ಮೆಗಾಸ್ಟಾರ್ ಚಿರಂಜೀವಿಯವರನ್ನು ಒಬ್ಬ ನಟಿ ಪ್ರೀತಿಯಿಂದ 'ನಲ್ಲ ಬಾವ' ಅಂತ ಕರೆಯುತ್ತಾರಂತೆ. ಹಾಗೆ ಕರೆದಾಗ ಚಿರಂಜೀವಿ ರಿಯಾಕ್ಷನ್ ಹೇಗಿತ್ತು? ಅವರ ಕುಟುಂಬದ ಜೊತೆ ಆ ನಟಿಗಿರುವ ಸಂಬಂಧವೇನು? ಈ ಸ್ಟೋರಿಯಲ್ಲಿದೆ ವಿವರ.
- Home
- News
- India News
- India News Live: ನಿರ್ದೇಶಕರ ಮುಂದೆ ಚಿರಂಜೀವಿಗೆ ಈ ನಿಕ್ ನೇಮ್‌ನಿಂದ ಕರೆದ ನಟಿ! ಮೆಗಾಸ್ಟಾರ್‌ಗೆ ಶಾಕ್ ಕೊಟ್ಟ ಸ್ಟಾರ್ ನಟಿ!
India News Live: ನಿರ್ದೇಶಕರ ಮುಂದೆ ಚಿರಂಜೀವಿಗೆ ಈ ನಿಕ್ ನೇಮ್‌ನಿಂದ ಕರೆದ ನಟಿ! ಮೆಗಾಸ್ಟಾರ್‌ಗೆ ಶಾಕ್ ಕೊಟ್ಟ ಸ್ಟಾರ್ ನಟಿ!

ನವದೆಹಲಿ (ಜ.30): ಗ್ಯಾರಂಟಿಯಿಂದ ರಾಜ್ಯಗಳ ಆರ್ಥಿಕತೆ ವಿನಾಶವಾಗಲಿದೆ ಎಂದು 2026ರ ಬಜೆಟ್ ಪೂರ್ವ ಕೇಂದ್ರ ಆರ್ಥಿಕ ಸಮೀಕ್ಷೆ ಎಚ್ಚರಿಕೆ ನೀಡಿದೆ. ನಗದು ವರ್ಗಾವಣೆಯಿಂದ ತಕ್ಷಣಕ್ಕೆ ಲಾಭ ಖಂಡಿತವಾಗಿ ಗೋಚರವಾಗಲಿದೆ, ಆದರೆ, ದೀರ್ಘಕಾಲದಲ್ಲಿ ಇದು ಆರ್ಥಿಕತೆಯ ಮೇಲೆ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದೆ. ಸದ್ಯ ಗ್ಯಾರಂಟಿ ರಾಜ್ಯಗಳ ಸಂಖ್ಯೆ ದೇಶದಲ್ಲಿ ಐದು ಪಟ್ಟು ಹೆಚ್ಚಳವಾಗಿದೆ. ವರ್ಷಕ್ಕೆ 1.7 ಲಕ್ಷ ಕೋಟಿ ಇದಕ್ಕಾಗಿಯೇ ವೆಚ್ಚವಾಗುತ್ತಿದೆ. ಫ್ರೀ ಸ್ಕೀಮ್ಗಳಿಂದ ಬೊಕ್ಕಸಕ್ಕೆ ಭಾರೀ ಪೆಟ್ಟು ಬೀಳುತ್ತಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 30th January: ನಿರ್ದೇಶಕರ ಮುಂದೆ ಚಿರಂಜೀವಿಗೆ ಈ ನಿಕ್ ನೇಮ್‌ನಿಂದ ಕರೆದ ನಟಿ! ಮೆಗಾಸ್ಟಾರ್‌ಗೆ ಶಾಕ್ ಕೊಟ್ಟ ಸ್ಟಾರ್ ನಟಿ!
