10:59 PM (IST) Dec 12

Karnataka News Live 12th december 2025 ಭದ್ರಾವತಿ - ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ - ಇಬ್ಬರು ದುರ್ಮರಣ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪ್ರೇಮಿಗಳ ವಿಚಾರವಾಗಿ ನಡೆದ ಜಗಳವು ಇಬ್ಬರ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಸ್ಥಳೀಯರಾದ ಮಂಜುನಾಥ್ ಮತ್ತು ಕಿರಣ್ ಎಂಬುವವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. 

Read Full Story
10:29 PM (IST) Dec 12

Karnataka News Live 12th december 2025 'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!

ಬೆಂಗಳೂರಿನ ಆಟೋ ಚಾಲಕರೊಬ್ಬರು ತಮ್ಮ ಆಟೋದಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ 'ನಾನೊಬ್ಬ ತಂದೆ, ಅಣ್ಣ.. ನಿಮ್ಮ ಸುರಕ್ಷತೆ ನನಗೂ ಮುಖ್ಯ' ಎಂಬ ಸಂದೇಶ ಬರೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಬೆಂಗಳೂರು ನಗರ ಪೊಲೀಸರು, ಈ ಚಾಲಕನನ್ನು ಗುರುತಿಸಿ ಗೌರವಿಸಲು ಸಾರ್ವಜನಿಕರ ಸಹಾಯ ಕೋರಿದ್ದಾರೆ.

Read Full Story
09:57 PM (IST) Dec 12

Karnataka News Live 12th december 2025 ಕಾರವಾರ - ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ

ಶಿರಸಿಯಲ್ಲಿ, ತನ್ನ ಮಾಲೀಕರ ಮನೆಯಿಂದಲೇ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಕದ್ದಿದ್ದ ಮನೆಗೆಲಸದವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ನಕಲಿ ಕೀ ಬಳಸಿ, ಮನೆಯವರು ಗೋವಾಕ್ಕೆ ತೆರಳಿದ್ದಾಗ ಈ ಕೃತ್ಯ ಎಸಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆತನನ್ನು ಪತ್ತೆಹಚ್ಚಲಾಗಿದೆ.
Read Full Story
09:01 PM (IST) Dec 12

Karnataka News Live 12th december 2025 ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!

ತುರ್ಕಮೆನಿಸ್ತಾನದಲ್ಲಿ ನಡೆದ ಅಂತರರಾಷ್ಟ್ರೀಯ ವೇದಿಕೆಯ ಸಭೆಯಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗಾಗಿ 40 ನಿಮಿಷಗಳ ಕಾಲ ಕಾದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್, ಕೊನೆಗೆ ಪುಟಿನ್ ಹಾಗೂ ಟರ್ಕಿಶ್ ಅಧ್ಯಕ್ಷ ಎರ್ಡೋಗನ್ ನಡೆಸುತ್ತಿದ್ದ ಸಭೆಗೆ ನುಗ್ಗಿದ್ದಾರೆ.

Read Full Story
09:01 PM (IST) Dec 12

Karnataka News Live 12th december 2025 ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!

ಬೆಂಗಳೂರಿನಲ್ಲಿ ಮುಂದಿನ ವಾರ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದ್ದು, ಹಗಲು ಬೆಚ್ಚಗಿರಲಿದೆ. ಬೆಳಗಿನ ಜಾವ ಮಂಜು ಕವಿಯಲಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Read Full Story
08:33 PM (IST) Dec 12

Karnataka News Live 12th december 2025 Baba Vanga Prediction - 2026ರಿಂದ 5079 ರವರೆಗಿನ ಬಾಬಾ ವಂಗಾ ಭವಿಷ್ಯವಾಣಿ ಇಲ್ಲಿದೆ!

'ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್' ಎಂದೇ ಖ್ಯಾತರಾದ ಬಾಬಾ ವಂಗಾ ಅವರ 2026 ರಿಂದ 5079 ರವರೆಗೆ ಬೆಚ್ಚಿ ಬೀಳಿಸುವಂಥ ಭವಿಷ್ಯವಾಣಿಗಳನ್ನು ನೀಡಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ. ಇವು ಜಗತ್ತಿನ ಅಂತ್ಯದವರೆಗಿನ ಘಟನೆಗಳನ್ನು (Baba Vanga Prediction) ವಿವರಿಸುತ್ತವೆ.

