ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಮಳೆಗಾಲದ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಕುರಿತು ಸಭೆ ನಡೆಸಿ, ರಾಜ್ಯದಲ್ಲಿ H1N1 ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಿಸಿ ನೀರು ಕುಡಿಯುವುದು, ಮಾಸ್ಕ್ ಧರಿಸುವುದು ಸೇರಿದಂತೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಿದ್ದಾರೆ.

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಪ್ರತಿ ಜಿಲ್ಲೆಗಳ ಆರೋಗ್ಯಾಧಿಕಾರಿಗಳ ಜೊತೆ ಸಾಂಕ್ರಾಮಿಕ ರೋಗ ತಡೆಗಟ್ಟುವ ಬಗ್ಗೆ ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಆ ಬಳಿಕ ಮಾತನಾಡಿದ ಸಚಿವರು, ಮಳೆಗಾಲದ ಸಂದರ್ಭದಲ್ಲಿ ಕೆಲವು ವೈರಸ್ ಹರಡುತ್ತವೆ. ನಮ್ಮ ರಾಜ್ಯದಲ್ಲಿ H1N1 ಅತ್ಯಂತ ಕಡಿಮೆ ಇದೆ. ಆದರೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದ್ದಾರೆ.

H1N1 ಆತಂಕ: ಸಚಿವ ಖಾದರ್ ನೀಡಿದ ಎಚ್ಚರಿಕೆಯ ಕರೆ

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಖಾದರ್ ಅವರು, ಫೆಬ್ರವರಿ ತಿಂಗಳಿಂದ ಈವರೆಗೆ 4,212 ಎಚ್1ಎನ್1 ಪ್ರಕರಣಗಳು ವರದಿಯಾಗಿದೆ. ಎಲ್ಲರೂ ಕೂಡ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜಿಬಿಎ ವ್ಯಾಪ್ತಿಯಲ್ಲೇ ಹೆಚ್ಚು ಕೇಸ್ ದಾಖಲಾಗಿವೆ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬಿಸಿ ನೀರು ಕುಡಿಯುವುದು ಒಳ್ಳೆಯದು, ಶೀತ, ಜ್ವರ ಬಂದರೆ ಮತ್ತೊಬ್ಬರ ಸಂಪರ್ಕಕ್ಕೆ ಹೋಗಬೇಡಿ. ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ ಮಾಸ್ಕ್ ಧರಿಸಿ ಹೋಗಬೇಕು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೊರಗೆ ಹೋಗಬೇಕು. ಯಾರಿಗೇ ಆದರೂ ಹೆಚ್ಚು ದಿನ ಜ್ವರ, ಶೀತದಂತ ಲಕ್ಷಣ ಕಂಡು ಬಂದ್ರೆ ತಪಾಸಣೆ ಮಾಡಿ. ಈವರೆಗೆ H1N1 ನಿಂದ ಯಾವುದೇ ಅಧಿಕೃತ ಸಾವು ಸಂಭವಿಸಿದ ಬಗ್ಗೆ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಮಾರ್ಗಸೂಚಿಗಳು

  • ಸೋಂಕು ದೃಢಪಟ್ಟವರು ಮನೆಯಲ್ಲಿ ಪ್ರತ್ಯೇಕವಾಗಿ ಇರಬೇಕು
  • ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು
  • ಕುಡಿಯಲು ಬಿಸಿ ನೀರನ್ನು ಮಾತ್ರ ಬಳಸಿ
  • ಕೈಗಳಿಂದ ಕಣ್ಣು, ಮೂಗು, ಬಾಯಿ ಮುಟ್ಟುವುದನ್ನು ತಪ್ಪಿಸಿ
  • ವೈದ್ಯರ ಪರ ತಪಾಸಣೆ ಮಾಡಿಸಿ, ಸ್ವಯಂ ಚಿಕಿತ್ಸೆ ಪಡೆದುಕೊಳ್ಳಬೇಡಿ
  • ಕೆಮ್ಮುವಾಗ ಬಟ್ಟೆ ಕರವಸ್ತ್ರ ಬಳಕೆ ಮಾಡಿ
  • ಜನರು ಹೆಚ್ಚು ಇರುವ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸಿ

ಬಿಜೆಪಿ ನಾಯಕರಿಗೆ ತಿರುಗೇಟು

ಇನ್ನು, ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಖಾದರ್, ಬಿಜೆಪಿಯವರು ಯಾವ ಉದ್ದೇಶಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ ಸ್ಪಷ್ಟವಾಗಿ ಹೇಳಲಿ. ಸುಮ್ಮನೆ ಅಧಿವೇಶನದಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ. ಏನಾದರೂ ಸಮಸ್ಯೆ ಇದ್ದಾಗ ಒಂದು ನೋಟಿಸ್ ಕೊಟ್ಟು ಚರ್ಚೆಗೆ ಕೇಳಬೇಕು. ಅದೆಲ್ಲ ಬಿಟ್ಟು 10 ದಿನಗಳಿಂದ ಸದನ ನಡೆಯಲು ಬಿಡುತ್ತಿಲ್ಲ. ಬಿಜೆಪಿಯವರು ರಾಜ್ಯದ ಜನತೆಗೆ ಮಾಡುತ್ತಿರುವ ಅನ್ಯಾಯ. ಸ್ಪೀಕರ್ ಗೆ ನೋಟಿ ಕೊಟ್ಟು ನಾಗೇಂದ್ರ ಯಾಕೆ ರಾಜೀನಾಮೆ ನೀಡಬೇಕು ಅಂತ ಹೇಳಲಿ. ನಾಗೇಂದ್ರರಿಗೆ ಸಚಿವ ಸ್ಥಾನ ಯಾಕೆ ನೀಡಿದ್ದು ಅಂತ ಸರ್ಕಾರ ಹೇಳುತ್ತೆ. ಇದನ್ನು ಬಿಟ್ಟು ಸುಮ್ಮನೆ ಪ್ರತಿಭಟನೆ ಹೆಸರಲ್ಲಿ ಸದನ ಹಾಳು ಮಾಡಬಾರದು.

ಈ ಹಿಂದೆ ನಾಗೇಂದ್ರ ವಿರುದ್ಧ ಆರೋಪ ಕೇಳಿ ಬಂದಾಗ ಎರಡು ದಿನದಲ್ಲೇ ರಾಜೀನಾಮೆ ಪಡೆಯಲಾಯಿತು. ತನಿಖೆ ಎದುರಿಸಿ ತಪ್ಪಿಲ್ಲ ಎಂದಾಗ ಬೇಲ್ ಪಡೆದು ಹೊರ ಬಂದಿದ್ದಾರೆ. ಇವರ ತಪ್ಪಿಲ್ಲ ಅಧಿಕಾರಿಗಳ ಲೋಪ ಇದೆ ಎಂದಾಗ ಕೋರ್ಟ್ ಅವರಿಗೆ ಬೇಲ್ ಕೊಟ್ಟಿದೆ. ನಾಗೇಂದ್ರ ವಿರುದ್ಧ ಹಾಗೇನಾದರೂ ಇದಿದ್ದರೆ ರಾಜ್ಯಪಾಲರು ಅವರಿಗೆ ಪ್ರಮಾಣ ವಚನ ಬೋಧಿಸುತ್ತಿರಲಿಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.