10:16 PM (IST) Jan 10

India news live 10 Jan 202625 ವರ್ಷದಿಂದ ನಡೆಯುತ್ತಿದ್ದ ಭೋಪಾಲ್‌ ಭೂ ವಿವಾದದಲ್ಲಿ ಸೈಫ್‌ ಅಲಿ ಖಾನ್‌ ಕುಟುಂಬಕ್ಕೆ ಪ್ರಮುಖ ಗೆಲುವು!

ಭೋಪಾಲ್‌ನ ನಯಾಪುರದಲ್ಲಿ 16.62 ಎಕರೆ ಪೂರ್ವಜರ ಭೂಮಿಯ ಮೇಲಿನ ಕಾನೂನು ಹೋರಾಟದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್, ಅವರ ತಾಯಿ ಶರ್ಮಿಳಾ ಟ್ಯಾಗೋರ್ ಮತ್ತು ಸಹೋದರಿಯರೊಂದಿಗೆ ಜಯಗಳಿಸಿದ್ದಾರೆ.

Read Full Story
09:40 PM (IST) Jan 10

India news live 10 Jan 2026'ನನ್ನ ಹೆಸರಲ್ಲಿ ಕೋಟ್ಯಂತರ ಸಾಲ ಮಾಡಿದ್ದ..' ವಿಚ್ಛೇದನದ ಬಗ್ಗೆ ಮೊದಲ ಬಾರಿ ಮಾತನಾಡಿದ ಮೇರಿ ಕೋಮ್‌

Mary Kom Breaks Silence on Divorce; Accuses Ex-Husband Onler of Fraud ಮೇರಿ ಕೋಮ್ ಮತ್ತು ಓನ್ಲರ್ ಎರಡು ದಶಕಗಳಿಗೂ ಹೆಚ್ಚು ಕಾಲ ವಿವಾಹವಾಗಿದ್ದರು. 2023ರಲ್ಲಿ ಆಘಾತಕಾರಿಯಾಗಿ ಮೇರಿ ಕೋಮ್‌ ವಿವಾಹ ವಿಚ್ಛೇದನವನ್ನು ಘೋಷಿಸಿದರು.

Read Full Story
09:01 PM (IST) Jan 10

India news live 10 Jan 2026GGTW vs UPW - ಯುಪಿ ವಾರಿಯರ್ಸ್‌ ವಿರುದ್ಧ 10 ರನ್‌ ಗೆಲುವು ಕಂಡ ಗುಜರಾತ್‌ ಜೈಂಟ್ಸ್‌

ಮಹಿಳಾ ಪ್ರೀಮಿಯರ್ ಲೀಗ್ 2026 ರ ಎರಡನೇ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಯುಪಿ ವಾರಿಯರ್ಸ್ ತಂಡವನ್ನು 10 ರನ್‌ಗಳಿಂದ ಸೋಲಿಸಿತು. ಫೋಬೆ ಲಿಚ್‌ಫೀಲ್ಡ್ ಅವರ ಆಕ್ರಮಣಕಾರಿ ಇನ್ನಿಂಗ್ಸ್ ವ್ಯರ್ಥವಾಯಿತು.

Read Full Story
08:44 PM (IST) Jan 10

India news live 10 Jan 2026ಟ್ರಂಪ್‌ ಜೊತೆ ನೊಬೆಲ್‌ ಪ್ರಶಸ್ತಿ ಹಂಚಿಕೊಳ್ತೇನೆ ಎಂದ ಮಚಾದೊ, 'ಹಂಚಿಕೊಳ್ಳಲು ಸಾಧ್ಯವಿಲ್ಲ' ಎಂದ ಸಮಿತಿ!

ವೆನೆಜುವೆಲಾದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಿಯಾ ಕೊರಿನಾ ಮಚಾದೊ, ತಮ್ಮ ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನೊಬೆಲ್ ಸಮಿತಿಯು, ಪ್ರಶಸ್ತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದೆ.