Read Full Story
08:25 PM (IST) Dec 12

Karnataka News Live 12th december 2025 ತಾಳಿ ಕಟ್ಟುವ ಶುಭ ವೇಳೆ..., 'ಇವನು ನನ್ನ ಗಂಡ' ಎಂದವಳೊಂದಿಗೆ ಸಂಸಾರ ನಡೆಸುತ್ತೇನೆ ಎಂದ ಮದುಮಗ!

ರಾಯಚೂರಿನಲ್ಲಿ ನಡೆಯುತ್ತಿದ್ದ ಮದುವೆಯನ್ನು ಯುವತಿ ನಿಲ್ಲಿಸಿ ‘ಇವನು ನನ್ನ ಗಂಡ’ ಎಂದಿದ್ದರು. ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ಇದೀಗ ಮಧ್ಯಸ್ಥಿಕೆಯ ನಂತರ, ಮದುಮಗನೇ ತನ್ನ ಮೊದಲ ಪ್ರೇಯಸಿಯೊಂದಿಗೆ ಸಂಸಾರ ನಡೆಸಲು ಒಪ್ಪಿಕೊಂಡಿದ್ದಾನೆ.

Read Full Story
08:15 PM (IST) Dec 12

Karnataka News Live 12th december 2025 ಬೆಂಗಳೂರು ಜನತೆಗೆ ಶೀಘ್ರವೇ ದೊಡ್ಡ ಮುಕ್ತಿ, ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮುಂದಿನ ತಿಂಗಳೊಳಗೆ ಸಂಚಾರ ಮುಕ್ತ!

ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿಯ ಡಬಲ್-ಡೆಕ್ಕರ್ ಫ್ಲೈಓವರ್ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಇದು ಎಚ್‌ಎಸ್‌ಆರ್-ಬಿಟಿಎಂ ಲೇಔಟ್ ನಡುವಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.

Read Full Story
07:50 PM (IST) Dec 12

Karnataka News Live 12th december 2025 ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!

ಬೀದರ್ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ, ಬಾಗಲಕೋಟೆಯಲ್ಲಿ ಸರಣಿ ಕಳ್ಳತನ, ಮತ್ತು ಬಸವಕಲ್ಯಾಣದಲ್ಲಿ ಪಿಡಿಓ ಮನೆ ಕಳ್ಳತನಕ್ಕೆ ಯತ್ನ ನಡೆದಿದೆ. ಈ ಘಟನೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಆತಂಕವನ್ನು ಸೃಷ್ಟಿಸಿದ್ದು, ಪೊಲೀಸ್ ಸಿಬ್ಬಂದಿಯ ಮನೆಗಳೇ ಸುರಕ್ಷಿತವಲ್ಲದಂತಾಗಿದೆ.
Read Full Story
07:44 PM (IST) Dec 12

Karnataka News Live 12th december 2025 ತ್ರಿಷಾಳ ಮಾಜಿ ಪ್ರಿಯಕರನ ಜೊತೆ ಸಿಕ್ಕಿಬಿದ್ದ ಮತ್ತೊಬ್ಬ ನಟಿ; ಸಂದರ್ಶನದಲ್ಲಿ ಅವರೇ ಒಪ್ಪಿಕೊಂಡರು!

ನಟಿ ತ್ರಿಷಾ 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಜೊತೆಗಿನ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದರು. ಇದಾದ ಹಲವು ವರ್ಷಗಳ ನಂತರ, ಅದೇ ವರುಣ್ ಜೊತೆ ಬಿಗ್ ಬಾಸ್ ವಿಜೇತೆ ಡೇಟಿಂಗ್ ಮಾಡಿದ್ದಾಗಿ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ.

Read Full Story
07:19 PM (IST) Dec 12

Karnataka News Live 12th december 2025 ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ಕೊಡಿ,ಇಲ್ಲವಾದರೆ ಪ್ರತ್ಯೇಕ ರಾಜ್ಯ ಕೊಡಿ - ಶಾಸಕ ರಾಜು ಕಾಗೆ

ಶಾಸಕ ರಾಜು ಕಾಗೆ ಅವರು ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಪ್ರತ್ಯೇಕ 'ಕಿತ್ತೂರು ಕರ್ನಾಟಕ' ರಾಜ್ಯಕ್ಕೆ ಆಗ್ರಹಿಸಿದ್ದಾರೆ. ಕಲ್ಯಾಣ ಕರ್ನಾಟಕದಂತೆ 5 ಸಾವಿರ ಕೋಟಿ ಅನುದಾನ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Read Full Story
07:17 PM (IST) Dec 12

Karnataka News Live 12th december 2025 ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?

