ಫೆ.1ರಿಂದ ಫಾಸ್ಟಾಗ್ ನಿಯಮದಲ್ಲಿ ಮತ್ತೊಂದು ಬದಲಾವಣೆ, ವಾಹನ ಮಾಲೀಕರು ಫುಲ್ ಖುಷ್
ಫೆ.1ರಿಂದ ಫಾಸ್ಟಾಗ್ ನಿಯಮದಲ್ಲಿ ಮತ್ತೊಂದು ಬದಲಾವಣೆ, ವಾಹನ ಮಾಲೀಕರಿಗೆ ಇನ್ನು ಮುಂದೆ ಫಾಸ್ಟಾಗ್ ಕಿರಿಕಿರಿ ಇರುವುದಿಲ್ಲ. ಫೆಬ್ರವರಿ 1 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. ಏನಿದು ಈ ನಿಯಮ?

ಫಾಸ್ಟಾಗ್ ಕಿರಿಕಿರಿ ಅಂತ್ಯ
ದೇಶಾದ್ಯಂತ ಟೋಲ್ ಪಾವತಿಯನ್ನು ಫಾಸ್ಟಾಗ್ ಮೂಲಕ ಮಾಡಲಾಗುತ್ತದೆ. ವಾಹನ ಪ್ರಯಾಣದ ವೇಳೆ ಹೆದ್ದಾರಿ ಸೇರಿದಂತೆ ಪ್ರಮಖ ರಸ್ತೆಗಳು ಟೋಲ್ ಗೇಟ್ ಒಳಗೊಂಡಿರುತ್ತದೆ. ಟೋಲ್ ಪ್ಲಾಜಾದಲ್ಲಿ ಫಾಸ್ಟಾಗ್ ಮೂಲಕ ಟೋಲ್ ಪಾವತಿ ಮಾಡಿ ಸಾಗಬೇಕು. ಇದೀಗ ಫೆಬ್ರವರಿ 1 ರಿಂದ ಫಾಸ್ಟಾಗ್ ನಿಯಮದಲ್ಲಿ ಮತ್ತೊಂದು ಬದಲಾವಣೆಯಾಗುತ್ತಿದೆ. ಈ ಬದಲಾವಣೆಯಿಂದ ವಾಹನ ಸವಾರರು, ಮಾಲೀರಿಗೆ ಫಾಸ್ಟಾಗ್ ಕಿರಿಕಿರಿ ತಪ್ಪಲಿದೆ.
ಹೊಸ ಬದಲಾವಣೆ ಏನು?
ಫೆಬ್ರವರಿ 1 ರಿಂದ ಫಾಸ್ಟಾಗ್ ನೀತಿಯಲ್ಲಿ ಬದಲಾವಣೆಯಾಗುತ್ತಿದೆ. ಪ್ರಮುಖವಾಗಿ ಫಾಸ್ಟಾಗ್ ಕೆವೈಸಿ ನಿಯಮ ತೆಗೆದು ಹಾಕಲಾಗುತ್ತಿದೆ. ಮೊದಲ ಬಾರಿಗೆ ಫಾಸ್ಟಾಗ್ ಖರೀದಿಸುವಾಗ ಅಥವಾ, ಹೊಸ ವಾಹನ ಖರೀದಿ ವೇಳೆ ಫಾಸ್ಟಾಗ್ ನೋಂದಣಿಯಾಗಲಿದೆ. ಬಳಿಕ ಪ್ರತಿ ವರ್ಷ ಕೈವೆಸಿ ಮಾಡುವ ಅಗತ್ಯವಿಲ್ಲ.
ವಾಹನ ಮಾಲೀಕರು ಫುಲ್ ಖುಷ್
ಸದ್ಯ ವಾಹನ ಮಾಲೀಕರು ಪ್ರತಿ ವರ್ಷ, ನಿರ್ದಿಷ್ಠ ಸಮಯದಲ್ಲಿ ಕೆವೈಸಿ ಪೂರ್ಣಗೊಳಿಸಬೇಕು. ವಾಹನ ದಾಖಲೆ, ಫೋಟೋ,ಸ್ಕ್ಯಾನಿಂಗ್ ಸೇರಿದಂತೆ ಹಲವು ದಾಖಲೆ ಸಲ್ಲಿಸಿ ಕೆವೈಸಿ ಪೂರ್ಣಗೊಳಿಸಬೇಕು. ನವೀಕರಣದಂತೆ ಕಾಲ ಕಾಲಕ್ಕೆ ದಾಖಲೆ ಸಲ್ಲಿಕೆ ಮಾಡಿ ಕೆವೈಸಿ ಪೂರ್ಣಗೊಳಿಸಬೇಕಿತ್ತು. ಆದರೆ ಹೊಸ ನಿಯಮದ ಪ್ರಕಾರ ಒಂದು ಬಾರಿ ಕೆವೈಸಿ ಪೂರ್ಣಗೊಳಿಸಿದರೆ ಮತ್ತೆ ಮಾಡಬೇಕಿಲ್ಲ. ಹೊಸ ನಿಯಮದ ಪ್ರಕಾರ ಫಾಸ್ಟಾಗ್ ಆ್ಯಕ್ಟಿವೇಶನ್ ಬಳಿಕ ಯಾವುದೇ ಕೆವೈಸಿ ಪ್ರಕ್ರಿಯೆ ಅಗತ್ಯವಿಲ್ಲ.
