ಭುವನೇಶ್ವದಲ್ಲಿ 6 ಪ್ರಯಾಣಿಕರಿದ್ದ ವಿಮಾನ ಕ್ರಾಶ್, ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಗಮನಿಸಿದ ಪೈಲೆಟ್, ತಕ್ಷಣವೇ ತುರ್ತು ಸಂದೇಶ ರವಾನಿಸಿದ್ದಾರೆ. ಬಳಿಕ ಬೆಲ್ಲಿಂಗ್ ಲ್ಯಾಂಡಿಂಗ್ ಮಾಡಲಾಗಿದೆ. ಈ ವೇಳೆ ಕ್ರಾಶ್ ಲ್ಯಾಂಡಿಂಗ್ ಸಂಭವಿಸಿದೆ. 

ಭುವನೇಶ್ವರ (ಜ.10) ಆರು ಮಂದಿ ಪ್ರಯಾಣಿಕರು ಹೊತ್ತು ಸಾಗಿದ ಸಣ್ಣ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಒಡಿಶಾದ ಭುನವೇಶ್ವರದ ಏರ್‌ಸ್ಟ್ರಿಪ್‌ನಲ್ಲಿ ಕ್ರಾಶ್ ಲ್ಯಾಂಡಿಂಗ್ ಆಗಿದೆ. ತಾಂತ್ರಿಕ ಸಮಸ್ಯೆ ಗಮನಿಸಿದ ಪೈಲೆಟ್ ತುರ್ತು ಲ್ಯಾಂಡಿಂಗ್‌ಗೆ ಸಂದೇಶ ಕಳುಹಿಸಿದ್ದಾರೆ. ಲ್ಯಾಂಡಿಂಗ್ ವೇಳೆ ವಿಮಾನ ಪತನಗೊಂಡಿದೆ. ಈ ಪೈಕಿ 6 ಪ್ರಯಾಣಿಕರಿಗೆ ಗಾಯವಾಗಿದೆ. ಇತ್ತ ಪೈಲೆಟ್ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

10 ಕೀಲೋಮೀಟರ್ ಪ್ರಯಾಣದ ಬಳಿಕ ತಾಂತ್ರಿಕ ಸಮಸ್ಯೆ ಪತ್ತೆ

ವಿಮಾನ ಟೇಕ್ ಆಫ್ ಆದ ಬಳಿ ಪ್ರಯಾಣ ಮುಂದುವರಿಸಿದೆ. ಆದರೆ 10 ಕಿಲೋಮೀಟರ್ ಪ್ರಯಾಣದ ಬಳಿಕ ಪೈಲೆಟ್‌ಗೆ ವಿಮಾನದಲ್ಲಿ ತಾಂತ್ರಿಕ ದೋಷವಿರುವುದು ಪತ್ತೆಯಾಗಿದೆ. ಹೀಗಾಗಿ ತಕ್ಷಣವೇ ಪೈಲೆಟ್ ವಿಮಾನ ಲ್ಯಾಂಡಿಂಗ್ ಮಾಡಲು ಮುಂದಾಗಿದ್ದರೆ. ಏರ್ ಕಂಟ್ರೋಲ್ ರೂಂಗೆ ತುರ್ತು ಲ್ಯಾಡಿಂಗ್ ಮಾಡುವುದಾಗಿ ಸಂದೇಶ ನೀಡಿದ್ದಾರೆ. ರೂರ್ಕೆಲಾದ ಏರ್‌ಸ್ಟ್ರಿಪ್ ಬಳಿ ಲ್ಯಾಂಡಿಂಗ್ ಮಾಡಲು ಪೈಲೆಟ್ ಮುಂದಾಗಿದ್ದಾರೆ. ರೂರ್ಕೆಲಾ ಏರ್‌ಸ್ಟ್ರಿಪ್‌ನಿಂದ 10 ಕಿಲೋಮೀಟರ್ ದೂರದಲ್ಲಿ ಪೈಲೆಟ್ ತುರ್ತಾಗಿ ಲ್ಯಾಂಡ್ ಮಾಡಲು ಪ್ರಯತ್ನಿಸಿದ್ದಾರೆ.