ಯುಎಸ್‌ಬಿ ಕಾಂಡೋಮ್‌ಗಳು ಈಗ ಮಾರುಕಟ್ಟೆಯಲ್ಲಿ ಮತ್ತು ವಿವಿಧ ಇ-ಕಾಮರ್ಸ್‌ ವೇದಿಕೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಇಂದು ಅವುಗಳನ್ನು ಹೇಗೆ ಬಳಸುವುದು ಮತ್ತು ಅವುಗಳ ಪ್ರಯೋಜನಗಳೇನು ಅನ್ನೋದರ ವಿವರ ತಿಳಿದುಕೊಳ್ಳೋಣ

Read Full Story
06:42 PM (IST) Dec 12

Karnataka News Live 12th december 2025 ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

ಏಷ್ಯಾನೆಟ್ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ನೇತೃತ್ವದಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಅಂಗವಾಗಿ ಕೊಡಗಿನಲ್ಲಿ ಜಿಲ್ಲಾಮಟ್ಟದ ಸ್ಪರ್ಧೆ ನಡೆಯಿತು. 'ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ' ವಿಷಯದಡಿ ವಿದ್ಯಾರ್ಥಿಗಳು ತಮ್ಮ ಕಲ್ಪನೆಯನ್ನು ಚಿತ್ರಗಳ ಮೂಲಕ ಅದ್ಭುತಗೊಳಿಸಿದರು.

Read Full Story
06:39 PM (IST) Dec 12

Karnataka News Live 12th december 2025 ಉತ್ತರ ಕನ್ನಡ - ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!

ಅಂಕೋಲಾ ತಾಲೂಕಿನಲ್ಲಿ ಯುವಜನರಲ್ಲಿ, ವಿಶೇಷವಾಗಿ 22 ವರ್ಷದೊಳಗಿನವರಲ್ಲಿ ಎಚ್‌ಐವಿ ಸೋಂಕು ಆತಂಕಕಾರಿಯಾಗಿ ಹೆಚ್ಚುತ್ತಿದೆ. ಹದಿಹರೆಯದ ಕುತೂಹಲ, ಮೊಬೈಲ್ ಗೀಳು ಮತ್ತು ಅಸುರಕ್ಷಿತ ನಡವಳಿಕೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿದೆ.

Read Full Story
06:34 PM (IST) Dec 12

Karnataka News Live 12th december 2025 ಏಷ್ಯಾನೆಟ್ ಸುವರ್ಣನ್ಯೂಸ್ ಸಿಬ್ಬಂದಿ ಲಲಿತಮ್ಮ ಸಾವು; ಟ್ರಕ್ ಚಕ್ರ ತಲೆ ಮೇಲೆ ಹರಿದು ಭೀಕರ ಅಂತ್ಯ

ಬೆಂಗಳೂರಿನ ಓಕಳೀಪುರಂ ರೈಲ್ವೇ ಪ್ಯಾರಲೆಲ್ ರಸ್ತೆ ಬಳಿ ಟ್ರಕ್ ಡಿಕ್ಕಿಯಾಗಿ ಏಷ್ಯಾನೆಟ್ ಸುವರ್ಣನ್ಯೂಸ್ ನ ಹೌಸ್ ಕೀಪಿಂಗ್ ಸಿಬ್ಬಂದಿ ಲಲಿತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶೇಷಾದ್ರಿಪುರಂ ಸಂಚಾರ ಪೊಲೀಸರಿಂದ ತನಿಖೆ.

Read Full Story
06:33 PM (IST) Dec 12

Karnataka News Live 12th december 2025 ಇಲ್ಲಿ ಕುಳಿತವರೆಲ್ಲಾ ಶಿವನ ಪಾದ ಸೇರಿದ್ರು ಎನ್ನುತ್ತ ಅಲ್ಲಿಂದ್ಲೇ ವಿಡಿಯೋ ಮಾಡಿದ ಡಾ.ಬ್ರೋ! ಆತಂಕದಲ್ಲಿ ಫ್ಯಾನ್ಸ್​

ಯೂಟ್ಯೂಬ್‌ನಿಂದ ದೂರ ಉಳಿದಿದ್ದ ಕನ್ನಡಿಗರ ಕಣ್ಮಣಿ ಡಾ.ಬ್ರೋ, ಇದೀಗ ಮಾರಿಟೇನಿಯಾ ದೇಶದಿಂದ ಹೊಸ ವಿಡಿಯೋದೊಂದಿಗೆ ಮರಳಿದ್ದಾರೆ. ವಿಶ್ವದ ಅತಿ ಉದ್ದದ ಮತ್ತು ಅಪಾಯಕಾರಿ ಗೂಡ್ಸ್ ರೈಲಿನಲ್ಲಿ ಪ್ರಯಾಣಿಸಿ, ತಮ್ಮ ಜೀವವನ್ನೇ ಪಣಕ್ಕಿಟ್ಟು ಮಾಡಿದ ಈ ಸಾಹಸಮಯ ವಿಡಿಯೋ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
Read Full Story
06:08 PM (IST) Dec 12

Karnataka News Live 12th december 2025 Photos - 6 ವರ್ಷಗಳ ಬಳಿಕ ಮುಂಡಗೋಡಿಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ!

ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಅವರು ಆರು ವರ್ಷಗಳ ನಂತರ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕಾಲೋನಿಗೆ ಆಗಮಿಸಿದ್ದು, ಕಾಲೋನಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. 

Read Full Story
05:35 PM (IST) Dec 12

Karnataka News Live 12th december 2025 Bigg Bossಗೆ ಬಂದ ಚೈತ್ರಾ ಕುಂದಾಪುರ, ರಜತ್​ ವಾಪಸ್​ ಹೋಗದ ಗುಟ್ಟು ರಟ್ಟಾಗೋಯ್ತು! ಕುಂಟೆಬಿಲ್ಲೆ ಆಟದಲ್ಲಿ ರಿವೀಲ್​!

ಬಿಗ್ ಬಾಸ್ ಸೀಸನ್ 12 ರಲ್ಲಿ ಚೈತ್ರಾ ಕುಂದಾಪುರ ಮತ್ತು ರಜತ್​ ಇನ್ನೂ ಮನೆಯಲ್ಲಿದ್ದಾರೆ. ಇತ್ತೀಚಿನ ಪ್ರೊಮೋದಲ್ಲಿ, ಕುಂಟೆಬಿಲ್ಲೆ ಆಟದ ವೇಳೆ ಅವರಿಗೂ ಮತ್ತು ಅಶ್ವಿನಿ ಗೌಡ ಅವರಿಗೂ ನಡೆದ ಜಗಳವನ್ನು ತೋರಿಸಲಾಗಿದೆ. ಈ ಜಗಳದ ಮೂಲಕ, ಇವರಿನ್ನೂ ಯಾಕೆ ಇದ್ದಾರೆ ಎನ್ನುವುದನ್ನು ನೆಟ್ಟಿಗರು ತಿಳಿಸಿದ್ದಾರೆ.

Read Full Story
05:32 PM (IST) Dec 12

Karnataka News Live 12th december 2025 ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್ - ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!

ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ 'ಮಂಕಿ ಕ್ಯಾಪ್' ಧರಿಸಿದ ಕಳ್ಳರ ತಂಡವೊಂದು ಪೊಲೀಸರ ಮನೆಗಳೂ ಸೇರಿದಂತೆ ಒಂಬತ್ತಕ್ಕೂ ಹೆಚ್ಚು ಮನೆಗಳಿಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದೆ. ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story
05:31 PM (IST) Dec 12

Karnataka News Live 12th december 2025 ಸರ್ಕಾರಿ ಶಾಲೆಗಳ ಆಘಾತಕಾರಿ ಬೆಳವಣಿಗೆ, ಮಕ್ಕಳ ದಾಖಲಾತಿ 17 ಲಕ್ಷ ಕುಸಿತ ನಿಜವೆಂದು ಒಪ್ಪಿಕೊಂಡ ಸರ್ಕಾರ!

ಕಳೆದ 15 ವರ್ಷಗಳಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 17 ಲಕ್ಷ ಮಕ್ಕಳ ದಾಖಲಾತಿ ಕುಸಿದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಆಂಗ್ಲ ಮಾಧ್ಯಮದತ್ತ ಒಲವು, ವಲಸೆ ಮತ್ತು ಖಾಸಗಿ ಶಾಲೆಗಳ ಹೆಚ್ಚಳವೇ ಇದಕ್ಕೆ ಕಾರಣವಾಗಿದ್ದು, ದಾಖಲಾತಿ ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. 

Read Full Story