ಕೆಲ ಸಂದರ್ಭದಲ್ಲಿ ಕೆವೈಸಿ ಅಗತ್ಯ
ಹೊಸ ನಿಯಮ ಪ್ರಕಾರ ಫಾಸ್ಟಾಗ್ ಸಕ್ರಿಯಗೊಂಡ ಬಳಿಕ ವರ್ಷದಿಂದ ವರ್ಷಕ್ಕೆ ಕೆವೈಸಿ ಅಗತ್ಯವಿಲ್ಲ. ಆದರೆ ದೂರು ದಾಖಲಾದಾಗ, ಅಥವಾ ಫಾಸ್ಟಾಗ್ ದುರ್ಬಳೆ ಅನುಮಾನಗಳು ಬಂದಾಗ, ಫಾಸ್ಟಾಗ್ ಕಳೆದು ಹೋದರೆ ಸೇರಿದಂತೆ ಕೆಲ ಸಂದರ್ಭಗಳಲ್ಲಿ ಫಾಸ್ಟಾಗ್ ಕೈವೆಸಿ ಅಗತ್ಯವಾಗಿದೆ. ಇನ್ನುಳಿದಂತೆ ಕೆವೈಸಿ ನಿಮಯ ಸಡಿಲ ಮಾಡಲಾಗಿದೆ.
ಬ್ಯಾಂಕ್ ವೆರಿಫಿಕೇಶನ್
ಫಾಸ್ಟಾಗ್ ಆ್ಯಕ್ಟಿವೇಶನ್ ಮಾಡುವಾಗ ಬ್ಯಾಂಕ್ ಸಂಪೂರ್ಣವಾಗಿ ವಾಹನ ವೆರಿಫಿಕೇಶನ್ ಮಾಡಲಿದೆ. ವಾಹನ ಮಾಲೀಕರು, ವಾಹನ ರಿಜಿಸ್ಟ್ರೇಶನ್ ನಂಬರ್, ಚಾಸಿ ನಂಬರ್ ಸೇರಿದಂತೆ ಎಲ್ಲಾ ಮಾಹಿತಿಗಳು ಫಾಸ್ಟಾಗ್ ಬ್ಯಾಂಕ್ ವೆರಿಫಿಕೇಶನ್ ಮಾಡಲಿದೆ. ಬಳಿಕ ಫಾಸ್ಟಾಗ್ ಆ್ಯಕ್ಟಿವೇಟ್ ಆಗಲಿದೆ.
ಆನ್‌ಲೈನ್ ಮೂಲಕ ಖರೀದಿಸಿದರೆ ನಿಯಮವೇನು?
ಆನ್‌ಲೈನ್ ಮೂಲಕ ಫಾಸ್ಟಾಗ್ ಖರೀದಿಸಿದರೆ ನಿಯಮವೇನು? ಇದೇ ನಿಯಮ ಅನ್ವಯವಾಗಲಿದೆ. ಆನ್‌ಲೈನ್ ಖರೀದಿ ವೇಳೆ ನೀವು ಫಾಸ್ಟಾಗ್ ಖರೀದಿಸುವ ಬ್ಯಾಂಕ್ ವಾಹನದ ವೆರಿಫಿಕೇಶನ್ ಮಾಡಿ ಫಾಸ್ಟಾಗ್ ನೀಡಲಿದೆ. ಆ್ಯಕ್ಟಿವೇಶನ್ ಪ್ರಕ್ರಿಯೆ ಮುಗಿದ ಬಳಿಕ ಮತ್ತೆ ಕೆವೈಸಿ ಮಾಡುವ ಅಗತ್ಯವಿಲ್ಲ.

