
ಕನ್ನಡಪ್ರಭ- ಸುವರ್ಣನ್ಯೂಸ್ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
ಮಾನವ - ವನ್ಯಜೀವಿಗಳ ಸಹಬಾಳ್ವೆಗೆ ಕೈ ಜೋಡಿಸೋಣ. ಜನತೆಯಲ್ಲಿ ಕಾನೂನು ಜಾಗೃತಿ ಮೂಡಿಸೋಣ ಎಂದರು. ಜೊತೆಗೆ ಕಾಡಿನ ಜನರೊಂದಿಗೆ ಮಾತುಕತೆ ನಡೆಸಿದ್ದು, ಸಂದೇಶವನ್ನು ನಟ ಗಣೇಶ್ ಕೊಟ್ಟಿದ್ದಾರೆ.
ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಗಳು ಅರಣ್ಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿರುವ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ದ 5ನೇ ಆವೃತ್ತಿಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ರಾಯಭಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಗಣೇಶ್, ಮಲೆ ಮಹದೇಶ್ವರ ವನ್ಯಧಾಮಕ್ಕೆ ಅರಣ್ಯಾಧಿಕಾರಿಗಳ ಜೊತೆ ಭೇಟಿ ನೀಡಿದರು. ಜೊತೆಗೆ ಕಾಡಿನಿಂದ ನಾಡು ಎನ್ನುವುದು ಕೇವಲ ಘೋಷಣೆ ಆಗಿಯೇ ಉಳಿಯಬಾರದು. ಮಾನವ - ವನ್ಯಜೀವಿಗಳ ಸಹಬಾಳ್ವೆಗೆ ಕೈ ಜೋಡಿಸೋಣ. ಜನತೆಯಲ್ಲಿ ಕಾನೂನು ಜಾಗೃತಿ ಮೂಡಿಸೋಣ ಎಂದರು. ಜೊತೆಗೆ ಕಾಡಿನ ಜನರೊಂದಿಗೆ ಮಾತುಕತೆ ನಡೆಸಿದ್ದು, ಸಂದೇಶವನ್ನು ನಟ ಗಣೇಶ್ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.