1997ರ ಕಾಲಘಟ್ಟದಲ್ಲಿ ಸ್ಮಾರ್ಟ್‌ಫೋನ್‌ಗಳಿಲ್ಲದ ಸಮಯದಲ್ಲಿ ಜನರ ಹೊಸ ವರ್ಷದ ಸಂಕಲ್ಪಗಳು ಹೇಗಿದ್ದವು ಎಂಬುದನ್ನು ತೋರಿಸುವ ಹಳೆಯ ವೀಡಿಯೋವೊಂದು ವೈರಲ್ ಆಗಿದೆ.ಈ ವೀಡಿಯೋ 90ರ ದಶಕದ ನೆನಪುಗಳನ್ನು ಮರುಕಳಿಸುತ್ತಿದೆ.
ಹೊಸವರ್ಷ ಬಂತು ಎಂದ್ರೆ ಸಾಕು ಪ್ರತಿವರ್ಷವೂ ಜನರು ಕನಿಷ್ಠ ಆ ದಿನದಿಂದಲಾದರೂ ತಮ್ಮ ಜೀವನದಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ. ಆರೋಗ್ಯ ಕಾಪಾಡಿಕೊಳ್ಳಬೇಕು, ಕಡಿಮೆ ವೆಚ್ಚ ಮಾಡಬೇಕು, ಕಡಿಮೆ ತಿನ್ನಬೇಕು, ಸಣ್ಣಗಾಗಬೇಕು, ಎಷ್ಟು ಬೇಕೋ ಅಷ್ಟು ಮಾತನಾಡಬೇಕು, ಕೋಪ ಮಾಡಿಕೊಳ್ಳಬಾರದು ಹೀಗೆಲ್ಲಾ ಹಲವು ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಾರೆ. ಇದು ಪ್ರತಿವರ್ಷವೂ ಹೊಸವರ್ಷದ ಸಮಯದಲ್ಲಿ ಜನರು ಮಾಡುವ ಪ್ಲಾನ್ ಆಗಿದೆ. ಆದರೆ ಅದನ್ನು ಎಲ್ಲರೂ ಎಷ್ಟು ಫಾಲೋ ಮಾಡ್ತಾರೋ ಗೊತ್ತಿಲ್ಲ, ಆದರೆ ಪ್ರತಿವರ್ಷವೂ ಹೊಸವರ್ಷ ಬಂದಾಗ ಈ ರೀತಿ ಜನ ಪ್ಲಾನ್ ಮಾಡೋದು ಸಾಮಾನ್ಯ ಪ್ರಕ್ರಿಯೆ ಆಗಿದೆ. ಆದರೆ ಸ್ಮಾರ್ಟ್‌ಫೋನ್‌ಗಳ ಹಾವಳಿ ಇಲ್ಲದ 1997ರ ಕಾಲಘಟ್ಟದಲ್ಲಿ ಜನರ ಹೊಸ ವರ್ಷದ ರೆಸಲ್ಯೂಷನ್ಸ್ ಏನಾಗಿತ್ತು ಎಂದು ತೋರಿಸುವ ಹಳೆಯ ವೀಡಿಯೋವೊಂದು ಈಗ ಭಾರಿ ವೈರಲ್ ಆಗಿದೆ.
ಈ ವೀಡಿಯೋ ನಿಮಗೆ ಖುಷಿಯನ್ನು ಕೊಡುವುದರ ಜೊತೆಗೆ 1990-80ರ ದಶಕದ ಜನರಿಗೆ ಗತದ ನೆನಪು ಮಾಡುತ್ತದೆ. the90sindia ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, 1997 ರ ಅಪರೂಪದ ವೀಡಿಯೋ ಸಾಮಾನ್ಯ ಭಾರತೀಯರು ಹೊಸ ವರ್ಷದ ಸಂಕಲ್ಪಗಳ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂಬುದನ್ನು ತೋರಿಸುತ್ತಿದೆ ಎಂದು ಈ ವೀಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
ಈ ವಿಡಿಯೋ 1997 ರ ಜನಪ್ರಿಯ ಟಿವಿ ಶೋ ಆದ 'ಶೇಖರ್ ಸುಮನ್ ಟಾಕ್ ಶೋ, ಮೂವರ್ಸ್ ಅಂಡ್ ಶೇಕರ್ಸ್ ನ ತುಣುಕಾಗಿದೆ. ಈ ಶೋ ದೈನಂದಿನ ಜೀವನದ ಸರಳ ಸಂದರ್ಶನಗಳು ಮತ್ತು ಹಾಸ್ಯಕ್ಕೆ ಹೆಸರುವಾಸಿಯಾಗಿತ್ತು.
