ಈ ಕಂಪನಿಯಲ್ಲಿ ಮದುವೆಯಾಗೋ ಉದ್ಯೋಗಿಗೆ 12 ಲಕ್ಷ, ಕಂಪನಿ ಬಾಸ್ ಈ ಘೋಷಣೆ ಹೊರಡಿಸುತ್ತಿದ್ದಂತೆ ಇದೀಗ ಕಂಪನಿ ಉದ್ಯೋಗಿಗಳು ಮದುವಗೆ ಮುಂದಾಗಿದ್ದರೆ. ಹಲವು ಬ್ಯಾಚುಲರ್ಸ್ ಈ ಕಂಪನಿ ಸೇರಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ದುಬೈ (ಜ.27) ಉದ್ಯೋಗಿಗಳ ಮದುವೆ ಎಂದಾಗ ಕಂಪನಿಗಳು ಹಲವು ಬಾರಿ ಆಲೋಚಿಸುತ್ತದೆ. ಆದರೆ ಇಲ್ಲೊಂದು ಕಂಪನಿ ಮದುವೆಯಾಗುವ ಉದ್ಯೋಗಿಗಳಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದೆ. ಒಂದೇ ಒಂದು ಕಂಡೀಷನ್. 2026ರಲ್ಲಿ ಮದುವೆಯಾಗಬೇಕು ಅಷ್ಟೆ. ಮತ್ತೊಂದು ವಿಶೇಷ ಉಡುಗೊರೆ ಎಂದರೆ ಎರಡು ವರ್ಷದ ಒಳಗೆ ಮಕ್ಕಳಾದರೆ 24 ಲಕ್ಷ ರೂಪಾಯಿ ಉಡುಗೊರೆ ಸಿಗಲಿದೆ. ಬಾಸ್ ಈ ಘೋಷಣೆ ಮಾಡುತ್ತಿದ್ದಂತೆ ಕಂಪನಿಯ ಉದ್ಯೋಗಿಗಳು ಮದುವೆಯಾಗಲು ಮುಂದಾಗಿದ್ದಾರೆ. ಇಷ್ಟೇ ಅಲ್ಲ ಹಲವು ಬ್ಯಾಚ್ಯುಲರ್ಸ್ ಈ ಕಂಪನಿ ಸೇರಿಕೊಳ್ಳಲು ಮುಂದಾಗಿದ್ದಾರೆ. ಅಷ್ಟಕ್ಕೂ ಈ ಕಂಪನಿ ಬೇರೆ ಯಾವುದು ಅಲ್ಲ ಅಲ್ ಹಬ್ಟೂರ್ ಕಂಪನಿ.
12.5 ಲಕ್ಷ ರೂಪಾಯಿ ನೆರವು
ಅಲ್ ಹಬ್ಟೂರ್ ದುಬೈ ಮೂಲದ ಕಂಪನಿ. ಇದರ ಮಾಲೀಕ ಹಾಗೂ ಸಿಇಒ ಖಲಾಪ್ ಅಲ್ ಹಬ್ಟೂರ್, ತನ್ನ ಅಲ್ ಹಬ್ಟೂರ್ ಕಂಪನಿಯ ಉದ್ಯೋಗಿಳಿಗೆ ಈ ವಿಶೇಷ ಆಫರ್ ನೀಡಿದ್ದಾರೆ. ಅಲ್ ಹಬ್ಟೂರ್ ಗ್ರೂಪ್ ಕಂಪನಿ ಮ್ಯಾರೇಜ್ ಗ್ರ್ಯಾಂಟ್ ನಿಧಿ ಮೂಲಕ ಉದ್ಯೋಗಿಗಳಿಗೆ ಈ ಆಫರ್ ನೀಡಲಾಗಿದೆ. 2026ರಲ್ಲಿ ಅಲ್ ಹಬ್ಟೂರ್ ಗ್ರೂಪ್ ಕಂಪನಿಯ ಯಾವುದೇ ಉದ್ಯೋಗಿ ಮದುವೆಯಾಗುವ ಪ್ಲಾನ್ ಇದ್ದರೆ, ಮದುವೆ ಆಮಂತ್ರಣ ಪತ್ರಿಕೆ, ಮದುವೆ ಫೋಟೋ, ಸರ್ಟಿಫಿಕೇಟ್ ಸೇರಿದಂತೆ ಕೆಲ ದಾಖಲೆಗಳನ್ನು ಕಂಪನಿಗೆ ಸಲ್ಲಿಕೆ ಮಾಡಿದರೆ ಸಾಕು. ಕಂಪನಿ ಕಡೆಯಿಂದ 50,000 ಧಿರಾಮ್ಸ್ ಅಂದರೆ 12.5 ಲಕ್ಷ ರೂಪಾಯಿ ಮೊತ್ತ ಖಾತೆಗೆ ಜಮೆ ಆಗಲಿದೆ.
