Asianet Suvarna News Asianet Suvarna News

ಮತಚೀಟಿ ಅಕ್ರಮ: ಕಣ್ಣೀರು ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ

May 13, 2018, 7:12 PM IST

ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರದ ಮತಚೀಟಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಸುವರ್ಣನ್ಯೂಸ್‌ ಜೊತೆ ಖುದ್ದು ಬಂದು ಮಾತನಾಡಿದ ಮುನಿರತ್ನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ತನಗೂ, ಅಕ್ರಮ ಮತಚೀಟಿ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ, ತನ್ನ ತೇಜೋವಧೆ ಮಾಡಲು ಹುನ್ನಾರ ನಡೆದಿದೆಯೆಂದು ಮುನಿರತ್ನ ಈ ಸಂದರ್ಭದಲ್ಲಿ ಹೇಳಿದ್ದಾರೆ.