Read Full Story
07:55 PM (IST) Jan 10

India news live 10 Jan 2026ಸಂಪೂರ್ಣ ಬೆತ್ತಲಾಗಿ ಮರದ ಮೇಲೆ ಕೊಂಬೆಯಿಂದ ಕೊಂಬೆಗೆ ಹಾರಿದ ಬಾಲಿವುಡ್‌ ನಟ, ಹಾಗ್ಯಾಕಾದ್ರೂ ಸ್ಟಾರ್‌ ಹೀರೋ?

Vidyut Jammwal Video: ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ತಮ್ಮ ನಟನೆಯ ಜೊತೆಗೆ ಫಿಟ್ನೆಸ್‌ನಿಂದಲೂ ಸುದ್ದಿಯಲ್ಲಿದ್ದಾರೆ. ಅವರು ಬೆತ್ತಲೆಯಾಗಿ ಮರ ಹತ್ತುವ ವಿಡಿಯೋ ವೈರಲ್ ಆಗುತ್ತಿದೆ.

Read Full Story
05:54 PM (IST) Jan 10

India news live 10 Jan 2026ಡೊನಾಲ್ಡ್ ಟ್ರಂಪ್ ಕನಸು ಭಗ್ನ, ಗ್ರೀನ್‌ಲ್ಯಾಂಡ್‌ ವಿರುದ್ಧ ನೇರ ಯುದ್ಧಕ್ಕೆ ರೆಡಿಯಾದ ಅಮೆರಿಕ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನುಜುವೇಲ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಚೀನಾ ಮತ್ತು ರಷ್ಯಾ ಆಕ್ರಮಣಕಾರಿ ನಿಲುವು ತೆಗೆದುಕೊಂಡವು. ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿರುವಾಗ, ಅತಿದೊಡ್ಡ ಸುದ್ದಿ ಬೆಳಕಿಗೆ ಬಂದಿದೆ.

Read Full Story
04:51 PM (IST) Jan 10

India news live 10 Jan 2026ಮಡುರೊ ರೀತಿಯಲ್ಲೇ ಟರ್ಕಿ ಇಸ್ರೇಲ್‌ ಪ್ರಧಾನಿ ನೆತನ್ಯಾಹುನನ್ನು ಬಂಧಿಸಲಿದೆ, ನಾವು ಅದಕ್ಕೆ ಕಾಯ್ತಿದ್ದೇವೆ - ಪಾಕ್‌ ರಕ್ಷಣಾ ಸಚಿವ

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಬಂಧಿಸಬೇಕೆಂದು ಕರೆ ನೀಡಿದ್ದಾರೆ. ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಬಂಧಿಸಿದ ಉದಾಹರಣೆಯನ್ನು ಅವರು ನೀಡಿದ್ದಾರೆ.

Read Full Story
03:58 PM (IST) Jan 10

India news live 10 Jan 2026ಅರಟ್ಟೈ ಆ್ಯಪ್ ಆರಂಭಿಸಿದ ಶ್ರೀಧರ್ ವೆಂಬುಗೆ ಶಾಕ್, ಪತ್ನಿಗೆ ನೀಡಬೇಕು ₹15000 ಕೋಟಿ ವಿಚ್ಛೇದನ ಬಾಂಡ್

ಅರಟ್ಟೈ ಆ್ಯಪ್ ಆರಂಭಿಸಿದ ಶ್ರೀಧರ್ ವೆಂಬುಗೆ ಶಾಕ್,30 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಆತ್ಮನಿರ್ಭರ್ ಭಾರತ, ಸ್ವದೇಶಿ ಪರಿಕಲ್ಪನೆ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ.

Read Full Story
03:54 PM (IST) Jan 10

India news live 10 Jan 2026BREAKING - ಅಯೋಧ್ಯೆ ರಾಮಮಂದಿರದ ಒಳಹೊಕ್ಕು ನಮಾಜ್‌ ಮಾಡಲು ಯತ್ನಿಸಿದ ಕಾಶ್ಮೀರಿ ಯುವಕ!

