MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಅರಟ್ಟೈ ಆ್ಯಪ್ ಆರಂಭಿಸಿದ ಶ್ರೀಧರ್ ವೆಂಬುಗೆ ಶಾಕ್, ಪತ್ನಿಗೆ ನೀಡಬೇಕು ₹15000 ಕೋಟಿ ವಿಚ್ಛೇದನ ಬಾಂಡ್

ಅರಟ್ಟೈ ಆ್ಯಪ್ ಆರಂಭಿಸಿದ ಶ್ರೀಧರ್ ವೆಂಬುಗೆ ಶಾಕ್, ಪತ್ನಿಗೆ ನೀಡಬೇಕು ₹15000 ಕೋಟಿ ವಿಚ್ಛೇದನ ಬಾಂಡ್

ಅರಟ್ಟೈ ಆ್ಯಪ್ ಆರಂಭಿಸಿದ ಶ್ರೀಧರ್ ವೆಂಬುಗೆ ಶಾಕ್,30 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಆತ್ಮನಿರ್ಭರ್ ಭಾರತ, ಸ್ವದೇಶಿ ಪರಿಕಲ್ಪನೆ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ.

2 Min read
Author : Chethan Kumar
Published : Jan 10 2026, 03:58 PM IST
Share this Photo Gallery
  • FB
  • TW
  • Linkdin
  • Whatsapp
17
ಜೋಹೋ ಸಂಸ್ಥಾಪಕನ ದಾಂಪತ್ಯ ಜೀವನದಲ್ಲಿ ಬಿರುಕು
Image Credit : x.com/svembu

ಜೋಹೋ ಸಂಸ್ಥಾಪಕನ ದಾಂಪತ್ಯ ಜೀವನದಲ್ಲಿ ಬಿರುಕು

ಜೋಹೋ ಸಂಸ್ಥಾಪಕ, ಅರಟ್ಟೈ ಆ್ಯಪ್ ಮೂಲಕ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಶ್ರೀಧರ್ ವೆಂಬು ದಾಂಪತ್ಯ ಜೀವನ ಡಿವೋರ್ಸ್ ಮೂಲಕ ಅಂತ್ಯಗೊಂಡಿದೆ.ಕಳೆದ ನಾಲ್ಕು ವರ್ಷಗಳಿಂದ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಡಿವೋರ್ಸ್ ಕೇಸ್ ಇದೀಗ ಮಹತ್ವದ ಆದೇಶ ಬಂದಿದೆ. ವಿಚ್ಚೇದನ ನೀಡುವಾಗ ಶ್ರೀಧರ್ ವೆಂಬು, ತನ್ನ ಪತ್ನಿಗ ಪ್ರಮೀಳಾ ಶ್ರೀನಿವಾಸನ್‌ಗೆ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಬಾಂಡ್ ನೀಡಲು ಸೂಚಿಸಿದೆ.

27
15,278 ಕೋಟಿ ರೂಪಾಯಿ ಬಾಂಡ್
Image Credit : x.com/svembu

15,278 ಕೋಟಿ ರೂಪಾಯಿ ಬಾಂಡ್

ಕೋರ್ಟ್ ಆದೇಶ ಭಾರಿ ಚರ್ಚೆಗೆ ಗ್ರಾಸವಾಗಿದೆ. ಶ್ರೀಧರ್ ವೆಂಬು ಆರಂಭಿಸಿದ ಕಂಪನಿ, ಆಸ್ತಿ ಎಲ್ಲಾ ಮೌಲ್ಯ ಒಟ್ಟು 30,000 ಕೋಟಿ ರೂಪಾಯಿಗೂ ಹೆಚ್ಚು, ಇದರಲ್ಲಿ ಅರ್ಧ ಅಂದರೆ 15,278 ಕೋಟಿ ರೂಪಾಯಿ ಬಾಂಡ್ ರೂಪದಲ್ಲಿ ಪತ್ನಿಗೆ ನೀಡಲು ಕೋರ್ಟ್ ಸೂಚಿಸಿದೆ ಎಂದು ಇಂಡಿಯಾ ಟುಡೆ ವರದಿ ವರದಿ ಮಾಡಿದೆ.

Related Articles

Related image1
Arattai App: ವಾಟ್ಸ್ ಆ್ಯಪ್‌ಗೆ ಠಕ್ಕರ್ ಕೊಡಲು ಬರುತ್ತಿದೆ ದೇಸಿ ನಿರ್ಮಿತ ಅರಟ್ಟೈ
Related image2
ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದೀರಾ? ಹಾಗಿದ್ರೆ ಕನ್ನಡ ಕಲಿಯಿರಿ: Zoho CEO ಶ್ರೀಧರ್‌ ವೆಂಬು
37
ಸ್ವದೇಶಿ, ಆತ್ಮನಿರ್ಭರ್ ಭಾರತ್‌ಗೆ ಪುಷ್ಠಿ ನೀಡಿದ ವೆಂಬುಗೆ ಸಂಸಾರ ತಾಪತ್ರಯ
Image Credit : x.com/svembu

