ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದರ ನಡುವೆಯೇ, ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿವೆ. ಆದರೆ, ಈ ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತೇನು?

ನ್ಯಾಷನಲ್​ ಕ್ರಷ್​, ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇನ್ನು ಕೆಲವೇ ದಿನಗಳಲ್ಲಿ ನಟ ವಿಜಯ ದೇವರಕೊಂಡ ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದು ಭಾರಿ ಸದ್ದು ಮಾಡುತ್ತಿದೆ. ಬರುವ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ಇವರ ಮದುವೆ ಎಂದು ಹೇಳಲಾಗುತ್ತಿದೆ. (Vijay Deverakonda-Rashmika Mandanna marriage). ಆದರೆ ಇದರ ನಡುವೆಯೇ, ಒಂದು ತಿಂಗಳು ಮುಂಚಿತವಾಗಿಯೇ ಇವರಿಬ್ಬರ ಮದುವೆಯ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. ಸಿನಿಮಾ ಸೆಲೆಬ್ರಿಟಿಗಳು ಇವರಿಬ್ಬರ ಮದುವೆಯಲ್ಲಿ ಹಾಜರು ಇರುವುದನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ.

ಬೆಂಗಳೂರಿನ ಹೂವು

ಅಷ್ಟಕ್ಕೂ ಮೊನ್ನೆಯಷ್ಟೇ, ರಶ್ಮಿಕಾ ತಮಗೆ ಬೆಂಗಳೂರಿನ ಹೂ ಬೇಕು ಎಂದು ಹೇಳಿದ್ದರು. ಕರ್ನಾಟಕದ ಬಗ್ಗೆ ದನಿ ಎತ್ತದ ಈ ನಟಿಗೆ ಕರುನಾಡಿನದ್ದೇ ಹೂವು ಬೇಕು ಎನ್ನುವ ಬಗ್ಗೆ ಸಾಕಷ್ಟು ಮಂದಿ ಟೀಕೆ ಕೂಡ ಮಾಡುತ್ತಿದ್ದಾರೆ. ಮದುವೆ ನಡೆಯೋದು ರಾಜಸ್ತಾನ ಪ್ಯಾಲೇಸ್​ನಲ್ಲಿ. ಮದುವೆಯ ಅಲಂಕಾರಕ್ಕೆ ಬೆಂಗಳೂರಿನಿಂದ ಹೂಗಳು ಹೋಗಲಿವೆ ಎನ್ನುವುದು ತಿಳಿದುಬಂದಿತ್ತು. ಮದುವೆ ಮನೆಯಲ್ಲಿ ಬೆಂಗಳೂರಿನ ಹೂಗಳು ನಳನಳಿಸಲಿವೆ ಎಂದು ವರದಿಯಾಗಿತ್ತು. ಆದರೆ ಇದರ ನಡುವೆಯೇ ಇದೀಗ ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಶಾಕ್​ ಆಗಿದ್ದಾರೆ.

ಏನಿದರ ಅಸಲಿಯತ್ತು?

ಅಷ್ಟಕ್ಕೂ, ಹೇಳಿ ಕೇಳಿ ಇರುವ ಕೃತಕ ಬುದ್ಧಿಮತ್ತೆ (AI) ಯುಗ. ಮದುವೆಯಾಕೆ, ಎಐ ಮೂಲಕವೇ ಮಕ್ಕಳನ್ನೂ ಮಾಡಿಬಿಡ್ತಾರೆ. ಒಟ್ಟಿನಲ್ಲಿ ಲೈಕ್ಸ್​, ಶೇರ್​ ಎಲ್ಲಾ ಬೇಕು ಕಂಟೆಂಟ್​ ಕ್ರಿಯೇಟರ್ಸ್​ಗೆ. ಇದೇ ಕಾರಣಕ್ಕೆ, ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆಯ ಎಐ ಫೋಟೋ ಕ್ರಿಯೇಟ್​ ಮಾಡಿ ಶೇರ್​ ಮಾಡಲಾಗಿದೆ. ಇದರಲ್ಲಿ ಸಿನಿಮಾ ಚಿತ್ರರಂಗದ ಕೆಲವು ದಿಗ್ಗಜರು ಕೂಡ ಪಾಲ್ಗೊಂಡಿರುವಂತೆ ಚಿತ್ರಿಸಲಾಗಿದೆ!

ರಕ್ಷಿತ್​ ಶೆಟ್ಟಿ ಜೊತೆ!

ಅಷ್ಟಕ್ಕೂ, 30 ವರ್ಷದ ಈ ಚೆಲುವೆ ಡೇಟಿಂಗ್​, ಮದ್ವೆ ವಿಷಯದಲ್ಲಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಫೆಬ್ರುವರಿಯಲ್ಲಿ ವಿಜಯ ದೇವರಕೊಂಡ ಅವರ ಜೊತೆ ಮದುವೆ ಎನ್ನುವ ಸುದ್ದಿ ಸದ್ದು ಮಾಡ್ತಿದ್ದಂತೆಯೇ, ಕನ್ನಡದ ನಟಿ ರಕ್ಷಿತ್​ ಶೆಟ್ಟಿಜೊತೆ ರಶ್ಮಿಕಾ ಮಂದಣ್ಣ ಎಂಗೇಜ್​ಮೆಂಟ್​ ಆಗಿರುವ ಫೋಟೋಗಳು ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಹುತೇಕರಿಗೆ ತಿಳಿದಿರುವಂತೆ ಇವರಿಬ್ಬರೂ ಮದುವೆಯಾಗುವ ಸಿದ್ಧತೆ ನಡೆಸಿದ್ದರು. ಆದರೆ ಅದು ಮುರಿದು ಬಿದ್ದಿತ್ತು. ಈಗಲೂ ಇಬ್ಬರೂ ಸಿಂಗಲ್​ ಆಗಿದ್ದಾರೆ.'ಕಿರಿಟ್ ಪಾರ್ಟಿ’ ಸಿನಿಮಾ ವೇಳೆ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ ಆಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸಂಬಂಧ ಅಲ್ಲಿಗೇ ಮುಗಿಯಿತು. ಅವರಿವರ ಜೊತೆ ಆಗಾಗ್ಗೆ ಹೆಸರು ಕೇಳಿಬರುತ್ತಿದ್ದರೂ ಈ ವಿಷಯದಲ್ಲಿ ರಶ್ಮಿಕಾ ಹೆಸರು ಹೆಚ್ಚಾಗಿ ಥಳಕು ಹಾಕಿಕೊಂಡಿದ್ದು ವಿಜಯ್ ದೇವರಕೊಂಡ ಜೊತೆ. ಇದಾದ ಬಳಿಕ ಇವರ ಮದುವೆಯ ಕುರಿತು ಹೋದಲ್ಲೆಲ್ಲಾ ಪ್ರಶ್ನೆಗಳು ಎದುರಾಗುತ್ತಿರುತ್ತವೆ.