ್‌ಮೆಂಟ್ ಪೇಪರ್‌ನಲ್ಲಿ ಇರಿಸಿ. ಏರ್ ಫ್ರೈಯರ್: 180°C / 350°F ನಲ್ಲಿ 15 ನಿಮಿಷ ಪ್ರೀಹೀಟ್ (ಅಗತ್ಯವಿದ್ದರೆ). 10 ನಿಮಿಷ ಏರ್ ಫ್ರೈ ಮಾಡಿ, ತಿರುಗಿಸಿ ಇನ್ನೊಂದು 6-8 ನಿಮಿಷ. ಕೊನೆಯಲ್ಲಿ ಸ್ವಲ್ಪ ಎಣ್ಣೆ/ತುಪ್ಪ ಹಚ್ಚಿ. 200°C / 390°F ನಲ್ಲಿ 15 ನಿಮಿಷ ಪ್ರೀಹೀಟ್. 12 ನಿಮಿಷ ಹುರಿದು ನಂತರ ತೆಗೆಯಿರಿ.
ಗಮನಿಸಿ:
- ಕಡಲೆಬೇಳೆ ಕೇವಲ 2 ಗಂಟೆ ನೆನೆಸಿ (ಹೆಚ್ಚು ನೆನೆಸಿದರೆ ಗರಿಗರಿಯಾಗುವುದಿಲ್ಲ).
- ಮಸಾಲೆಗಳು ಮತ್ತು ಪುದೀನವನ್ನು ಬಿಟ್ಟುಬಿಡಬೇಡಿ (ರುಚಿಗೆ ಮುಖ್ಯ).
- ಈರುಳ್ಳಿ-ಬೆಳ್ಳುಳ್ಳಿ ಬೇಡವಾದರೆ ಬಿಟ್ಟುಬಿಡಿ, ಆದರೆ ಶುಂಠಿಯನ್ನು ಬಿಡಬೇಡಿ.
- ಒರಟು ಮತ್ತು ದಪ್ಪ ಮಿಶ್ರಣ ಮುಖ್ಯ (ಹೆಚ್ಚು ತೇವವಿದ್ದರೆ ಗರಿಗರಿಯಾಗುವುದಿಲ್ಲ).
- ಸಾಂಪ್ರದಾಯಿಕವಾಗಿ ಹಿಟ್ಟು ಸೇರಿಸುವುದಿಲ್ಲ. ತುಂಬಾ ತೇವವಿದ್ದರೆ ಸ್ವಲ್ಪ ಅಕ್ಕಿ ಹಿಟ್ಟು ಅಥವಾ ಪುಡಿಮಾಡಿದ ಅವಲಕ್ಕಿ ಸೇರಿಸಿ.
- ಚಪ್ಪಟೆ ಮತ್ತು ಸ್ವಲ್ಪ ತೆಳುವಾಗಿ ಮಾಡಿ