Security breach at Ayodhya Ram Temple complex: ಅಯೋಧ್ಯೆ ರಾಮಮಂದಿರ ಸಂಕೀರ್ಣದಲ್ಲಿ ಭದ್ರತಾ ನಿಯಮ ಉಲ್ಲಂಘಿಸಿ ನಮಾಜ್ ಮಾಡಲು ಯತ್ನಿಸಿದ ಕಾಶ್ಮೀರಿ ಯುವಕನನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ.

Read Full Story
03:07 PM (IST) Jan 10

India news live 10 Jan 2026ಭುವನೇಶ್ವದಲ್ಲಿ 6 ಪ್ರಯಾಣಿಕರಿದ್ದ ವಿಮಾನ ಕ್ರಾಶ್, ತುರ್ತು ಸಂದೇಶ ನೀಡಿ ಬೆಲ್ಲಿ ಲ್ಯಾಂಡಿಂಗ್ ಪ್ರಯತ್ನ

ಭುವನೇಶ್ವದಲ್ಲಿ 6 ಪ್ರಯಾಣಿಕರಿದ್ದ ವಿಮಾನ ಕ್ರಾಶ್, ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಗಮನಿಸಿದ ಪೈಲೆಟ್, ತಕ್ಷಣವೇ ತುರ್ತು ಸಂದೇಶ ರವಾನಿಸಿದ್ದಾರೆ. ಬಳಿಕ ಬೆಲ್ಲಿಂಗ್ ಲ್ಯಾಂಡಿಂಗ್ ಮಾಡಲಾಗಿದೆ. ಈ ವೇಳೆ ಕ್ರಾಶ್ ಲ್ಯಾಂಡಿಂಗ್ ಸಂಭವಿಸಿದೆ.

Read Full Story
01:58 PM (IST) Jan 10

India news live 10 Jan 2026ಮಕರ ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಮಹತ್ವದ ಬದಲಾವಣೆ, ಇಂದಿನ ದರ ಎಷ್ಟು?

ಮಕರ ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಮಹತ್ವದ ಬದಲಾವಣೆ, ಇಂದು ಬೆಂಗಳೂರು ಸೇರಿದಂತೆ ದೇಶದಲ್ಲಿ ಬಂಗಾರದ ದರ ಎಷ್ಟಾಗಿದೆ? ಹಬ್ಬಕ್ಕೆ ಬಂಗಾರ ಬೆಲೆ ಏರಿಕೆನಾ, ಇಳಿಕೆಯಾ?

Read Full Story
01:26 PM (IST) Jan 10

India news live 10 Jan 2026ಹೆಂಡ್ತಿ ಹೆಸರ ಮುಂದೆ ಗಂಡನ ಹೆಸರು ಶುದ್ಧ ತಪ್ಪು! ಎಲ್ಲಾ ಉಲ್ಟಾ ಆಗಿದ್ಹೇಗೆ? ಸಂಸ್ಕೃತ ವಿದ್ವಾಂಸರಿಂದ ಇಂಟರೆಸ್ಟಿಂಗ್​ ಮಾಹಿತಿ

ಮದುವೆಯ ನಂತರ ಮಹಿಳೆಯರು ಗಂಡನ ಹೆಸರನ್ನು ಇಟ್ಟುಕೊಳ್ಳುವುದು ಬ್ರಿಟಿಷರಿಂದ ಬಂದ ಪದ್ಧತಿಯೇ ಹೊರತು ಭಾರತೀಯ ಸಂಪ್ರದಾಯವಲ್ಲ ಎಂದು ಸಂಸ್ಕೃತ ವಿದ್ವಾಂಸ ಜಗದೀಶ್ ಶರ್ಮಾ ಹೇಳಿದ್ದಾರೆ. ಸನಾತನ ಧರ್ಮದಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ಇರುವ ಬಗ್ಗೆ ಅವರು ಉದಾಹರಣೆ ಸಹಿತ ವಿವರಿಸಿದ್ದಾರೆ.

