ಶ್ರೀಮಂತರಾಗಿದ್ದರೂ ಸರಳವಾಗಿ ಇರುವವರು ಬಹಳ ಕಡಿಮೆ ಆದರೆ ಮುಕೇಶ್ ಅಂಬಾನಿ ಹಾಗಲ್ಲ, ವ್ಯಕ್ತಿತ್ವದ ವಿಚಾರ ಬಂದಾಗ ಅವರಷ್ಟು ಸಿಂಪಲ್ ವ್ಯಕ್ತಿ ಬೇರಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ವೀಡಿಯೋವೊಂದು ವೈರಲ್ ಆಗ್ತಿದ್ದು, ಅನೇಕರು ಮುಕೇಶ್ ಅಂಬಾನಿ ವ್ಯಕ್ತಿತ್ವಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಕೇಶ್ ಅಂಬಾನಿ ಹಳೇ ವಿಡಿಯೋ ವೈರಲ್
ಶ್ರೀಮಂತರಾಗಿದ್ದರೂ ಸರಳವಾಗಿ ಇರುವವರು ಬಹಳ ಕಡಿಮೆ ಆದರೆ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆನಿಸಿದ ಮುಕೇಶ್ ಅಂಬಾನಿ ಹಾಗಲ್ಲ, ವ್ಯಕ್ತಿತ್ವದ ವಿಚಾರ ಗುಣದ ವಿಚಾರ ಬಂದಾಗ ಅವರಷ್ಟು ಸಿಂಪಲ್ ವ್ಯಕ್ತಿ ಬೇರಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ವೀಡಿಯೋವೊಂದು ವೈರಲ್ ಆಗ್ತಿದ್ದು, ಅನೇಕರು ಮುಕೇಶ್ ಅಂಬಾನಿ ವ್ಯಕ್ತಿತ್ವಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುತೇಕ ಜನರು ಸ್ವಲ್ಪ ಬದುಕಿನಲ್ಲಿ ಮೇಲೇರಿದರೂ ಸಾಕು ಬೇರೆಯವರ ಬಗ್ಗೆ ತಾತ್ಸಾರ ತೋರುವುದು ಅಪಹಾಸ್ಯ ಮಾಡುವುದು ಮಾಡುತ್ತಾರೆ. ಆದರೆ ಮುಕೇಶ್ ಅಂಬಾನಿ ಹಾಗಲ್ಲ, ಬೇರೆಯವರ ಬಗ್ಗೆ ಅವರೆಂದು ಅಪಹಾಸ್ಯ ಮಾಡಿ ಮಾತಾಡಿದವರಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಅವರಾಡಿರುವ ಮಾತೊಂದು ವೈರಲ್ ಆಗಿದೆ.
ಅಂದಹಾಗೆ ಇದು 2023ರ ವೀಡಿಯೋ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗ್ತಿದೆ ವೀಡಿಯೋದಲ್ಲಿ ಮುಕೇಶ್ ಅಂಬಾನಿ ಅವರಿಗೆ ಅವರ ಪತ್ನಿ ನೀತಾ ಅಂಬಾನಿ ಅವರು, ಭಾರತೀಯ ಮೂಲದ ಕಾಮಿಡಿಯನ್ ಝರ್ನಾ ಗಾರ್ಗ್ ಅವರನ್ನು ಪರಿಚಯ ಮಾಡಿಸಿಕೊಡುತ್ತಾರೆ. ಈ ವೇಳೆ ಅವರನ್ನು ಬಹಳ ಆತ್ಮೀಯವಾಗಿ ಮಾತನಾಡಿಸುವ ಮುಕೇಶ್ ಅಂಬಾನಿ, ಗಾರ್ಗ್ ಅವರಿಗೆ ನಾವು ನಿಮ್ಮನ್ನು ಪಡೆಯಲು ಬಯಸುತ್ತೇವೆ. ನಾವು ನಿಮ್ಮನ್ನು ಆಹ್ವಾನಿಸಲಿದ್ದೇನೆ ಎಂದು ಹೇಳುವ ಮೊದಲು, ನೀವು ನನ್ನ ಮೇಲೆ ಮಾತ್ರ ಹಾಸ್ಯ ಮಾಡಬೇಕು