India News Live 30th January: ವೇಟರ್ ವೇಷದಲ್ಲಿ ಮದುವೆ ಮನೆಗೆ ಬಂದು ಕಳ್ಳನ ಕೈಚಳಕ - ಕೋಟಿ ಮೌಲ್ಯದ ಹಣ ಚಿನ್ನಾಭರಣದೊಂದಿಗೆ ಪರಾರಿ
ಮದುವೆ ಸಮಾರಂಭವೊಂದರಲ್ಲಿ, ವೇಟರ್ ವೇಷದಲ್ಲಿ ಬಂದ ಕಳ್ಳನೊಬ್ಬ ಸುಮಾರು 1 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣಗಳಿದ್ದ ಬ್ಯಾಗನ್ನು ಕದ್ದಿದ್ದಾನೆ. ವಧುವಿನ ತಂದೆ ಕುರ್ಚಿಯ ಮೇಲೆ ಇಟ್ಟಿದ್ದ ಬ್ಯಾಗನ್ನು ಕಳ್ಳ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
India News Live 30th January: ಕದ್ದು ಮುಚ್ಚಿ ಖ್ಯಾತ ನಟಿಯ ಗೋಲ್‌ಮಾಲ್, ಪ್ರಕರಣ ದಾಖಲಾದ ಬೆನ್ನಲ್ಲೇ ನಾಪತ್ತೆ
ಕದ್ದು ಮುಚ್ಚಿ ಖ್ಯಾತ ನಟಿಯ ಗೋಲ್‌ಮಾಲ್, ಸಿನಿಮಾ ಇಂಡಸ್ಟ್ರಿಯಲ್ಲಿ ಗುಸು ಗುಸು ಮಾತುಗಳು ಕೇಳಿಬರುತ್ತಿತ್ತು. ಆದರೆ ದೂರು ದಾಖಲಾಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಇತ್ತ ನಟಿ ನಾಪತ್ತೆಯಾಗಿದ್ದಾರೆ.
India News Live 30th January: ಅಪ್ಪ ಮಗನ ಮೇಲೆ ಚಿರತೆ ದಾಳಿ - ಮಗನ ಜೀವ ಉಳಿಸಲು ಚಿರತೆಯ ಕೊಂದ ರೈತನ ವಿರುದ್ಧ ಅರಣ್ಯ ಇಲಾಖೆ ಕೇಸ್
ಚಿರತೆಯೊಂದು ತಂದೆ-ಮಗನ ಮೇಲೆ ದಾಳಿ ಮಾಡಿದೆ. ತನ್ನ ಮಗನನ್ನು ರಕ್ಷಿಸಲು, 60 ವರ್ಷದ ತಂದೆ ಈಟಿ ಮತ್ತು ಕುಡುಗೋಲಿನಿಂದ ಚಿರತೆಯೊಂದಿಗೆ ಹೋರಾಡಿ ಅದನ್ನು ಕೊಂದಿದ್ದಾರೆ. ಈ ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಈಗ ಅರಣ್ಯ ಇಲಾಖೆ ಅವರ ವಿರುದ್ಧವೇ ಪ್ರಕರಣ ದಾಖಲಿಸಿದೆ.
India News Live 30th January: ಡಿಎಸ್‌ಪಿ ರಶ್ಮಿ ರಂಜನ್ ದಾಸ್‌ಗೆ ದೊಡ್ಡ ತಲೆನೋವಾದ ಕೆಂಪು ಕೂದಲು - ಏನಿದು ವಿವಾದ?
ಕರ್ತವ್ಯ ನಿರ್ವಹಿಸುತ್ತಿರುವ ಡಿಎಸ್‌ಪಿ ರಶ್ಮಿ ರಂಜನ್ ದಾಸ್ ತಮ್ಮ ಕೂದಲಿಗೆ ಕೆಂಪು ಬಣ್ಣ ಬಳಿದುಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದನ್ನು ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಿರುವ ಪೊಲೀಸ್ ಇಲಾಖೆ, ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ಬದಲಾಯಿಸುವಂತೆ ಅವರಿಗೆ ಸೂಚನೆ ನೀಡಿದೆ.
India News Live 30th January: ಅಜಿತ್ ಪವಾರ್ ವಿಮಾನ ಹತ್ತುವ ಮೊದಲೇ ವಿಕಿಪಿಡಿಯಾದಲ್ಲಿ ಸಾವಿನ ಸುದ್ದಿ! ಅಸಲಿ ಕೈವಾಡದ ಮಾಹಿತಿ ಇಲ್ಲಿದೆ
ಅಜಿತ್ ಪವಾರ್ ಅವರ ವಿಮಾನ ಅಪಘಾತದ ನಿಧನದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಅವರ ಸಾವಿಗೂ ಮುನ್ನವೇ ವಿಕಿಪಿಡಿಯಾದಲ್ಲಿ ಮಾಹಿತಿ ಅಪ್‌ಡೇಟ್ ಆಗಿದೆ ಎಂಬ ಸ್ಕ್ರೀನ್‌ಶಾಟ್‌ಗಳು ಗೊಂದಲ ಸೃಷ್ಟಿಸಿದ್ದವು.ಇದರ ಹಿಂದಿರೋ ಅಸಲಿಯತ್ತು ಏನು?
India News Live 30th January: ಕಣ್ಣಲ್ಲಿ ಮಷಿನ್ ಇಟ್ಕೊಂಡು ಯಾಮಾರಿಸ್ತಿದ್ದ ಸುಂದರಿ! ಈಕೆ ಮಾಡ್ತಿದ್ದ ಕಿತಾಪತಿ ಭಯಾನಕ ವಿಡಿಯೋ ವೈರಲ್
ಮಹಿಳೆಯೊಬ್ಬಳು ಕಣ್ಣಿನ ಕಾಂಟ್ಯಾಕ್ಟ್ ಲೆನ್ಸ್‌ನಲ್ಲಿ ವಿಶೇಷ ಚಿಪ್ ಅಳವಡಿಸಿಕೊಂಡು ಕ್ಯಾಸಿನೋದಲ್ಲಿ ಇಸ್ಪೀಟ್ ಆಟವಾಡಿ ಮೋಸ ಮಾಡುತ್ತಿದ್ದಳು. ಎದುರಾಳಿಗಳ ಕಾರ್ಡ್‌ಗಳನ್ನು ಪತ್ತೆಹಚ್ಚಿ ಕೋಟ್ಯಂತರ ರೂಪಾಯಿ ಗೆದ್ದಿದ್ದ ಈಕೆ, ದೂರಿನ ಮೇರೆಗೆ ಸಿಕ್ಕಿಬಿದ್ದಿದ್ದಾಳೆ.
India News Live 30th January: ಮುಂದಿನ ತಿಂಗಳು ಮದ್ವೆ ನಿಜನಾ - ಫ್ಯಾನ್ಸ್ ಕೇಳಿದ ಪ್ರಶ್ನೆಗೆ Rashmika Mandanna ಏನ್ ಹೇಳಿದ್ರು ನೋಡಿ
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಪಾಪರಾಜಿಗಳು ಮದುವೆಯ ಬಗ್ಗೆ ಪ್ರಶ್ನಿಸಿದಾಗ, ರಶ್ಮಿಕಾ ಜಾಣ್ಮೆಯಿಂದ ಉತ್ತರಿಸದೆ ನುಣುಚಿಕೊಂಡಿದ್ದಾರೆ. ಈ ನಡುವೆ, ಅವರ ಎಐ ಮದುವೆ ಫೋಟೋಗಳು ಸಹ ವೈರಲ್ ಆಗುತ್ತಿವೆ.
India News Live 30th January: ವಿದೇಶಿ ಮಹಿಳೆಗೆ 500 ಮೀಟರ್ ದೂರಕ್ಕೆ 18000 ರೂ ಚಾರ್ಜ್ ಮಾಡಿದ ಕ್ಯಾಬ್ ಚಾಲಕ ಅರೆಸ್ಟ್
ವಿದೇಶಿ ಮಹಿಳೆಗೆ 500 ಮೀಟರ್ ದೂರಕ್ಕೆ 18000 ರೂ ಚಾರ್ಜ್ ಮಾಡಿದ ಕ್ಯಾಬ್ ಚಾಲಕ ಅರೆಸ್ಟ್, ಎಕ್ಸ್ ಮೂಲಕ ಭಾರತದಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಚಾಲಕನ ಅರೆಸ್ಟ್ ಮಾಡಿದ್ದಾರೆ.
