'ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್' ಎಂದೇ ಖ್ಯಾತರಾದ ಬಾಬಾ ವಂಗಾ ಅವರ 2026 ರಿಂದ 5079 ರವರೆಗೆ ಬೆಚ್ಚಿ ಬೀಳಿಸುವಂಥ ಭವಿಷ್ಯವಾಣಿಗಳನ್ನು ನೀಡಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ. ಇವು ಜಗತ್ತಿನ ಅಂತ್ಯದವರೆಗಿನ ಘಟನೆಗಳನ್ನು (Baba Vanga Prediction) ವಿವರಿಸುತ್ತವೆ.
ಬಾಬಾ ವಂಗಾ ಅವರ ವಿಚಿತ್ರವಾದ ನಿಖರವಾದ ಭವಿಷ್ಯವಾಣಿಗಳು (Baba Vanga Prediction) ದಶಕಗಳಿಂದ ಪ್ರಪಂಚದಾದ್ಯಂತ ಜನರನ್ನು ಆಕರ್ಷಿಸಿವೆ. ಅವರು ಬಲ್ಗೇರಿಯಾದ ಅತೀಂದ್ರಿಯ ವ್ಯಕ್ತಿ, ಅಂಧೆಯಾದರೂ ಮಹಿಮಾವಂತೆ. ಅವರನ್ನು 'ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್' ಎಂದೂ ಕರೆಯಲಾಗುತ್ತದೆ. 20ನೇ ಮತ್ತು 21ನೇ ಶತಮಾನದ ಆರಂಭದಲ್ಲಿ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಜನಪ್ರಿಯವಾಗತೊಡಗಿದವು. ಅವರ ಪ್ರವಾದಿ ಮನ್ನೋಟಗಳು 2025 ರಿಂದ 5079 ರವರೆಗೆ ಭವಿಷ್ಯವನ್ನು ಮೀರಿ ವಿಸ್ತರಿಸುತ್ತವೆ. ಜಾಗತಿಕ ಬಿಕ್ಕಟ್ಟುಗಳು, ತಾಂತ್ರಿಕ ಪ್ರಗತಿಗಳಿಂದ ಹಿಡಿದು ಮಾನವೀಯತೆಯ ಭವಿಷ್ಯದ ಬದಲಾವಣೆಗಳವರೆಗೆ ಬಾಬಾ ವಂಗಾ ಅವರ ಆಘಾತಕಾರಿ ಭವಿಷ್ಯವಾಣಿಗಳ ಪಟ್ಟಿ ಇಲ್ಲಿದೆ.
ಬಾಬಾ ವಂಗಾ ಅವಋದು ಎನ್ನಲಾಗುವ ಈ ಭವಿಷ್ಯವಾಣಿಗಳು ಹೆಚ್ಚಾಗಿ ಮೌಖಿಕ ಮತ್ತು ಸಾಂಸ್ಕೃತಿಕ ಕಥನಗಳನ್ನು ಆಧರಿಸಿವೆ ಮತ್ತು ಎಲ್ಲೆಡೆ ಮೀಡಿಯಾಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿವೆ. ಈ ಭವಿಷ್ಯವಾಣಿಗಳ ನಿಖರತೆಯನ್ನು ದೃಢೀಕರಿಸುವ ಯಾವುದೇ ನಿರ್ಣಾಯಕ ಐತಿಹಾಸಿಕ ಅಥವಾ ವೈಜ್ಞಾನಿಕ ದಾಖಲಾತಿಗಳಿಲ್ಲ. ಆದರೂ ಭವಿಷ್ಯವಾಣಿಗಳನ್ನು ಕುತೂಹಲಕ್ಕಾಗಿ ಗಮನಿಸಬಹುದು.
5079 ರವರೆಗೆ ಬಾಬಾ ವಂಗಾ ಅವರ ಭವಿಷ್ಯವಾಣಿಗಳ ಪಟ್ಟಿ ಹೀಗಿದೆ-
2026- ಯುರೋಪ್‌ನಲ್ಲಿ ಸ್ಥಳೀಯರಲ್ಲದ ಜನಸಮುದಾಯ ಬಂದು ಸೇರಲಿದೆ.
2028- ಹೊಸ ಪವರ್ ಸೆಂಟರ್ ಸೃಷ್ಟಿಯಾಗುತ್ತದೆ. ವಿಶ್ವದ ಹಸಿವು ನಿವಾರಣೆಯಾಗುತ್ತದೆ. ಮಾನವರು ಶುಕ್ರವನ್ನು ತಲುಪುತ್ತಾರೆ.
2033- ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟ ಏರಿಕೆ.
2043- ಆರ್ಥಿಕತೆ ಉತ್ಕರ್ಷ; ಯುರೋಪ್ ಪ್ರಧಾನವಾಗಿ ಇಸ್ಲಾಮಿಕ್ ಆಗುತ್ತದೆ.
2046- ಕೃತಕ ಅಂಗಗಳು ಬೃಹತ್ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಮನುಷ್ಯರಿಗೆ ಸಿಗುತ್ತವೆ.
2066- ಅಮೆರಿಕ "ವಿಶ್ವ ವಿನಾಶಕ" ಆಯುಧವನ್ನು ಕಂಡುಹಿಡಿಯುತ್ತದೆ.
2076- ಸಾಮಾಜಿಕ ಜಾತಿ, ವರ್ಗ, ವರ್ಣ ವ್ಯವಸ್ಥೆಯ ಕುಸಿತ.
2084- ಪ್ರಕೃತಿ ತನ್ನನ್ನು ತಾನು ಪುನರುಜ್ಜೀವನಗೊಳಿಸಲು ಪ್ರಾರಂಭಿಸುತ್ತದೆ.
2088- ವೇಗವಾಗಿ ವಯಸ್ಸಾಗುವ ವೈರಸ್ ಕಾಣಿಸಿಕೊಳ್ಳುತ್ತದೆ.
2097- ಆ ವೈರಸ್ ನಿರ್ಮೂಲನೆಯಾಗುತ್ತದೆ.
2100- ಸೂರ್ಯನ ಶಾಖ ಭೂಮಿಯ ಕತ್ತಲೆಯ ಭಾಗವನ್ನೂ ಬಿಸಿಮಾಡುತ್ತದೆ.
2111- ಮಾನವರು ಹೆಚ್ಚು ಹೆಚ್ಚು ರೋಬೋಟ್‌ಗಳಾಗುತ್ತಾರೆ.
2123- ಸಣ್ಣ ರಾಷ್ಟ್ರಗಳು ನಿರಂತರ ಯುದ್ಧದಲ್ಲಿ ತೊಡಗಿ ನಾಶವಾಗುತ್ತವೆ.
2125- ಬಾಹ್ಯಾಕಾಶದಿಂದ ಸಂಕೇತಗಳು ಬರುತ್ತವೆ, ʼಬಾಬಾ ವಂಗಾʼ ಪುನರುಜ್ಜೀವನಗೊಳ್ಳುತ್ತಾಳೆ.
2130- ಅನ್ಯಲೋಕದವರ ಸಹಾಯದಿಂದ ನೀರೊಳಗಿನ ಕಾಲನಿಗಳು ರೂಪುಗೊಳ್ಳುತ್ತವೆ.
2154- ಪ್ರಾಣಿಗಳು ಮಾನವನಂತೆ ವಿಕಸನಗೊಳ್ಳುತ್ತವೆ.
2167- ಹೊಸ ಧರ್ಮವು ಜಾಗತಿಕ ಜನಪ್ರಿಯತೆಯನ್ನು ಗಳಿಸುತ್ತದೆ.
2170- ಭೂಮಿಯು ಒಣಗುತ್ತದೆ ಮತ್ತು ಮರುಭೂಮಿಯಾಗುತ್ತದೆ.
2183- ಮಂಗಳ ಗ್ರಹದ ವಸಾಹತು ಸ್ವಾವಲಂಬಿಯಾಗುತ್ತದೆ ಮತ್ತು ಸಾರ್ವಭೌಮತ್ವವನ್ನು ಬೇಡುತ್ತದೆ.
2187- ಜ್ವಾಲಾಮುಖಿ ಸ್ಫೋಟಗಳನ್ನು ಯಶಸ್ವಿಯಾಗಿ ನಿಗ್ರಹಿಸಲಾಗುತ್ತದೆ.
2195- ನೀರೊಳಗಿನ ಸಮುದಾಯಗಳು ಸ್ವತತ್ರವಾಗಿ ಹೊರಹೊಮ್ಮುತ್ತವೆ.
2201- ಸೂರ್ಯ ತಣ್ಣಗಾಗುತ್ತಾನೆ, ಇದು ಬೃಹತ್ ಹವಾಮಾನ ಬದಲಾವಣೆಗಳಿಗೆ ಕಾರಣವಾಗುತ್ತದೆ.
2221- ಮಾನವರು ಅನ್ಯಗ್ರಹ ಜೀವಿಗಳ ಬಗ್ಗೆ ಭಯಾನಕ ಅರಿವನ್ನು ಎದುರಿಸುತ್ತಾರೆ.
2256- ಹಿಂದಿರುಗುವ ರಾಕೆಟ್ ಮೂಲಕ ಅಂತರ ಗ್ಯಾಲಕ್ಟಿಕ್ ವೈರಸ್ ಅನ್ನು ಭೂಮಿಗೆ ಹಿಂತಿರುಗಿಸಲಾಗುತ್ತದೆ.
2262- ಮಂಗಳ ಗ್ರಹವು ಕ್ಷುದ್ರಗ್ರಹ ಡಿಕ್ಕಿಯಿಂದ ನಾಶದ ಬೆದರಿಕೆಯನ್ನು ಎದುರಿಸುತ್ತದೆ.
2271- ಭೌತಿಕ ಸ್ಥಿರಾಂಕಗಳು ಬದಲಾಗುತ್ತವೆ, ಪ್ರಸ್ತುತ ವೈಜ್ಞಾನಿಕ ಸೂತ್ರಗಳು ಅಲ್ಲಾಡುತ್ತವೆ.
2279- ಕಪ್ಪು ಕುಳಿಗಳು ಮತ್ತು ಬಾಹ್ಯಾಕಾಶ ವಸ್ತುವಿನ ಬಾಗುವಿಕೆಯಿಂದ ಶಕ್ತಿಯನ್ನು ಕಂಡುಹಿಡಿಯಲಾಗುತ್ತದೆ.
2288- ಟೈಮ್ ಟ್ರಾವೆಲ್ ಕಂಡುಹಿಡಿಯಲಾಗುತ್ತದೆ. ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಸಾಧಿಸುತ್ತಾರೆ.
2291- ಸೂರ್ಯ ಮತ್ತಷ್ಟು ತಣ್ಣಗಾಗುತ್ತಾನೆ ಮತ್ತು ಮಾನವರು ಅದನ್ನು ಮತ್ತೆ ಬಿಸಿಮಾಡಲು ಪ್ರಯತ್ನಿಸುತ್ತಾರೆ.
2299- ಫ್ರಾನ್ಸ್ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಯುದ್ಧವನ್ನು ನಡೆಸುತ್ತದೆ.
2341- ಭೂಮಿಯು ಬಾಹ್ಯಾಕಾಶದಿಂದ ಗಂಭೀರ ಅಪಾಯವನ್ನು ಎದುರಿಸುತ್ತದೆ.
2354- ಅನಿರೀಕ್ಷಿತ ಸಮಸ್ಯೆಗಳಿಂದಾಗಿ ನೀರಿನ ಕೊರತೆ ಉಂಟಾಗುತ್ತದೆ.
2371- ಕ್ಷಾಮ ಜಾಗತಿಕ ಸಮಸ್ಯೆಯಾಗುತ್ತದೆ.
2480- ಎರಡು ಕೃತಕ ಸೂರ್ಯರ ಡಿಕ್ಕಿಯಿಂದ ಸಂಪೂರ್ಣ ಕತ್ತಲೆಯಾಗುತ್ತದೆ.
3005- ಮಂಗಳ ಗ್ರಹದಲ್ಲಿ ಅರಾಜಕತೆ ಮತ್ತು ಯುದ್ಧ ಭುಗಿಲೆದ್ದು ಗ್ರಹಗಳ ಅಕ್ಷಗಳು ಬದಲಾಗುತ್ತವೆ.
3010- ಒಂದು ಕ್ಷುದ್ರಗ್ರಹ ಚಂದ್ರನೊಂದಿಗೆ ಡಿಕ್ಕಿ ಹೊಡೆದು ಬೃಹತ್ ಧೂಳಿನ ಮೋಡವನ್ನು ಸೃಷ್ಟಿಸುತ್ತದೆ.
3797- ಎಲ್ಲಾ ಜೀವಿಗಳು ಕಣ್ಮರೆಯಾಗುತ್ತವೆ; ಮಾನವರು ಹೊಸ ಸೌರವ್ಯೂಹದಲ್ಲಿ ವಸಾಹತುಗಳನ್ನು ಸ್ಥಾಪಿಸುತ್ತಾರೆ.
5079- ಜಗತ್ತು ಕೊನೆಗೊಳ್ಳುತ್ತದೆ.