ಸ್ವದೇಶಿ, ಆತ್ಮನಿರ್ಭರ್ ಭಾರತ್‌ಗೆ ಪುಷ್ಠಿ ನೀಡಿದ ವೆಂಬುಗೆ ಸಂಸಾರ ತಾಪತ್ರಯ

ಯಶಸ್ವಿ ಉದ್ಯಮಿ, ಟೆಕ್ ಸಂಸ್ಥಾಪಕನ ದಾಂಪತ್ಯ ಜೀವನ ಅಯೋಮಯವಾಗಿದೆ. 2021ರಲ್ಲೇ ಶ್ರೀಧರ್ ವೆಂಬು ಹಾಗೂ ಪ್ರಮೀಳಾ ಶ್ರೀನಿವಾಸನ್ ವಿಚ್ಚೇದನಕ್ಕಾಗಿ ಅಮರಿಕದ ಕ್ಯಾಲಿಫೋರ್ನಿಯಾ ಕೋರ್ಟ್ ಮೆಟ್ಟಿಲೇರಿದ್ದರು. ಬರೋಬ್ಬರಿ ನಾಲ್ಕು ವರ್ಷಗಳ ವಿಚಾರಣೆ ಬಳಿಕ ಇದೀಗ ಪ್ರಕರಣ ಅಂತಿಮ ಘಟ್ಟ ತಲುಪಿದ್ದು, ಬಾಂಡ್ ನೀಡಲು ಸೂಚನೆ ನೀಡಿದೆ.

47
ಬಾಂಡ್ ವಿಚಾರ ಕೋರ್ಟ್ ಮೆಟ್ಟಿಲೇರಿದ ವೆಂಬು
Image Credit : google

ಬಾಂಡ್ ವಿಚಾರ ಕೋರ್ಟ್ ಮೆಟ್ಟಿಲೇರಿದ ವೆಂಬು

ವ್ಯಾಟ್ಸಾಪ್‌ಗೆ ಪ್ರತಿಸ್ಪರ್ಧಿಯಾಗಿ ಭಾರತೀಯ ಆ್ಯಪ್ ಅರಟ್ಟೈ ಆರಂಭಿಸಿದ ಶ್ರೀಧರ್ ವೆಂಬು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು. ಇದಕ್ಕೂ ಮೊದಲು ಶ್ರೀಧರ್ ವೆಂಬು ಆರಂಭಿಸಿದ ಜೋಹೋ, ಗೂಗಲ್, ಜಿಮೇಲ್, ಕ್ಲೌಡ್ ಸೇರಿದಂತೆ ಹಲವು ದೈತ್ಯ ಕಂಪನಿಗಳಿಗೆ ಪೈಪೋಟಿ ನೀಡಿದೆ. ಕೋರ್ಟ್ ಬಾಂಡ್ ಸೂಚನೆ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಿರುವ ಶ್ರೀಧರ್ ವೆಂಬು ಆದೇಶಕ್ಕೆ ತಡೆ ನೀಡಿದ್ದಾರೆ ಎಂದು ಒಪ್ ಇಂಡಿಯಾ ವರದಿ ಮಾಡಿದೆ.

57
1993ರಲ್ಲಿ ಪ್ರಮೀಳಾ ಜೊತೆ ವಿವಾಹ
Image Credit : linkedin/pramila-srinivasan

1993ರಲ್ಲಿ ಪ್ರಮೀಳಾ ಜೊತೆ ವಿವಾಹ

ಮದ್ರಾಸ್‌ನಲ್ಲಿ ಶಿಕ್ಷಣ ಬಳಿಕ ಉನ್ನತ ವ್ಯಾಸಾಂಗಕ್ಕಾಗಿ ಅಮೆರಿಕ ತೆರಳಿದ ಶ್ರೀಧರ್ ವೆಂಬು 1993ರಲ್ಲಿ ಪ್ರಮೀಳಾ ಶ್ರೀನಿವಾಸನ್ ಮದುವೆಯಾಗಿದ್ದಾರೆ. ಪ್ರಮೀಳಾ ಅಮೆರಿದ ಕ್ಯಾಲಿಫೋರ್ನಿಯಾದಲ್ಲಿ ನೆಲೆಯಿದ ಭಾರತೀಯ ಮೂಲದವರು. ಶಿಕ್ಷಣ, ಆರೋಗ್ಯ, ಟೆಕ್ನಾಲಜಿ ಸೇರಿದಂತೆ ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ದಶಕ ಅಂದರೆ ಸರಿಸುಮಾರು 30 ವರ್ಷ ಜೊತೆಯಾಗಿ ಕ್ಯಾಲಿಫೋರ್ನಿಯಾದಲ್ಲೇ ಜೀವನ ನಡೆಸಿದ್ದರು. 2019ರಲ್ಲಿ ಶ್ರೀಧರ್ ವೆಂಬು ಭಾರತಕ್ಕೆ ಸ್ಥಳಾಂತರಗೊಂಡರೆ, ಪ್ರಮೀಳಾ ಅಮೆರಿಕದಲ್ಲೇ ನೆಲೆಸಿದ್ದಾರೆ.