ಎಂದು ಹೇಳುತ್ತಾರೆ ಅವರ ಮಾತು ಅನೇಕರ ಹೃದಯ ಗೆದ್ದಿದೆ. ಅನೇಕರು ಬೇರೆಯವರ ಮೇಲೆ ಹಾಸ್ಯ ಮಾಡೋದು ನೋಡಿ ಖುಷಿ ಪಡ್ತಾರೆ. ಆದರೆ ಮುಕೇಶ್ ಅಂಬಾನಿ ಅವರು ಸ್ವತಃ ತಮ್ಮ ಮೇಲೆಯೇ ಹಾಸ್ಯ ಮಾಡುವಂತೆ ಕೇಳಿದ್ದು ಅನೇಕರನ್ನುಅಚ್ಚರಿಗೀಡು ಮಾಡಿದೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ಬಿಗ್ಬಾಸ್ ಗೆದ್ದಿದ್ದು ಗಿಲ್ಲಿ ಅಲ್ಲ ನಿರ್ಮಲಾ ಸೀತಾರಾಮನ್ ಎಂದ ಪ್ರದೀಪ್ ಈಶ್ವರ್
2023ರಲ್ಲಿ ಅಮೆರಿಕಾದ ಮಾಜಿ ಉಪಾಧ್ಯಕ್ಷೆ ಕಮಲ ಹ್ಯಾರೀಸ್ ಅವರು ಆಯೋಜಿಸಿದ ಕಾರ್ಯಕ್ರಮ ವೀಡಿಯೋ ಇದಾಗಿದ್ದು, ಈ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಝರ್ನಾ ಗಾರ್ಗ್ ಅವರು ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಅವರನ್ನು ಭೇಟಿ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ನೀತಾ ಮುಕೇಶ್ ಮಾತ್ರವಲ್ಲದೇ ಜಗತ್ತಿನೆಲ್ಲೆಡೆಯ ಅನೇಕ ಗಣ್ಯರು ಭಾಗವಹಿಸಿದ್ದರು. ಮುಕೇಶ್ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆನಿಸಿದರು ಅವರ ವಿನಯವಂತಿಕೆ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: ಕಳ್ಳಭಟ್ಟಿ ತಯಾರಿ ಘಟಕದ ಮೇಲೆ ದಾಳಿ ನಡೆಸಿದ ಪೊಲೀಸರಿಗೆ 3 ತಿಂಗಳಮಗುವನ್ನು ನೋಡಿಕೊಳ್ಳುವ ಶಿಕ್ಷೆ..!
mondayswithmohan ಎಂಬ ಇನ್ಸ್ಟಾಗ್ರಾಮ್ ಪೇಜ್ ಹೊಂದಿರುವ Anip Patel ಎಂಬುವವರು ಈ ವೀಡಿಯೋ ಪೋಸ್ಟ್ ಮಾಡಿದ್ದು, ನೀತಾ ಮುಕೇಶ್ ಅಂಬಾನಿ ಊಟದ ಸಮಯದಲ್ಲಿ ನಮ್ಮ ಬಳಿ ಬಂದು ನನ್ನ ಗಂಡನನ್ನು ಭೇಟಿಯಾಗಲು ಬನ್ನಿ ಎಂದು ಹೇಳಿದರು. ಈ ವೇಳೆ ಮುಕೇಶ್ ಅಂಬಾನಿ ದಯವಿಟ್ಟು ಭಾರತಕ್ಕೆ ಬಂದು ನನ್ನ ಬಗ್ಗೆ ತಮಾಷೆ ಮಾಡಿ ಎಂದರು ಅದಕ್ಕೆ ಜರ್ನಾ ಗಾರ್ಗ್ ಇಲ್ಲ ನಿಮ್ಮ ಸೊಸೆಯಂದಿರ ಬಗ್ಗೆ ಮಾಡುತ್ತೇವೆ ಎಂದರು ಎಂದು ಬರೆದುಕೊಂಡಿದ್ದಾರೆ.
ಜರ್ನಾ ಗಾರ್ಗ್ ಅವರು ಒಬ್ಬ ಪ್ರಮುಖ ಭಾರತೀಯ ಮೂಲದ ಅಮೇರಿಕನ್ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ.


