- Home
- News
- India News
- India Latest News Live: ಎಕ್ಸ್ಪ್ರೆಸ್ವೇಗಳಲ್ಲಿ 120 ಕಿ.ಮೀ ವೇಗದಲ್ಲಿ ವಾಹನ ಚಾಲನೆಗೆ ದಂಡವಿಲ್ಲ: ಗಡ್ಕರಿ
LIVE NOW
India Latest News Live: ಎಕ್ಸ್ಪ್ರೆಸ್ವೇಗಳಲ್ಲಿ 120 ಕಿ.ಮೀ ವೇಗದಲ್ಲಿ ವಾಹನ ಚಾಲನೆಗೆ ದಂಡವಿಲ್ಲ: ಗಡ್ಕರಿ

ಸಾರಾಂಶ
ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಾಹನ ಸವಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಎಕ್ಸ್ಪ್ರೆಸ್ವೇಗಳಲ್ಲಿ ಇನ್ಮುಂದೆ 120 ಕಿ.ಮೀ ವೇಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ದಂಡ ವಿಧಿಸಿದಂತೆ ಆದೇಶಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಪ್ರಕಾರ, ರಸ್ತೆಗಳಲ್ಲಿ ನಿಗದಿ ಪಡಿಸಿರುವ ಗರಿಷ್ಠ ವೇಗಕ್ಕಿಂತ ಶೇ. 20ರಷ್ಟು ಹೆಚ್ಚು ವೇಗದಲ್ಲಿ ಚಲಾಯಿಸಿದರೂ ಚಲನ್ ಜಾರಿಮಾಡಬಾರದು. ಅದಕ್ಕಿಂತ ಹೆಚ್ಚಿನ ವೇಗ ಮೀರಿದರೆ ಚಲನ್ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದ ಸ್ವಲ್ಪ ವೇಗದಲ್ಲಿಯೂ ಚಲಿಸಿದರೂ ದಂಡ ಬೀಳುವ ಆತಂಕದಲ್ಲಿ ವಾಹನ ಸವಾರರು ಕೊಂಚ ಮಟ್ಟಿಗೆ ನಿರಾಳರಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