ಅಭಿಮಾನಿಗಳಿಗೆ ಆಘಾತ, ಖ್ಯಾತ ಗಾಯಕ ಅರಿಜಿತ್ ಸಿಂಗ್ ದಿಢೀರ್ ನಿವೃತ್ತಿ ಘೋಷಣೆ
ಅಭಿಮಾನಿಗಳಿಗೆ ಆಘಾತ, ಖ್ಯಾತ ಗಾಯಕ ಅರಿಜಿತ್ ಸಿಂಗ್ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹಿನ್ನಲೆಯ ಗಾಯನದಿಂದ ಅರ್ಜಿತ್ ಸಿಂಗ್ ನಿವೃತ್ತಿ ಹೇಳುತ್ತಿದ್ದಾರೆ. ಇದೇ ವೇಳೆ ಸಣ್ಣ ಆಶಾವಾದ ವ್ಯಕ್ತಪಡಿಸಿದ್ದಾರೆ.

ನಿವೃತ್ತಿ ಘೋಷಿಸಿದ ಸಿಂಗರ್ ಅರ್ಜಿತ್ ಸಿಂಗ್
ಅರಿಜಿತ್ ಸಿಂಗ್ ಮಧುರ ಕಂಠಕ್ಕೆ ಮನಸೋಲದವರು ಯಾರಿದ್ದಾರೆ. ಪ್ರೀತಿ, ಬ್ರೇಕ್ ಅಪ್, ರೊಮ್ಯಾಂಟಿಕ್ ಹಾಡುಗಳಂತೂ ಅರಿಜಿತ್ ಸಿಂಗ್ ಕಂಠದಲ್ಲಿ ಕೇಳಿದರೆ ಭಾವುಕರಾಗದೇ ಇರದವರು ಯಾರಿದ್ದಾರೆ. ಸಮುಧರ ಕಂಠದಿಂದ ಅಪಾರ ಜನಮನ್ನಣೆ ಗಳಿಸಿರುವ ಅರಿಜಿತ್ ಸಿಂಗ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಅರಿಜಿತ್ ಸಿಂಗ್ ನಿವೃತ್ತಿ
ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸುವ ಮೂಲಕ ಅರಿಜಿತ್ ಸಿಂಗ್ ಅಚ್ಚರಿ ಮೂಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ. ಕೇಳುಗರ ಪ್ರೀತಿಗೆ ಧನ್ಯವಾದ ತಿಳಿಸಿ, ತಮ್ಮ ಪಯಣಕ್ಕೆ ವಿದಾಯ ಹೇಳಿದ್ದಾರೆ. ಭಾರಿ ಬೇಡಿಕೆಯ ಗಾಯಕ ಅರಿಜಿತ್ ಸಿಂಗ್ ಈ ನಿರ್ಧಾರ ಭಾರಿ ಸಂಚಲನ ಸೃಷ್ಟಿಸಿದೆ.
ಸಂಗೀತದಲ್ಲಿ ಮುಂದುವರಿಯುವುದಾಗಿ ಹೇಳಿದ ಅರಿಜಿತ್
ಹಿನ್ನೆಲೆ ಗಾಯನದಿಂದ ದೂರ ಸರಿದರೂ, ಸಂಗೀತವನ್ನು ಬಿಡುವುದಿಲ್ಲ ಎಂದು ಅರಿಜಿತ್ ಸ್ಪಷ್ಟಪಡಿಸಿದ್ದಾರೆ. ಸ್ವತಂತ್ರವಾಗಿ ಸಂಗೀತ ಸಂಯೋಜನೆ ಮತ್ತು ರಚನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ. ಸಿನಿಮಾ ಹಿನ್ನಲೆ ಗಾಯನಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದು ಅರಿಜಿತ್ ಸಿಂಗ್ ಹೇಳಿದ್ದಾರೆ.
ಬಾಕಿ ಇರುವ ಹಾಡುಗಳು ಮಾತ್ರ ಬಿಡುಗಡೆ
ಅರಿಜಿತ್ ಸಿಂಗ್ ಈಗಾಗಲೇ ಒಪ್ಪಿಕೊಂಡು ರೆಕಾರ್ಡಿಂಗ್ ಮಾಡಿರುವ, ಮಾಡಲು ಬಾಕಿ ಇರುವ ಕೆಲ ಹಾಡುಗಳು ಮಾತ್ರ ಬಿಡುಗಡೆಯಾಗಲಿದೆ. ಕೆಲ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಇದರಲ್ಲಿ ಅರಿಜಿತ್ ಸಿಂಗ್ ಹಿನ್ನಲೆ ಗಾಯಕರಾಗಿದ್ದಾರೆ.
ಅಭಿಮಾನಿಗಳಿಗೆ ಆಘಾತ
ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆಯಿಂದ ಅಭಿಮಾನಿಗಳು ಆಘಾತಗೊಂಡಿದ್ದಾರೆ. ನಿವೃತ್ತಿ ಹಿಂಪಡೆಯಲು ಮನವಿ ಮಾಡಿದ್ದಾರೆ. ಇದೇ ವೇಳೆ ಹಲವರು ಬಾಲಿವುಡ್ ಇಂಡಸ್ಟ್ರಿ, ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರನ್ನು ಸರಿಯಾಗಿ ಗೌರವಿಸಿಲ್ಲ ಎಂದು ಆರೋಪಿಸಿದ್ದಾರೆ.
ಪದ್ಮಶ್ರೀ ಪುರಸ್ಕೃತ ಅರಿಜಿತ್ ಸಿಂಗ್
'ಫೇಮ್ ಗುರುಕುಲ್' ಮೂಲಕ ವೃತ್ತಿ ಆರಂಭಿಸಿದ ಅರಿಜಿತ್, 'ತುಮ್ ಹಿ ಹೋ', 'ಕೇಸರಿಯಾ' ದಂತಹ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರಿಗೆ ಎರಡು ರಾಷ್ಟ್ರೀಯ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