ಇದನ್ನೂ ಓದಿ: ಅಮ್ಮ ಹೊಲಿದ ಸ್ವೆಟರ್: ಹಾಸಿಗೆ ಹಿಡಿದಿದ್ದರೂ ಮಗನಿಗಾಗಿ ಸ್ವೆಟರ್ ಹೊಲಿದ 91 ವರ್ಷದ ತಾಯಿ
ವೀಡಿಯೋದಲ್ಲಿ ಸೆರೆಯಾದಂತೆ ಒಬ್ಬ ಮಹಿಳೆಯ ಬಳಿ ಅವರ ಹೊಸವರ್ಷದ ಸಂಕಲ್ಪದ ಬಗ್ಗೆ ಕೇಳಿದಾಗ, ಅವರು ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುವುದಾಗಿ ಹೇಳಿದ್ದಾರೆ. ನಾನು ಯಾವುದೇ ಚಾಟ್, ಯಾವುದೇ ಸಿಹಿತಿಂಡಿ ಇತ್ಯಾದಿಗಳನ್ನು ತಿನ್ನುವುದಿಲ್ಲ ಎಂದು ಅವರು ನಗುತ್ತಾ ಕ್ಯಾಮರಾಗೆ ಹೇಳಿದ್ದು, ಇದ್ದಾಗಿ ಕೆಲವು ಕ್ಷಣಗಳ ನಂತರ, ಅವರು ಹೆಚ್ಚುವರಿ ಬೆಣ್ಣೆಯೊಂದಿಗೆ ನಾಲ್ಕು ಪ್ಲೇಟ್ ಪಾವ್ ಭಾಜಿ ಆರ್ಡರ್ ಮಾಡಿದ್ದಾರೆ. ಇದು ಹೊಸ ವರ್ಷದ ಸಂಕಲ್ಪವನ್ನು ಬಹುತೇಕರು ಹೇಗೆ ಫಾಲೋ ಮಾಡ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ..!
ಇದನ್ನೂ ಓದಿ: ಬಿಲಿಯನೇರ್ ಗೊತ್ತು ಮಿಲಿಯನೇರ್ ಗೊತ್ತು ಇದೇನಿದು ನಿಲಿಯನೇರ್: ನೀವು ನಿಲಿಯನೇರಾ ಮಿಲಿಯನೇರಾ ಚೆಕ್ ಮಾಡಿ
ಹಾಗೆಯೇ ಅದೇ ವೀಡಿಯೋದಲ್ಲಿ ಇನ್ನೊಬ್ಬ ಹುಡುಗಿ ತುಂಬಾ ಬಾಯ್‌ಫ್ರೆಂಡ್‌ಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿ ಅಚ್ಚರಿ ಮೂಡಿಸಿದ್ದಳು. ಹಾಗೆಯೇ ಮತ್ತೊಬ್ಬರು ಮಹಿಳೆ ನಾನು ಈ ವರ್ಷ ಕಡಿಮೆ ಖರ್ಚು ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿದ್ದ ಮತ್ತೊಬ್ಬರು ವ್ಯಕ್ತಿ ಮೈ ಅಗ್ಲೇ ಸಾಲ್ ಸೆ ಜೀನ್ಸ್ ಔರ್ ಟಿ-ಶರ್ಟ್ ಪೆಹ್ನುಂಗಾ ಅಂದರೆ ನಾನು ಮುಂದಿನ ವರ್ಷದಿಂದ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಲು ಪ್ರಾರಂಭಿಸುತ್ತೇನೆ ಎಂದು ಹೇಳಿದರು. ಹಾಗೆಯೇ ಮತ್ತೊಬ್ಬರು ಯುವತಿ ತಾನು ಮನೆ ಬಿಟ್ಟು ಓಡಿ ಹೋಗುವುದಾಗಿ ತಿಳಿಸಿದರೆ, ಬಾಲಕನೋರ್ವ ತಾನು ನನ್ನ ಪುಸ್ತಕಗಳನ್ನು ಶಾಲೆಗೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿದನು.
ಇದನ್ನೂ ಓದಿ: ಬದುಕಿನಲ್ಲಿ ಮಾಡಬಾರದನ್ನು ಮಾಡಿದ ಯುವತಿ: ಅಪರಿಚಿತೆಯ ಬಳಿ ಬದುಕಿನ ಡಾರ್ಕೆಸ್ಟ್ ಸೀಕ್ರೇಟ್ ಕೇಳಿದವನಿಗೆ ಶಾಕ್
ಈ ವೀಡಿಯೋ ನೋಡಿದ ಅನೇಕರು ಹಳೆಯ ನೆನಪುಗಳಿಗೆ ಜಾರಿದ್ದಾರೆ. ಜನರ ಸಂಕಲ್ಪಗಳು ವಿಚಿತ್ರ ಹಾಗೂ ಪ್ರಮಾಣಿಕವಾಗಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವವರ ಕಣ್ಣುಗಳಲ್ಲಿ ಖುಷಿ ಕಾಣುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ತುಂಬಾ ಚುರುಕಾಗಿ ಹಾಗೂ ಸಂದರ್ಭಕ್ಕೆ ತಕ್ಕಂತೆ ಇದ್ದರು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇವರು ನಮಗಿಂತ ತುಂಬಾ ಸುಶಿಕ್ಷಿತರಂತೆ ನಾಗರಿಕರಂತೆ ಕಾಣುತ್ತಿದ್ದಾರೆ. ಇವರ ಬಗ್ಗೆ ಅಸೂಯೆ ಆಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಡಿಸೆಂಬರ್ 26ರಂದು ಈ ವೀಡಿಯೋ ಶೇರ್ ಆಗಿದ್ದು, ಈಗಾಗಲೇ 9 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.