Read Full Story
12:55 PM (IST) Jan 10

India news live 10 Jan 2026ಇಂಜುರಿ ಬಳಿಕ ಮರಳಿದ ಶ್ರೇಯಸ್ ಅಯ್ಯರ್‌ನ್ನು ತಂಡದಿಂದಲೇ ಕಿಕೌಟ್‌ಗೆ ಯತ್ನಿಸಿದ ನಾಯಿ

ಇಂಜುರಿ ಬಳಿಕ ಮರಳಿದ ಶ್ರೇಯಸ್ ಅಯ್ಯರ್‌ನ್ನು ತಂಡದಿಂದಲೇ ಕಿಕೌಟ್‌ಗೆ ಯತ್ನಿಸಿದ ನಾಯಿ, ಚೇತರಿಸಿಕೊಂಡು ತಂಡಕ್ಕೆ ಕಮ್ ಬ್ಯಾಕ್ ಮಾಡಿರುವ ಶ್ರೇಯಸ್‌ಗೆ ನಾಯಿಯೊಂದು ತಂಡದಿಂದಲೇ ಕಿಕೌಟ್ ಮಾಡಲು ಪ್ರಯತ್ನಿಸಿದ ಘಟನೆ ನಡೆದಿದೆ.

Read Full Story
10:59 AM (IST) Jan 10

India news live 10 Jan 2026ಹೆತ್ತ ಕರಳಿನ ಮನಕಲುಕುವ ಘಟನೆ, ತೀವ್ರ ಚಳಿಗೆ ಹುತಾತ್ಮ ಯೋಧನ ಪುತ್ಥಳಿಗೆ ಕಂಬಳಿ ಹಾಸಿದ ತಾಯಿ

ಹೆತ್ತ ಕರಳಿನ ಮನಕಲುಕುವ ಘಟನೆ, , ದೇಶಾದ್ಯಂದ ತೀವ್ರ ಚಳಿಗೆ ಜನರು ತತ್ತರಿಸಿದ್ದಾರೆ. ಇದೇ ವೇಳೆ ಹುತಾತ್ಮ ಯೋಧನ ಹೆತ್ತ ತಾಯಿ ಕರುಳು ಮಿಡಿಯದೇ ಇರುತ್ತಾ? ಮಗನ ಪತ್ಥಳಿಗೆ ಕಂಬಳಿ ಹಾಸಿದ ವಿದ್ರಾವ ಘಟನೆ ನಡೆದಿದೆ.

Read Full Story
09:14 AM (IST) Jan 10

India news live 10 Jan 2026ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗೋ ದಿನ ದೂರವಿಲ್ಲ, ಅಸಾದುದ್ದೀನ್ ಓವೈಸಿ ಭವಿಷ್ಯ

ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗೋ ದಿನ ದೂರವಿಲ್ಲ, ಅಸಾದುದ್ದೀನ್ ಓವೈಸಿ ನೀಡಿದ ಹೇಳಿಕೆ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ದೇಶದಲ್ಲಿ ಸದ್ಯ ನಡೆಯುತ್ತಿರುವ ಡೆಮೋಗ್ರಫಿ ಬದಲಾವಣೆ ಓವೈಸಿ ಮಾತನ್ನು ಪುಷ್ಠೀಕರಿಸುತ್ತಿದೆ.

Read Full Story
07:31 AM (IST) Jan 10

India news live 10 Jan 2026ಜನವರಿ 28ರಿಂದ ಬಜೆಟ್ ಅಧಿವೇಶನ ಆರಂಭ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದಕ್ಕೂ ಮೊದಲು ಅಂದರೆ ಜನವರಿ 28 ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಮೊದಲ ಹಂತವು ಫೆಬ್ರವರಿ 13, 2026 ರಂದು ಮುಕ್ತಾಯಗೊಳ್ಳಲಿದೆ.