- Home
- Entertainment
- ಪ್ರಭಾಸ್ ಒಂದು ದಿನದ ಊಟದ ಖರ್ಚು ಎಷ್ಟು ಗೊತ್ತಾ? ಬಾಹುಬಲಿ ಸ್ಟಾರ್ ಲಂಚ್ ಮೆನುವಿನಲ್ಲಿ ಏನಿರುತ್ತೆ?
ಪ್ರಭಾಸ್ ಒಂದು ದಿನದ ಊಟದ ಖರ್ಚು ಎಷ್ಟು ಗೊತ್ತಾ? ಬಾಹುಬಲಿ ಸ್ಟಾರ್ ಲಂಚ್ ಮೆನುವಿನಲ್ಲಿ ಏನಿರುತ್ತೆ?
ಪ್ರಭಾಸ್ ಒಳ್ಳೆಯ ಭೋಜನ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಅವರ ಜೊತೆಗಿದ್ದರೆ ರಾಜಮನೆತನದ ಊಟದ ರುಚಿ ನೋಡಬಹುದು. ಅನೇಕ ಸ್ಟಾರ್‌ಗಳು ಪ್ರಭಾಸ್ ಆತಿಥ್ಯದ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಪ್ರಭಾಸ್ ಊಟದ ಮೆನುವಿನಲ್ಲಿರುವ ವಿಶೇಷತೆಗಳೇನು? ಒಂದು ದಿನದ ಊಟಕ್ಕೆ ಎಷ್ಟು ಖರ್ಚು ಮಾಡುತ್ತಾರೆ?

ಪ್ರಭಾಸ್ ಮನೆಗೆ ಅತಿಥಿಗಳು ಬಂದ್ರೆ ಊಟ ಹಾಕದೇ ಕಳಿಸೊಲ್ಲ!
ರಾಜಮನೆತನದ ಪ್ರಭಾಸ್ ಜೊತೆಗಿದ್ದರೆ, ರಾಜಮನೆತನದ ದರ್ಜೆಗೆ ತಕ್ಕಂತೆ ಮರ್ಯಾದೆ ಸಿಗುತ್ತದೆ. ಊಟದ ವಿಚಾರದಲ್ಲಿ ಪ್ರಭಾಸ್ ಯಾವಾಗಲೂ ವಿಶೇಷ. ಅವರ ಮನೆಗೆ ಅತಿಥಿಗಳು ಬಂದರೆ ಊಟ ಹಾಕದೆ ಕಳುಹಿಸುವುದಿಲ್ಲ.
ಹತ್ತಾರು ಬಗೆಯ ವೆಜ್, ನಾನ್-ವೆಜ್ ಖಾದ್ಯಗಳು ಪ್ರಭಾಸ್ ಮನೆಯಿಂದ ಬರುತ್ವೆ
ಪ್ರಭಾಸ್ ಸಿನಿಮಾ ಶೂಟಿಂಗ್ ಅಂದರೆ, ಸಹ ನಟ-ನಟಿಯರು, ಸಿಬ್ಬಂದಿ ಎಲ್ಲರೂ ಅವರ ಮನೆಯ ಊಟ ಮಾಡಲೇಬೇಕು. ಹತ್ತಾರು ಬಗೆಯ ವೆಜ್, ನಾನ್-ವೆಜ್ ಖಾದ್ಯಗಳನ್ನು ಸವಿಯಲೇಬೇಕು. ಪ್ರಭಾಸ್ ಮನೆ ಊಟದ ಬಗ್ಗೆ ನಟಿಯರೂ ಮಾತನಾಡಿದ್ದಾರೆ.
ಊಟದ ಮೇಲೆ ಆಸೆಯಿದ್ದರೂ ಪ್ರಭಾಸ್ ಡಯಟ್‌ಗೆ ಒತ್ತು ಕೊಡುತ್ತಾರೆ
ಪ್ರಭಾಸ್‌ಗೆ ಊಟದ ಮೇಲೆ ಎಷ್ಟೇ ಪ್ರೀತಿ ಇದ್ದರೂ, ಸಿನಿಮಾಗಳಿಗಾಗಿ ಶಿಸ್ತಿನ ಡಯಟ್ ಪಾಲಿಸುತ್ತಾರೆ. ಅವರ ಮನೆಯಲ್ಲಿ ಮೀನಿನ ಸಾರು, ಮಟನ್, ನಾಟಿ ಕೋಳಿ ಸಾರು, ಫ್ರೈಡ್ ಪ್ರಾನ್ಸ್ ಇಷ್ಟಪಟ್ಟು ತಿನ್ನುತ್ತಾರಂತೆ.
ದಿನಕ್ಕೆ 2 ಲಕ್ಷ ರೂ. ಊಟಕ್ಕೆ ಖರ್ಚು ಮಾಡುತ್ತಾರೆ
ಪ್ರಭಾಸ್ ಊಟದ ಬಗ್ಗೆ ಒಂದು ಸುದ್ದಿ ವೈರಲ್ ಆಗಿದೆ. ಅವರು ದಿನಕ್ಕೆ 2 ಲಕ್ಷ ರೂ. ಊಟಕ್ಕೆ ಖರ್ಚು ಮಾಡುತ್ತಾರೆ ಎನ್ನಲಾಗಿದೆ. ಪ್ರಭಾಸ್ ಒಬ್ಬರೇ ಊಟ ಮಾಡುವುದು ಅಪರೂಪ. ಅವರ ಜೊತೆ 10-20 ಮಂದಿ ಇರುತ್ತಾರೆ.
ಅನೇಕರು ಪ್ರಭಾಸ್ ಆತಿಥ್ಯದ ಬಗ್ಗೆ ಮಾತನಾಡಿದ್ದಾರೆ
ರಾಜಮೌಳಿಯಿಂದ ಹಿಡಿದು ಪೂಜಾ ಹೆಗ್ಡೆ, ಶ್ರದ್ಧಾ ದಾಸ್, ಕೃತಿ ಸನನ್, ದೀಪಿಕಾ ಪಡುಕೋಣೆ, ಪೃಥ್ವಿರಾಜ್ ಹೀಗೆ ಅನೇಕರು ಪ್ರಭಾಸ್ ಆತಿಥ್ಯದ ಬಗ್ಗೆ ಮಾತನಾಡಿದ್ದಾರೆ. ಕೆಲವರು ಊಟದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

