ಮಹಾನ್ ಸುಳ್ಳುಗಾರ ಮೋದಿ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಭಾರತದ ಇತಿಹಾಸದಲ್ಲಿ ಸುಳ್ಳು ಹೇಳುವ ಏಕೈಕ ವ್ಯಕ್ತಿ ಮೋದಿ. ಮೋದಿಯೊಬ್ಬರಿಗೆ 56 ಇಂಚಿನ ಎದೆಯಿರೋದಾ? ಬಾಡಿ ಬಿಲ್ಡರ್‌ಗಳಿಗೆ ಮೋದಿಗಿಂತ ದೊಡ್ಡದಾದ ಎದೆ ಇರುತ್ತೆ. ಬಡವರ ಬಗೆಗಿನ ಕಾಳಜಿಯ ಹೃದಯವಂತಿಕೆ ಇರಬೇಕು. ದೊಡ್ಡದಾದ ಎದೆಯಲ್ಲ, ಕರ್ನಾಟಕಕ್ಕೆ ಮೋದಿ ಎನು ಕೊಡುಗೆ ಕೊಟ್ಟಿದ್ದಾರೆ ಅದನ್ನ ಹೇಳಲಿ? ಸುಳ್ಳು ಹೇಳೊದ್ರಿಂದ ಹೊಟ್ಟೆ ತುಂಬಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ್ಮೇಲೆ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಕೇವಲ ಮೀಸೆ ಬಿಟ್ಟಿದ್ದಕ್ಕೆ ಹಾಗೂ ಕುದುರೆ ಏರಿದ್ದಕ್ಕೆ ಥಳಿಸಿದ್ದಾರೆ, ಇನ್ನೂ ಕೆಲವು ದಲಿತರನ್ನ ಕೊಂದಿದ್ದಾರೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು ಹೀಗೆ.

Comments 0
Add Comment