ಮದುವೆ ವೈಯುಕ್ತಿಕ ಮಾತ್ರವಲ್ಲ ಸಮಾಜಿಕ ಕೂಡ
ಮದುವೆ ಅನ್ನೋದು ಕೇವಲ ವೈಯುಕ್ತಿಕ ವಿಚಾರವಲ್ಲ. ಅದು ಸಾಮಾಜಿಕ ಕೂಡ, ಜವಾಬ್ದಾರಿಗಳು ಹೆಚ್ಚಾಗುತ್ತದೆ. ಯುವ ಸಮಾಜ ನಿರ್ಮಾಣಕ್ಕೆ ಮುಖ್ಯ ಘಟ್ಟವಾಗಿದೆ. ಇದು ದೇಶದ ಬೆಳವಣಿಗೆಯಲ್ಲೂ ಕೊಡುಗೆ ನೀಡುತ್ತದೆ. ಹೀಗಾಗಿ ಮದುವೆ ಅಲ್ ಹಬ್ಟೂರ್ ಕಂಪನಿ ಉತ್ತೇಜನ ನೀಡುತ್ತದೆ. ಹಲವರು ಮದುವೆಯನ್ನು ಆರ್ಥಿಕ ಕಾರಣಗಳಿಂದ ಮಂದೂಡುತ್ತಾರೆ. ಬಲಿಕ ಹಲವು ಕಾರಣಗಳಿಂದ ಮದುವೆಯಾಗದೇ ಉಳಿಯುತ್ತಾರೆ. ಮದುವೆಯಾಗುವ ಜೋಡಿಗೆ ಆರ್ಥಿಕ ಸಮಸ್ಯೆಯಾಗಬಾರದು ಎಂದು ಮ್ಯಾರೇಜ್ ಗ್ರ್ಯಾಂಟ್ ನೀಡುತ್ತಿದ್ದೇವೇ ಎಂದು ಖಲಾಪ ಅಲ್ ಹಬ್ಟೂರ್ ಹೇಳಿದ್ದಾರೆ.

ಪ್ರತಿ ಕುಟುಂಬಕ್ಕೆ ನೆರವು
ಮದುವೆಯಾಗುವ ನಮ್ಮ ಕಂಪನಿಯ ಉದ್ಯೋಗಿಗಳಿಗೆ 12 ಲಕ್ಷ ರೂಪಾಯಿ ನೀಡಲಾಗುತ್ತದೆ. 2026ರಲ್ಲಿ ಮದುವೆಯಾಗುವ ಜೋಡಿಗೆ ಈ ವೇಶೇಷ ಮ್ಯಾರೇಜ್ ಗ್ರ್ಯಾಂಟ್ ಸಿಗಲಿದೆ.ಹಾಗಂತ ಮುಂದಿನ ವರ್ಷ ಇಲ್ಲ ಎಂದಲ್ಲ, ಮೊತ್ತ ಮುಂದಿನ ವರ್ಷ ಘೋಷಣೆಯಾಗಲಿದೆ ಅಷ್ಟೆ ಎಂದು ಖಲಾಫಾ ಹೇಳಿದ್ದರೆ. ಇನ್ನು 2026ರಲ್ಲಿ ಮದುವೆಯಾಗುವ ಉದ್ಯೋಗಿಗಳು ಎರಡು ವರ್ಷದಲ್ಲಿ ಮಕ್ಕಳು ಮಾಡಿಕೊಂಡರೆ 24 ಲಕ್ಷ ರೂಪಾಯಿ ನೆರವು ಪಡೆಯಲಿದ್ದಾರೆ ಎಂದು ಖಲಾಫ ಹೇಳಿದ್ದಾರೆ.
ಮದುವೆಗೆ ಬ್ಯಾಚುಲರ್ಸ್ ಉತ್ಸಾಹ
ಈ ಘೋಷಣೆ ಹೊರಬೀಳುತ್ತಿದ್ದಂತೆ ಅಲ್ ಹಬ್ಟೂರ್ ಕಂಪನಿಯ ಬ್ಯಾಚ್ಯುಲರ್ಸ್ ಉದ್ಯೋಗಿಗಳು ಮದುವೆಗೆ ಸಜ್ಜಾಗುತ್ತಿದ್ದಾರೆ. ಇಷ್ಟೇ ಅಲ್ಲ ಎರಡು ವರ್ಷದಲ್ಲಿ ಮಕ್ಕಳು ಮಾಡಿಕೊಳ್ಳುವ ಪ್ಲಾನ್ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಇತರ ಕಂಪನಿಯ ಉದ್ಯೋಗಿಗಳು ಇದೀಗ ಅಲ್ ಹಬ್ಟೂರ್ ಕಂಪನಿ ಸೇರಿಕೊಳ್ಳಲು ಉತ್ಸಾಹ ತೋರುತ್ತಿದ್ದಾರೆ.


