09:46 AM (IST) Jan 29

India News Live 29th January: ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ನಾಯಕರಿಗೆ ಮೃತ್ಯುಪಾಶ; ಕೊಲಂಬಿಯಾದಲ್ಲಿ ಭೀಕರ ವಿಮಾನ ದುರಂತ!

ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದಲ್ಲಿ ಸಟೇನಾ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ, ಸಂಸದರೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 15 ಜನರು ಸಾವನ್ನಪ್ಪಿದ್ದಾರೆ. ಕುಕುಟಾದಿಂದ ಓಕಾನಾಗೆ ತೆರಳುತ್ತಿದ್ದ ವಿಮಾನವು ಇಳಿಯುವ ಸ್ವಲ್ಪ ಸಮಯದ ಮೊದಲು ಸಂಪರ್ಕ ಕಳೆದುಕೊಂಡಿದೆ.

Read Full Story
09:44 AM (IST) Jan 29

India News Live 29th January: ಅಜಿತ್ ಪವಾರ್ ತಾಯಿ ಟಿವಿ ನೋಡ್ತಿದ್ದಾಗಲೇ ಬಂತು ವಿಮಾನ ಅಪಘಾತ ಸುದ್ದಿ - ಟಿವಿ ಕೇಬಲ್ ಕಟ್ ಮಾಡಿದ ಸಿಬ್ಬಂದಿ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಈ ದುರಂತದ ಸುದ್ದಿ ಅವರ ತಾಯಿಗೆ ತಿಳಿಯದಂತೆ ತಡೆಯಲು ಸಿಬ್ಬಂದಿ ಮನೆಯ ಕೇಬಲ್ ಸಂಪರ್ಕವನ್ನು ಕಡಿತಗೊಳಿಸಿದ್ದರು ಎಂದು ವರದಿಯಾಗಿದೆ.

Read Full Story
09:33 AM (IST) Jan 29

India News Live 29th January: ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ನ ₹1800 ಕೋಟಿ ಆಸ್ತಿ ಇ.ಡಿ. ಮುಟ್ಟುಗೋಲು

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹಕ್ಕೆ ಸೇರಿದ 1,885 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಯೆಸ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.

Read Full Story
08:19 AM (IST) Jan 29

India News Live 29th January: ಹೆಣ್ಣು ಮಕ್ಕಳಿಗೆ ಮಾಲ್ ಮಾಲ್ ಎಂದು ಕರೆದು ಚುಡಾಯಿಸ್ತಿದ್ದ ಬೀದಿ ಕಾಮಣ್ಣರಿಗೆ ಬೆಂಡೆತ್ತಿದ್ದ ಪೊಲೀಸರು

ಬೈಕ್‌ನಲ್ಲಿ ಹೋಗುತ್ತಾ ಯುವತಿಯರನ್ನು 'ಮಾಲ್ ಮಾಲ್' ಎಂದು ಚುಡಾಯಿಸುತ್ತಿದ್ದ ಇಬ್ಬರು ಯುವಕರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಅವರಿಗೆ ವಿಶಿಷ್ಟ ರೀತಿಯಲ್ಲಿ ಶಿಕ್ಷೆ ನೀಡಿ, ಬೀದಿಯಲ್ಲಿ ಮೆರವಣಿಗೆ ಮಾಡಿಸಿ ಕ್ಷಮೆ ಕೇಳಿಸಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದೆ.
Read Full Story
07:48 AM (IST) Jan 29

India News Live 29th January: ದೇಶಹಿತ ವಿಚಾರದಲ್ಲಿ ಒಗ್ಗಟ್ಟು: ಎಲ್ಲ ಪಕ್ಷಗಳಿಗೆ ಮುರ್ಮು ಕರೆ

ವಿಕಸಿತ ಭಾರತ, ಸ್ವದೇಶಿ ಅಭಿಯಾನ ಮತ್ತು ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಎಲ್ಲ ಪಕ್ಷಗಳೂ ತಮ್ಮಲ್ಲಿನ ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ನಿಲ್ಲಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಒತ್ತಾಯಿಸಿದ್ದಾರೆ.

Read Full Story
07:48 AM (IST) Jan 29

India News Live 29th January: ವಿಮಾನ ದಿಢೀರ್‌ ನೆಲಕ್ಕಪ್ಪಳಿಸಿ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿತು!

ದುರಂತಕ್ಕೀಡಾದ ವಿಮಾನ ಲ್ಯಾಂಡಿಂಗ್‌ಗೂ ಮುನ್ನ ಆಗಸದಲ್ಲಿ ಕೊಂಚ ನಿಯಂತ್ರಣ ಕಳೆದುಕೊಂಡಂತಿತ್ತು. ಬಳಿಕ ವಿಮಾನ ದಿಢೀರ್‌ ನೆಲಕ್ಕಪ್ಪಳಿಸಿದ್ದು ಅದರ ಬೆನ್ನಲ್ಲೇ ಭಾರೀ ಸ್ಫೋಟದ ಸದ್ದು ಕೇಳಿಸಿತು. ಸ್ಫೋಟದ ತೀವ್ರತೆಗೆ ಬೆಂಕಿಯ ಕೆನ್ನಾಲಗೆ ಮುಗಿಲೆತ್ತರಕ್ಕೆ ಚಿಮ್ಮಿತು!

Read Full Story
07:48 AM (IST) Jan 29

India News Live 29th January: ಮಹಾರಾಷ್ಟ್ರ ಪಾಲಿನ ‘ಶಾಶ್ವತ ಡಿಸಿಎಂ’ ಅಜಿತ್‌ ದಾದಾ : 6 ಬಾರಿ ಡಿಸಿಎಂ ಹುದ್ದೆ

ಮಹಾರಾಷ್ಟ್ರ ರಾಜಕಾರಣದ ಭೀಷ್ಮ, ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಅವರಿಗೇ ಸೆಡ್ಡು ಹೊಡೆದು ಪ್ರತ್ಯೇಕ ಗುರುತು ಮೂಡಿಸಿದ್ದ, ಮಹಾರಾಷ್ಟ್ರದ ಪಾಲಿನ ‘ಶಾಶ್ವತ ಉಪಮುಖ್ಯಮಂತ್ರಿ’ಯೆಂದೇ ಕರೆಯಲ್ಪಡುತ್ತಿದ್ದ ಅಜಿತ್‌ ಅನಂತರಾವ್‌ ಪವಾರ್‌ ಅವರು ನೆಲಮೂಲದಿಂದ ಬೆಳೆದು ಬಂದ ನಾಯಕ.

Read Full Story
07:47 AM (IST) Jan 29

India News Live 29th January: ಪವಾರ್‌ ವಿಮಾನ ದುರಂತ : ಸುಪ್ರೀಂ ನಿಗಾದಲ್ಲಿ ತನಿಖೆಗೆ ಮಮತಾ, ಖರ್ಗೆ ಆಗ್ರಹ

ಅಜಿತ್‌ ಪವಾರ್‌ ವಿಮಾನ ದುರಂತದ ತನಿಖೆಯನ್ನು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಏಕೆಂದರೆ ಈ ದೇಶಲ್ಲಿ ಯಾರೂ ಸೇಫ್‌ ಅಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

Read Full Story
07:45 AM (IST) Jan 29

India News Live 29th January: ಅಜಿತ್‌ ಅಗಲಿಕೆಯಿಂದ ಎನ್‌ಸಿಪಿ ಅತಂತ್ರ

ಡಿಸಿಎಂ ಅಜಿತ್‌ ಪವಾರ್‌ ಅವರ ಅಗಲಿಕೆಯಿಂದ ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಆಧಾರಸ್ತಂಭ ಕುಸಿದಂತಾಗಿದ್ದರೆ, ಅತ್ತ ಅವರು ಕಟ್ಟಿ ಬೆಳೆಸಿದ್ದ ಎನ್‌ಸಿಪಿ ಅತಂತ್ರ ಸ್ಥಿತಿಗೆ ತಲುಪಿದೆ. ಅದರ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದು, ಅಜಿತ್‌ ಇಲ್ಲದೆ ಅವರ ಬಣದ ಶಾಸಕರಿಗೆ ಅನಾಥ ಭಾವ ಕಾಡತೊಡಗಿದೆ.

Read Full Story