ತಾಂತ್ರಿಕ ಸಮಸ್ಯೆಗಳಿಂದ ತುರ್ತು ಲ್ಯಾಂಡಿಂಗ್ ಸವಾಲಾಗಿತ್ತು. ಹೀಗಾಗಿ ಪೈಲೈಟ್ ಬೆಲ್ಲಿಂಗ್ ಲ್ಯಾಂಡಿಂಗ್ ಪ್ರಯತ್ನಿಸಿದ್ದಾರೆ. ಅತ್ಯಂತ ಅಪಾಯಾಕಾರಿ ಲ್ಯಾಂಡಿಂಗ್‌ನ್ನು ಪ್ರಯತ್ನಿಸಿದ್ದಾರೆ. ಹುಲ್ಲಿನ ಮೈದಾನ ರೀತಿ ಇದ್ದ ಪ್ರದೇಶದಲ್ಲಿ ಬೆಲ್ಲಿ ಲ್ಯಾಂಡಿಂಗ್ ಮೂಲಕ ವಿಮಾನ ಇಳಿಸಿದ್ದಾರೆ. ಇದರಿಂದ ಅಪಾಯದ ತೀವ್ರತೆ ಕಡಿಮೆಯಾಗಿದೆ. 9 ಪ್ರಯಾಣಿಕರ ಪೈಕಿ 6 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಪೈಲೆಟ್ ಕೂಡ ಗಾಯಗೊಂಡಿದ್ದಾರೆ. ತಕ್ಷಣವೇ ರಕ್ಷಣಾ ತಂಡಗಳು ಆಗಮಿಸಿ ಪ್ರಯಾಣಿಕರು ಹಾಗೂ ಪೈಲೆಟ್ ರಕ್ಷಿಸಿದ್ದಾರೆ. ಸದ್ಯ ಪೈಲೆಟ್ ಹಾಗೂ ಗಾಯಗೊಂಡ ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ವರು ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿಗಳು ಸೇರಿದ ಏರ್‌ಕ್ರಾಫ್ಟ್ ಹಾರಾಟ ನಡೆಸಿತ್ತು. ತಾಂತ್ರಿಕ ಸಮಸ್ಯೆಯಿಂದ ಗ್ರಾಮದ ವಿಶಾದ ಮೈದಾನ ರೀತಿಯ ಗದ್ದೆಯಲ್ಲಿ ಕ್ರಾಶ್ ಲ್ಯಾಂಡಿಂಗ್ ಮಾಡಲಾಗಿದೆ. ಪೈಲೆಟ್ ತಾಳ್ಮೆಯಿಂದ ವಿಮಾನ ನಿಯಂತ್ರಿಸಿ ಬೆಲ್ಲಿ ಲ್ಯಾಂಡಿಂಗ್ ಮಾಡುವ ಮೂಲಕ ಪ್ರಯಾಣಿಕರ ಜೀವ ಉಳಿಸಿದ್ದಾರೆ. ಕ್ಯಾಪ್ಟನ್ ನವೀನ್ ಕಡಂಗಾ ಹಾಗೂ ಕ್ಯಾಪ್ಟನ್ ತರುಣ್ ಶ್ರೀವಾತ್ಸವ್ ಇಬ್ಬರು ಗಾಯಗೊಂಡಿದ್ದಾರೆ.ಈ ಪೈಕಿ ಓರ್ವ ಪೈಲೆಟ್ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಪತನಗೊಂಡ ವಿಮಾನದಲ್ಲಿದ್ದ ಪ್ರಯಾಣಿಕರ ವಿವರ

  • ಸುಸಾಂತ ಕುಮಾರ್ ಬಿಸ್ವಾಲ್
  • ಅನಿತಾ ಸಾಹು
  • ಸುನಿಲ್ ಅಗರ್ವಾಲ್
  • ಸಬಿತಾ ಅಗರ್ವಾಲ್