India News Live 30th January: ರಾತ್ರಿ ಪ್ರಯಾಣ ನಿಷೇಧಕ್ಕೆ ಪರಿಹಾರ, ಬಂಡೀಪುರಕ್ಕೆ ಸುರಂಗ ಮಾರ್ಗ, ಸಂಸದೆ ಪ್ರಿಯಾಂಕಾ ಗಾಂಧಿಗೆ ಸಚಿವ ಗಡ್ಕರಿ ಪತ್ರ
ಬಂಡೀಪುರ ಹುಲಿ ಅಭಯಾರಣ್ಯದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ–766ರಲ್ಲಿನ ರಾತ್ರಿ ಸಂಚಾರ ನಿಷೇಧಕ್ಕೆ ಶಾಶ್ವತ ಪರಿಹಾರವಾಗಿ ಸುರಂಗ ರಸ್ತೆ ನಿರ್ಮಾಣದ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಈ ಕುರಿತು ಅಧ್ಯಯನ ನಡೆಸಲು ಜಂಟಿ ತಜ್ಞರ ಕಾರ್ಯಪಡೆ ರಚಿಸಲಾಗಿದೆ.
India News Live 30th January: ಮದುವೆ ಆದ್ರೆ ಖಾಲಿ, ಲಿವಿಂಗ್ ಟುಗೆದರ್ ಅಂದ್ರೆ ಜಾಲಿ ಎಂದ ಬಿಗ್‌ಬಾಸ್ ಸ್ಪರ್ಧಿ!
ತೆಲುಗು ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ದಿವಿ ವಾದ್ತ್ಯಾ, ಮದುವೆ ವ್ಯವಸ್ಥೆಯ ಮೇಲೆ ತನಗೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ. ತನ್ನ ಸ್ನೇಹಿತರ ವಿಚ್ಛೇದನಗಳನ್ನು ನೋಡಿ ಮದುವೆಗಿಂತ ಪ್ರಾಮಾಣಿಕತೆಯಿರುವ ಲಿವಿಂಗ್ ಟುಗೆದರ್ ಸಂಬಂಧವೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
India News Live 30th January: ತನಗೆ ಅನ್ನ ಹಾಕಿದವನ 5 ವರ್ಷಗಳ ನಂತರವೂ ಗುರುತಿಸಿದ ಬೀದಿ ನಾಯಿ - ಶ್ವಾನ ಹಾಗೂ ಯುವಕನ ಭಾವುಕ ಪುನರ್ಮಿಲನ
ಐದು ವರ್ಷಗಳ ಹಿಂದೆ ತಾನು ಆರೈಕೆ ಮಾಡುತ್ತಿದ್ದ ಲಿಲ್ಲಿ ಎಂಬ ಬೀದಿ ನಾಯಿಯನ್ನು ಯುವಕನೊಬ್ಬ ಮತ್ತೆ ಭೇಟಿಯಾಗುತ್ತಾನೆ. ಆತ ಕರೆದ ತಕ್ಷಣ, ಶ್ವಾನವು ಅವನನ್ನು ಗುರುತಿಸಿ, ಪ್ರೀತಿಯಿಂದ ಅವನ ಮೇಲೆ ಹಾರಿ ತನ್ನ ವಾತ್ಸಲ್ಯ ತೋರಿದೆ. ಈ ಭಾವನಾತ್ಮಕ ಪುನರ್ಮಿಲನದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India News Live 30th January: ರಣವೀರ್ಗೆ ದೈವ ಶಿಕ್ಷೆ - ಬೇಡ ಬೇಡ ಎಂದರೂ ದೈವದ ಅನುಕರಣೆ! ಕ್ಷಮೆ ಕೇಳಿದರೂ ಬೆಂಗ್ಳೂರು ಅಳಿಯನಿಗೆ ಬೆಂಬಿಡದ ವಿವಾದ
ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ 'ಕಾಂತಾರ' ದೈವವನ್ನು ಅನುಕರಿಸಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ. ದೈವಾರಾಧಕರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನ್ಯಾಯಾಲಯದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ.
India News Live 30th January: ಹುಡುಗಿ ಸ್ಯಾಂಡ್‌ವಿಚ್ ಮಾರ್ತಿದ್ದಾಳೆ ಅಂತ ಮಗನ ಪ್ರೀತಿ ನಿರಾಕರಿಸಿದ ತಾಯಿ - ಕಾರಿನೊಳಗೆ ನಡೆಯಿತು ಅಮ್ಮ ಮಗನ ಗಲಾಟೆ
ಮಗ ಪ್ರೀತಿಸುತ್ತಿದ್ದ ಸ್ಯಾಂಡ್‌ವಿಚ್ ಮಾರುವ ಹುಡುಗಿಯನ್ನು ಪ್ರತಿಷ್ಠೆಯ ಕಾರಣಕ್ಕೆ ತಾಯಿ ನಿರಾಕರಿಸುತ್ತಾಳೆ. ಕಾರಿನಲ್ಲಿ ಆರಂಭವಾದ ಈ ಗಲಾಟೆ ಬೀದಿಯಲ್ಲಿ ಮಗ ಪ್ರೇಯಸಿಗೆ ಪ್ರಪೋಸ್ ಮಾಡುವುದರೊಂದಿಗೆ ತಾರಕಕ್ಕೇರುತ್ತದೆ. ಮುಂದೇನಾಯ್ತು ನೋಡಿ..
India News Live 30th January: ಬಿಗ್‌ಬಾಸ್ ಮಾಳು 'ನಾ ಡ್ರೈವರಾ..' ಹಾಡಿಗೆ ಸೊಂಟ ಕುಣಿಸಿದ RCB ಟಗರುಪುಟ್ಟಿ ಶ್ರೇಯಾಂಕಾ, ಬಿದ್ದುಬಿದ್ದು ನಕ್ಕ ಸ್ಮೃತಿ ಮಂಧನಾ!
RCB's Shreyanka Patil & Mr Nags Dance to 'Na Drivera' Song ಆರ್‌ಸಿಬಿ ತಂಡದ ಸಹ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಹಾಗೂ ಮಿ.ನಾಗ್ಸ್ ಅವರು 'ನಾ ಡ್ರೈವರಾ' ಹಾಡಿಗೆ ಮಾಡಿದ ಡಾನ್ಸ್, ಮಂಕಾಗಿದ್ದ ಸ್ಮೃತಿಯನ್ನು ಮನಸಾರೆ ನಗುವಂತೆ ಮಾಡಿದೆ.
India News Live 30th January: ಸುರಕ್ಷಿತ ಹಾಗೂ ಅತ್ಯಧಿಕ ಬಡ್ಡಿದರಕ್ಕೆ ಪೋಸ್ಟ್ ಆಫೀಸ್ನ ಹೂಡಿಕೆಯೇ ಬೆಸ್ಟ್! ರೇಟ್ ಹೀಗಿದೆ ನೋಡಿ
ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹೋಲಿಸಿದರೆ, ಅಂಚೆ ಕಚೇರಿಯು ಇದೀಗ ಸುರಕ್ಷಿತ ಮತ್ತು ಅಧಿಕ ಬಡ್ಡಿ ದರಗಳನ್ನು ನೀಡುವ ಯೋಜನೆಗಳನ್ನು ಜಾರಿಗೆ ತಂದಿದೆ. ನಿಮ್ಮ ಹಣಕ್ಕೆ ಸಂಪೂರ್ಣ ಭದ್ರತೆ ಒದಗಿಸುವುದರ ಜೊತೆಗೆ, ಟರ್ಮ್ ಡೆಪಾಸಿಟ್, ಸುಕನ್ಯಾ ಸಮೃದ್ಧಿ, ಮತ್ತು ಹಿರಿಯ ನಾಗರಿಕರ ಯೋಜನೆಗಳ ಮಾಹಿತಿ ಇಲ್ಲಿದೆ.
India News Live 30th January: ‘ಸಂತ ವರ್ಸಸ್ ಸಂತ’ ಸಂಘರ್ಷ - ಸಿಎಂ ಯೋಗಿ ಮೇಲೇಕೆ ಅವಿಮುಕ್ತೇಶ್ವರಾನಂದ ಸರಸ್ವತಿಗೆ ಕೋಪ?
ಪ್ರಯಾಗ್‌ರಾಜ್‌ನ ವಾರ್ಷಿಕ ಮಾಘ ಮೇಳದಲ್ಲಿ, ಮೌನಿ ಅಮವಾಸ್ಯೆಯಂದು ಪುಣ್ಯ ಸ್ನಾನಕ್ಕೆ ತೆರಳುತ್ತಿದ್ದ ಸ್ವಾಮಿ ಅವಿಮುಕ್ತೇಶ್ವರಾನಂದರ ಪಲ್ಲಕ್ಕಿ ಮೆರವಣಿಗೆಯನ್ನು ಪೊಲೀಸರು ತಡೆದಿದ್ದಾರೆ. ಈ ಘಟನೆಯು ಸ್ವಾಮೀಜಿ, ಶಿಷ್ಯರು ಮತ್ತು ಪೊಲೀಸರ ನಡುವೆ ನೂಕಾಟ-ತಳ್ಳಾಟಕ್ಕೆ ಕಾರಣವಾಯಿತು.
India News Live 30th January: 30 ಸಾವಿರ ನೌಕರರನ್ನು ಮನೆಗೆ ಕಳುಹಿಸಿದ ಬೃಹತ್ ಕಂಪೆನಿ! ರಾಜ್ಯದಲ್ಲಿ ಯಾರ ಕೆಲಸಕ್ಕೆ ಬಿತ್ತು ಕತ್ತರಿ?
ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪೆನಿ ಅಮೆಜಾನ್, ಇತ್ತೀಚೆಗೆ 16,000 ಉದ್ಯೋಗಿಗಳನ್ನು ವಜಾಗೊಳಿಸಿದೆ, ಇದರಿಂದ ಒಟ್ಟು ವಜಾ ಸಂಖ್ಯೆ 30,000ಕ್ಕೆ ಏರಿದೆ. ಈ ಉದ್ಯೋಗ ಕಡಿತವು ಭಾರತದ ಮೇಲೂ ಪರಿಣಾಮ ಬೀರಿದ್ದು, ನಿರ್ವಹಣೆಯನ್ನು ಸುಧಾರಿಸುವುದು ಮತ್ತು ಕೃತಕ ಬುದ್ಧಿಮತ್ತೆಯಲ್ಲಿನ ಹೂಡಿಕೆ ಕಾರಣಗಳಾಗಿವೆ.
India News Live 30th January: ಟಿ20 ವಿಶ್ವಕಪ್ ಬಹಿಷ್ಕಾರ ನಿರ್ಧಾರದಿಂದ ಪಾಕ್ ಯೂಟರ್ನ್ - ಐಸಿಸಿ ವಾರ್ನಿಂಗ್‌ಗೆ ತೆಪ್ಪಗಾದ ಪಾಕಿಸ್ತಾನ
ಬಾಂಗ್ಲಾದೇಶದ ಪರವಾಗಿ ಟಿ20 ವಿಶ್ವಕಪ್ ಬಹಿಷ್ಕರಿಸುವ ಬೆದರಿಕೆ ಹಾಕಿದ್ದ ಪಾಕಿಸ್ತಾನ, ಇದೀಗ ತನ್ನ ನಿಲುವು ಬದಲಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ಆಟಗಾರರನ್ನು ವಿಶ್ವಕಪ್‌ಗಾಗಿ ಶ್ರೀಲಂಕಾಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ.
India News Live 30th January: ಮೇಯರ್ ಮನೆಯಲ್ಲಿ 13.5 ಟನ್ ಚಿನ್ನ, 23 ಟನ್ ನಗದು ಪತ್ತೆ; ಹಣ ಎಣಿಸೋಕೆ ಆಗದೇ ತೂಕ ಮಾಡಿದ ಅಧಿಕಾರಿಗಳು!
China Corruption: 13.5 Tons of Gold, 23 Tons of Cash Seized from Mayor's House ಚೀನಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಮೇಯರ್ ಒಬ್ಬರ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನದ ಗಟ್ಟಿ ಹಾಗೂ ನಗದು ಪತ್ತೆಯಾಗಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.