67
1996ರಲ್ಲಿ ಸಾಫ್ಟ್‌ವೇರ್ ಕಂಪನಿ ಆರಂಭ
Image Credit : Asianet News

1996ರಲ್ಲಿ ಸಾಫ್ಟ್‌ವೇರ್ ಕಂಪನಿ ಆರಂಭ

1996ರಲ್ಲಿ ಶ್ರೀಧರ್ ವೆಂಬು ಇಬ್ಬರು ಸಹೋದರರು ಹಾಗೂ ಗೆಳಯನ ಜೊತೆಗೂಡಿ ಸಾಫ್ಟ್‌ವೇರ್ ಡೆವಲಪ್ಪರ್ ಕಂಪನಿ ಆರಂಭಿಸಿದ್ದರು. 2009ರಲ್ಲಿ ಝೋಹೋ ಎಂದು ಮರುನಾಮಕರಣ ಮಾಡಲಾಗಿತ್ತು. ಝೋಹೋ ವಿಶ್ವದ ಅತೀ ದೊಡ್ಡ ಕಂಪನಿಯಾಗಿ ಬೆಳೆದಿದೆ. ಇತ್ತೀಚೆಗೆ ಅರಟ್ಟೈ ಅನ್ನೋ ಆ್ಯಪ್ ಕೂಡ ಆರಂಭಿಸಿ ಭಾರಿ ಜನಪ್ರಿಯರಾಗಿದ್ದಾರೆ.

1996ರಲ್ಲಿ ಸಾಫ್ಟ್‌ವೇರ್ ಕಂಪನಿ ಆರಂಭ

77
ಡಿವೋರ್ಸ್‌ಗೆ ಕಾರಣವೇನು?
Image Credit : x.com/svembu

ಡಿವೋರ್ಸ್‌ಗೆ ಕಾರಣವೇನು?

ವರದಿಗಳ ಪ್ರಕಾರ, ಝೋಹೋ ಕಂಪನಿ ವಿಶ್ವದ ಅತೀ ದೊಡ್ಡ ಕಂಪನಿಯಾಗಿ ಬೆಳೆದು ನಿಂತಿದೆ. ಇದರ ಅಧಿಪತ್ಯ ಸಾಧಿಸಲು ಪತ್ನಿ ಪ್ರಮೀಳಾ ಶ್ರೀನಿವಾಸನ್ ಬಯಸಿದ್ದರು. ಕಂಪನಿಯ ಬಹುತೇಕ ಪಾಲು ತನಗೆ ಸೇರಬೇಕು ಎಂದು ಜಗಳ ಶುರುವಾಗಿದೆ. ಇದರ ನಡುವೆ ಶ್ರೀಧರ್ ವೆಂಬು ಕಂಪನಿ ಪಾಲುಗಳನ್ನು ಪ್ರಮೀಳಾ ಶ್ರೀನಿವಾಸನ್‌ಗೆ ಗೊತ್ತಲ್ಲದೆ ವರ್ಗಾವಣೆ ಮಾಡಿದ್ದಾರೆ ಅನ್ನೋ ಆರೋಪಗಳು ಇದೆ. ಪ್ರಮುಖವಾಗಿ ಆಸ್ತಿ ಹಾಗೂ ಪಾಲುದಾರಿಕೆಯಲ್ಲಿ ಆರಂಭವಾದ ಜಗಳ ಡಿವೋರ್ಸ್‌ನಲ್ಲಿ ಅಂತ್ಯಗೊಂಡಿದೆ.

ಡಿವೋರ್ಸ್‌ಗೆ ಕಾರಣವೇನು?

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಅರಟ್ಟೈ
ಸಂಬಂಧಗಳು
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ಅಪರೂಪದ ಖನಿಜಕ್ಕಾಗಿ ಭಾರತ - ಬ್ರೆಜಿಲ್‌ ಡೀಲ್‌
Recommended image2
ಭಾರತದ ಮೇಲೆ ಶೇ.18 ಅಲ್ಲ, ಇನ್ನು ಶೇ.10 ತೆರಿಗೆ
Recommended image3
ಕೇವಲ ಇಷ್ಟು ಲಕ್ಷ ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಿದ್ರೆ 5 ವರ್ಷ ಪ್ರತಿ ತಿಂಗಳು ಸಿಗುತ್ತೇ ₹9,250!
Related Stories
Recommended image1
Arattai App: ವಾಟ್ಸ್ ಆ್ಯಪ್‌ಗೆ ಠಕ್ಕರ್ ಕೊಡಲು ಬರುತ್ತಿದೆ ದೇಸಿ ನಿರ್ಮಿತ ಅರಟ್ಟೈ
Recommended image2
ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದೀರಾ? ಹಾಗಿದ್ರೆ ಕನ್ನಡ ಕಲಿಯಿರಿ: Zoho CEO ಶ್ರೀಧರ್‌ ವೆಂಬು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved