08:32 AM (IST) Jan 27

India News Live 27th January: ಭಾರತ ವಿರುದ್ದದ ಟಿ20 ವಿಶ್ವಕಪ್‌ನ ಪಂದ್ಯ ಬಹಿಷ್ಕಾರಕ್ಕೆ ಪಾಕ್ ಪ್ಲ್ಯಾನ್! ICC ಗೆ ಭಾರೀ ನಷ್ಟ?

ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್‌ನಿಂದ ಹೊರಗಿಟ್ಟಿದ್ದಕ್ಕೆ ಐಸಿಸಿ ವಿರುದ್ಧ ಕ್ಯಾತೆ ತೆಗೆದಿರುವ ಪಾಕಿಸ್ತಾನ, ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಚಿಂತನೆ ನಡೆಸಿದೆ. ಈ ಕುರಿತು ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷರು ಪ್ರಧಾನಿ ಜೊತೆ ಚರ್ಚಿಸಿದ್ದು, ಅಂತಿಮ ನಿರ್ಧಾರ ಶೀಘ್ರದಲ್ಲೇ ಪ್ರಕಟವಾಗಲಿದೆ.
Read Full Story
07:40 AM (IST) Jan 27

India News Live 27th January: ಗಣರಾಜ್ಯ ದಿನ ಸಾಂಸ್ಕೃತಿಕ ವೈವಿಧ್ಯ, ಸೇನಾ ಶಕ್ತಿ ಅನಾವರಣ

ಭಾರತದ ಸಾಂಸ್ಕೃತಿಕ ವೈವಿಧ್ಯ, ಆರ್ಥಿಕ ಪ್ರಗತಿ ಮತ್ತು ಸೈನಿಕ ಶಕ್ತಿಯ ಅನಾವರಣದ ಮೂಲಕ 77ನೇ ಗಣರಾಜ್ಯ ದಿನ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ಯುರೋಪಿಯನ್‌ ಕೌನ್ಸಿಲ್‌ನ ಅಧ್ಯಕ್ಷ ಆ್ಯಂಟೋನಿಯೋ ಕೋಸ್ಟಾ, ಉರ್ಸುಲಾ ವೊನ್‌ ಡೇರ್‌ ಲೆಯೆನ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು

Read Full Story
07:40 AM (IST) Jan 27

India News Live 27th January: ಯುಜಿಸಿ ನಿಯಮಕ್ಕೆ ವಿರೋಧ: ಮ್ಯಾಜಿಸ್ಟ್ರೇಟ್‌, 11 ಬಿಜೆಪಿಗರ ರಾಜೀನಾಮೆ

ಯುಜಿಸಿ ಕಳೆದ ಜ.13ರಂದು ಹೊರಡಿಸಿದ್ದ ಅಧಿಸೂಚನೆ ವಿವಾದಕ್ಕೀಡಾಗಿದ್ದು, ಉತ್ತರ ಪ್ರದೇಶದ ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್‌ ಅಲಂಕಾರ್ ಅಗ್ನಿಹೋತ್ರಿ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ, ಈ ನಿಯಮ ವಿರೋಧಿಸಿ ಲಖನೌನ ಮೇಲ್ವರ್ಗದ 11 ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ

Read Full Story
07:39 AM (IST) Jan 27

India News Live 27th January: ಇಂಡೋ-ಯುಎಸ್‌ ಟ್ರೇಡ್‌ ಡೀಲ್‌ಗೆ ಭಾರತದ ಅಳಿಯನೇ ಅಡ್ಡಿ : ಆರೋಪ

‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಸ್ಥಾಗಿತ್ಯಕ್ಕೆ ಭಾರತದ ಅಳಿಯನೂ ಆಗಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌, ಶ್ವೇತಭವನದ ಆರ್ಥಿಕ ಸಲಹೆಗಾರ ಪೀಟರ್‌ ನವಾರೋ ಮತ್ತು ಸ್ವತಃ ಟ್ರಂಪ್‌ ಅವರೇ ಕಾರಣ’ ಎಂಬ ಆರೋಪ ರಿಪಬ್ಲಿಕನ್‌ ಪಕ್ಷದ ಪ್ರಭಾವಿ ಸಂಸದ ಟೆಡ್‌ ಕ್ರೂಜ್‌ ಆರೋಪಿಸಿದ್ದಾರೆ.

Read Full Story
07:39 AM (IST) Jan 27

India News Live 27th January: ಕಾಂಬೋ, ಥಾಯ್‌ ಯುದ್ಧ ವೇಳೆ ಕೆಡವಲಾಗಿದ್ದ ವಿಷ್ಣು ಪ್ರತಿಮೆ ಸ್ಥಳಕ್ಕೆ ಬುದ್ಧ ಪ್ರತಿಮೆ

ಕಳೆದ ವರ್ಷ ಥಾಯ್ಲೆಂಡ್‌ - ಕಾಂಬೋಡಿಯಾ ಗಡಿ ವಿವಾದದಲ್ಲಿದ್ದ ವಿಷ್ಣುವಿನ ಪ್ರತಿಮೆಯನ್ನು ತೆರವು ಮಾಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಥಾಯ್ಲೆಂಡ್‌ ಸರ್ಕಾರ ವಿಷ್ಣುವಿನ ಪ್ರತಿಮೆಯಿದ್ದ ಸ್ಥಳದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಿದೆ.

Read Full Story
07:39 AM (IST) Jan 27

India News Live 27th January: ವಂದೇ ಮಾತರಂಗೂ ರಾಷ್ಟ್ರಗೀತೆ ರೀತಿ ಸ್ಥಾನಕ್ಕೆ ಚಿಂತನೆ

ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರದ ನಿಯಮವನ್ನೂ ವಂದೇಮಾತರಂಗೂ ವಿಸ್ತರಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರವೇ ಈ ಕುರಿತು ಅದು ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.

Read Full Story
07:38 AM (IST) Jan 27

India News Live 27th January: ಇಂದು ಭಾರತ- ಇಯು ನಡುವೆ ‘ಮದರ್ ಆಫ್ ಆಲ್‌ ಡೀಲ್ಸ್’?

ಮದರ್‌ ಆಫ್‌ ಆಲ್‌ ಡೀಲ್ಸ್‌ ಎಂದೇ ಕರೆಯಲ್ಪಡುವ ಭಾರತ ಮತ್ತು ಯುರೋಪ್‌ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಂಗಳವಾರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಟ್ರಂಪ್‌ ನಾನಾ ಕ್ಯಾತೆ ತೆಗೆಯುತ್ತಿರುವ ಹೊತ್ತಿನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

Read Full Story