ತೀವ್ರ ಚಳಿಯಿಂದಾಗಿ ಜಗತ್ಪ್ರಸಿದ್ಧ ನಯಾಗಾರ ಜಲಪಾತವು ಭಾಗಶಃ ಹೆಪ್ಪುಗಟ್ಟಿದೆ. ಧ್ರುವೀಯ ಸುಳಿಗಾಳಿಯ ಪರಿಣಾಮವಾಗಿ, ಜಲಪಾತದ ಸುತ್ತಮುತ್ತಲಿನ ಪ್ರದೇಶಗಳು ಮಂಜುಗಡ್ಡೆಯಿಂದ ಆವೃತವಾಗಿ, ಒಂದು ಅದ್ಭುತ ದೃಶ್ಯಲೋಕವನ್ನೇ ಸೃಷ್ಟಿಸಿವೆ. ಈ ಅಪರೂಪದ ದೃಶ್ಯಗಲ ಹಲವು ವೀಡಿಯೋ ಇಲ್ಲಿದೆ ನೋಡಿ…

ನಯಾಗಾರ ಜಲಪಾತದ ಮನಮೋಹಕ ದೃಶ್ಯ:

ಜಗತ್ಪ್ರಸಿದ್ಧ ನಯಾಗಾರ ಫಾಲ್ಸ್‌ನ ಬಳಿ ತಪಮಾನವೂ ಮೈನಸ್ 20 ಡಿಗ್ರಿಗಿಂತಲೂ ಕೆಳಗೆ ಕುಸಿದಿದ್ದು, ಇದು ಇಡೀ ಜಲಪಾತವನ್ನೇ ಹೆಪ್ಪುಗಟ್ಟುವಂತೆ ಮಾಡಿದೆ. ಪರಿಣಾಮ ಅಲ್ಲಿ ಅತ್ಯಧ್ಬುತ ಲೋಕ ಸೃಷ್ಟಿಯಾಗಿದೆ. ಎಲ್ಲಾ ಕಡೆ ಬರೀ ನೀರಷ್ಟೇ ಧುಮ್ಮಿಕ್ಕಿದರೆ ಇಲ್ಲಿ ಅರ್ಧದಷ್ಟು ಹೆಪ್ಪುಗಟ್ಟಿದ ಮಂಜುಗಡ್ಡೆಗಳು ನೀರಿನ ಪ್ರವಾಹದಲ್ಲಿ ಧುಮ್ಮಿಕ್ಕುತ್ತಿದ್ದು, ಈ ರಮಣೀಯ ದೃಶ್ಯ ವೈಭವದ ಹಲವು ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ನಯಾಗಾರ ಜಲಪಾತದ ಚಳಿಗಾಲದ ಸೌಂದರ್ಯ ನೋಡಿ ಬೆರಗಾಗಿದ್ದಾರೆ.

ತಜ್ಞರ ಪ್ರಕಾರ, ಪ್ರಬಲವಾದ ಧ್ರುವೀಯ ಸುಳಿಗಾಳಿಯು(Polar Vortex) ನಯಾಗರ ಜಲಪಾತವನ್ನು ಅದ್ಭುತವಾದ ಹೆಪ್ಪುಗಟ್ಟಿದ ದೃಶ್ಯವನ್ನಾಗಿ ಪರಿವರ್ತಿಸಿದೆ. ಹಾಗಿದ್ದು, ಜಲಪಾತವೂ ಭೋರ್ಗರೆಯುವುದನ್ನು ಮಾತ್ರ ನಿಲ್ಲಿಸಿಲ್ಲ. ಇಲ್ಲಿನ ಬಂಡೆಗಳ ಮೇಲೆ ನೀರು ಭೋರ್ಗರೆಯುತ್ತಲೇ ಇದ್ದರೂ ನೀರು ತಕ್ಷಣವೇ ಹೆಪ್ಪುಗಟ್ಟುತ್ತದೆ. ಈ ಹೆಪ್ಪುಗಟ್ಟುವ ತಾಪಮಾನವೂ ಬಂಡೆಗಳು ಮತ್ತು ನದಿ ದಂಡೆಗಳನ್ನು ಮಂಜುಗಡ್ಡೆಯಿಂದ ಮುಚ್ಚುತ್ತಿದೆ. ನಯಾಗರ ನದಿಯ ಕೆಲವು ಭಾಗಗಳು ಹೆಪ್ಪುಗಟ್ಟಿದಂತೆ ಕಂಡರೆ , ಮತ್ತೆ ಕೆಲವೆಡೆ ತೇಲುತ್ತಿರುವ ಮಂಜುಗಡ್ಡೆ ಮತ್ತು ಮಸುಕಾದ ಮಳೆಬಿಲ್ಲು ಸಹ ಗೋಚರಿಸುತ್ತದೆ.

ತೀವ್ರ ತಾಪಮಾನದ ಹೊರತಾಗಿಯೂ ಈ ಜಲಪಾತ ಹರಿಯುವುದನ್ನು ನಿಲ್ಲಿಸಿಲ್ಲ. ಇಲ್ಲಿ ಪ್ರತಿ ಸೆಕೆಂಡಿಗೆ ಲಕ್ಷಾಂತರ ಲೀಟರ್ ನೀರು ಬಂಡೆಗಳ ಮೇಲೆ ಅಪ್ಪಳಿಸುತ್ತಲೇ ಇರುತ್ತದೆ. ಈ ಪ್ರಕ್ರಿಯೆಯಿಂದಾಗಿ ದಟ್ಟವಾದ ಮಂಜಿನ ಮೋಡಗಳು ಅಲ್ಲಿ ಉತ್ಪತ್ತಿಯಾಗುತ್ತವೆ. ಹೆಪ್ಪುಗಟ್ಟುವ ಗಾಳಿಯಲ್ಲಿ, ಈ ಮಂಜು ವೇಗವಾಗಿ ಗಟ್ಟಿಯಾಗುತ್ತದೆ, ಹತ್ತಿರದ ಬಂಡೆಗಳು, ಮರಗಳು, ಬೇಲಿಗ ಮೇಲೆ ಮಂಜುಗಡ್ಡೆಯ ಪದರಗಳನ್ನು ರೂಪಿಸುತ್ತದೆ.

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಅಳವಡಿಸಿದ ಧ್ವನಿವರ್ಧಕ ಬಿದ್ದು 3 ವರ್ಷದ ಮಗು ಸಾವು: ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಆನ್‌ಲೈನ್‌ನಲ್ಲಿ ವೈರಲ್ ಆಗ್ತಿರುವ ವೀಡಿಯೋದಲ್ಲಿ ನದಿ ದಂಡೆಗಳು ಮತ್ತು ಸುತ್ತಮುತ್ತಲಿನ ಭೂಪ್ರದೇಶಗಳಿಗೆ ಅಂಟಿಕೊಂಡಿರುವ ಎತ್ತರದ ಮಂಜುಗಡ್ಡೆಯ ಮನಮೋಹ ದೃಶ್ಯವಿದ್ದು, ಇದೊಂತರ ಪ್ರಕೃತಿಯೇ ಬರೆದ ದೃಶ್ಯಕಾವ್ಯದಂತೆ ಕಾಣುತ್ತಿದೆ. ಜಲಪಾತದ ಅಂಚಿನಲ್ಲಿ ಬೃಹತ್ ಮಂಜುಗಡ್ಡೆಗಳು ತೇಲುತ್ತಿವೆ. ಹೆಚ್ಚುವರಿಯಾಗಿ, ಹಿಮಾವೃತ ಮಂಜಿನ ಮೂಲಕ ಮಸುಕಾದ ಮಳೆಬಿಲ್ಲು ರೂಪುಗೊಳ್ಳುವುದನ್ನು ಕಾಣಬಹುದು. ಇದು ಕಠಿಣ ಚಳಿಗಾಲದ ಹಿನ್ನೆಲೆಯಲ್ಲಿ ಕಂಡುಬಂದ ಅಪರೂಪದ ಮತ್ತು ಗಮನಾರ್ಹ ಬದಲಾಣೆಯಾಗಿದೆ.

Scroll to load tweet…

ಇದನ್ನೂ ಓದಿ: ಮುದ್ದಿನ ಗಂಡನಿಗಾಗಿ ಇಬ್ಬರು ಹೆಂಡಿರ ಗಲಾಟೆ: ಗಂಡನನ್ನು ಪಾಲು ಮಾಡಿ ಭಾನುವಾರ ವೀಕಾಫ್ ಕೊಟ್ಟ ಗ್ರಾಮದ ಮುಖಂಡರು

ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಗಡಿಯಲ್ಲಿ ಹರಡಿರುವ ನಯಾಗಾರ ಜಲಪಾತವು ಮೂರು ಪ್ರತ್ಯೇಕ ಜಲಪಾತಗಳಿಂದ ಕೂಡಿದೆ. ಹಾರ್ಸ್‌ಶೂ ಜಲಪಾತ, ಅಮೇರಿಕನ್ ಜಲಪಾತ ಮತ್ತು ಬ್ರೈಡಲ್ ವೇಲ್ ಜಲಪಾತ ಎಂಬ ಮೂರು ಜಲಪಾತಗಳು ಸೇರಿ ನಯಾಗಾರ ಜಲಪಾತವೂ ರೂಪುಗೊಂಡಿದ್ದು, ಈ ಮೂರು ಜಲಪಾತವು ಎರಿ ಸರೋವರದಿಂದ ಒಂಟಾರಿಯೊ ಸರೋವರಕ್ಕೆ ಹರಿಯುವಾಗ ನಯಾಗಾರ ಜಲಪಾತ ಸೃಷ್ಟಿಯಾಗುತ್ತದೆ ಮತ್ತು ಇದು ಭೂಮಿ ಮೇಲಿನ ಅತ್ಯಂತ ಶಕ್ತಿಶಾಲಿ ಜಲಪಾತಗಳಲ್ಲಿ ಒಂದೆನಿಸಿದೆ.

Scroll to load tweet…

 ನಯಾಗಾರ ಜಲಪಾತದ ವಿಶೇಷತೆ:

 ನಯಾಗಾರ ಜಲಪಾತವು ವರ್ಷವಿಡೀ ಬದಲಾಗುವ ಪ್ರಕ್ರಿಯೆಯಿಂದ ಹೆಸರುವಾಸಿಯಾಗಿದೆ. ಬೇಸಿಗೆಯಲ್ಲಿ ಈ ಜಲಪಾತವು ಲಕ್ಷಾಂತರ ಜನರನ್ನು ತನ್ನ ಧುಮ್ಮಿಕ್ಕುವ ತಣ್ಣನೆಯ ನೀರು ಮತ್ತು ಹಚ್ಚ ಹಸಿರಿನ ಪರಿಸರದಿಂದ ಆಕರ್ಷಿಸುತ್ತದೆ. ಆದರೆ ಚಳಿಗಾಲವು ಶಾಂತವಾದ ಆದರೆ ಅಷ್ಟೇ ವಿಶಿಷ್ಟವಾದ ರೂಪಾಂತರವನ್ನು ನೀಡುತ್ತದೆ. ಅದರ ಅಗಾಧ ಪ್ರಮಾಣ ಮತ್ತು ನಿರಂತರ ಚಲನೆಯಿಂದಾಗಿ ನೀರು ಎಂದಿಗೂ ಸಂಪೂರ್ಣವಾಗಿ ಹೆಪ್ಪುಗಟ್ಟುವುದಿಲ್ಲವಾದರೂ, ತೀವ್ರ ಶೀತದ ಸಮಯದಲ್ಲಿ ಜಲಪಾತದ ಅಂಚುಗಳ ಉದ್ದಕ್ಕೂ ಮಂಜುಗಡ್ಡೆಯ ನಿರ್ಮಾಣ ಆಗಿರುತ್ತದೆ. ತನ್ನ ಈ ವೈಭವಪೂರ್ಣ ಆಕರ್ಷಣೆಯನ್ನು ಮೀರಿ, ನಯಾಗಾರ ಜಲಪಾತವು ಜಲವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ನ ದೊಡ್ಡ ಭಾಗಗಳಿಗೆ ಇಲ್ಲಿಂದಲೇ ವಿದ್ಯುತ್ ಪೂರೈಸಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಅದು ವಿಶ್ವದ ಅತ್ಯಂತ ಆಕರ್ಷಕ ನೈಸರ್ಗಿಕ ಅದ್ಭುತಗಳಲ್ಲಿ ಒಂದಾಗಿ ಉಳಿದಿದೆ.

Scroll to load tweet…