Kannada

ಮಸಾಲೆ ರುಬ್ಬದೇ 10 ನಿಮಿಷದಲ್ಲಿ ಚಿಕನ್ ರೆಸಿಪಿ!

ಅತಿ ಕಡಿಮೆ ಸಮಯದಲ್ಲಿ, ಹೋಟೆಲ್ ಶೈಲಿಯಲ್ಲಿ ರುಚಿಯಾದ ಚಿಕನ್ ಗ್ರೇವಿ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ!

Kannada

ಬೇಕಾಗುವ ಪದಾರ್ಥಗಳು

ಚಿಕನ್ - ಅರ್ಧ ಕೆ.ಜಿ (ತೊಳೆಯಿರಿ)

ಈರುಳ್ಳಿ - 2 (ಸಣ್ಣಗೆ ಹೆಚ್ಚಿದವು)

ಟೊಮೆಟೊ - 2 (ಸಣ್ಣಗೆ ಹೆಚ್ಚಿದವು)

ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ

Image credits: Gemini AI
Kannada

ಮಸಾಲೆ ಪುಡಿಗಳು

ಅರಿಶಿನ ಪುಡಿ - ಅರ್ಧ ಚಮಚ

ಅಚ್ಚ ಖಾರದ ಪುಡಿ - 1 ರಿಂದ 2 ಚಮಚ

ಧನಿಯಾ ಪುಡಿ - 1 ಚಮಚ

ಗರಂ ಮಸಾಲ - ಅರ್ಧ ಚಮಚ

ಉಪ್ಪು - ರುಚಿಗೆ ತಕ್ಕಷ್ಟು

Image credits: Gemini AI
Kannada

ಒಗ್ಗರಣೆ ಮತ್ತು ಫ್ರೈ

ಕುಕ್ಕರ್‌ನಲ್ಲಿ 2 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಗೋಲ್ಡನ್ ಬ್ರೌನ್ ಬರುವವರೆಗೆ ಬಾಡಿಸಿ. ಬಳಿಕ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೂ ಬೇಯಿಸಿ.

Image credits: Gemini AI
Kannada

ಚಿಕನ್ ಮತ್ತು ಮಸಾಲೆ ಮಿಕ್ಸ್

ಈಗ ತೊಳೆದ ಚಿಕನ್ ತುಂಡುಗಳು, ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 2 ನಿಮಿಷ ಎಣ್ಣೆಯಲ್ಲೇ ಫ್ರೈ ಮಾಡಿ.

Image credits: Gemini AI
Kannada

2 ವಿಸಿಲ್ ಸಾಕು, ರುಚಿ ಸವಿಯಿರಿ!

ಅರ್ಧ ಗ್ಲಾಸ್ ನೀರು ಸೇರಿಸಿ, ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಸಿಲ್ ಕೂಗಿಸಿ. ಅಷ್ಟೇ! 10 ನಿಮಿಷದಲ್ಲಿ ಬಿಸಿಬಿಸಿಯಾದ ಮಸಾಲೆ ರಹಿತ ಚಿಕನ್ ಗ್ರೇವಿ ಸಿದ್ಧ!

Image credits: Gemini AI

Curd Benefits: ದಿನಾ ಮೊಸರು ತಿಂದ್ರೆ ಸಿಗುವ ಆರೋಗ್ಯ ಪ್ರಯೋಜನಗಳಿವು

ಮಜ್ಜಿಗೆ ಹುಳಿ ಸಂಜೆಯಾದ್ರೂ ಹುಳಿಯಾಗಬಾರದೆಂದರೆ ಇಷ್ಟು ಮಾಡಿ ಸಾಕು

Jalebi Recipe: ಮನೆಯಲ್ಲೇ ಗರಿಗರಿಯಾದ ಜಿಲೇಬಿ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಪ್ರೊಸೆಸ್

​ಬಾಯಲ್ಲಿಟ್ಟರೆ ಕರಗುವಂತಹ ನೀರಿನ ದೋಸೆ ಬೇಕಾ? ಈ 5 ಟಿಪ್ಸ್ ಫಾಲೋ ಮಾಡಿದ್ರೆ ಸಾಕು