ರೆಸಾರ್ಟ್'ಗೂ ಮುನ್ನ ರಾಜಭವನ ಎದುರು ಶಾಸಕರ ಪರೇಡ್

ಬೆಂಗಳೂರು(ಮೇ.16): ಸರ್ಕಾರ ರಚನೆಗೆ ಮೂರು ಪಕ್ಷಗಳಿಂದ ಸರ್ಕಸ್ ಚಟುವಟಿಕೆ ಜೋರಾಗಿದೆ. ಕುದುರೆ ವ್ಯಾಪಾರದ ಭೀತಿಯಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜಭವನದ ಎದುರು ಪರೇಡ್ ನಡೆಸಿ ಅನಂತರ ಈಗಲ್ ಟನ್  ರೆಸಾರ್ಟ್'ಗೆ ತೆರಳಲಿದ್ದಾರೆ. 
ಶಾಸಕರ ಪರೇಡ್'ನೊಂದಿಗೆ ಕುಮಾರಸ್ವಾಮಿ, ಜಿ.ಪರಮೇಶ್ವರ್ ಸೇರಿದಂತೆ ಎರಡೂ ಪಕ್ಷದ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡಿ ಸಂಖ್ಯಾಬಲ ಹೆಚ್ಚಿರುವ ನಮಗೆ ಸರ್ಕಾರ ರಚಿಸುವಂತೆ ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ.    

Comments 0
Add Comment