ಮೊಬೈಲ್ ಬಳಕೆದಾರರಿಗೆ ನವೆಂಬರ್ 1 ರಿಂದ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ಕಾಲರ್ ನೇಮ್ ಪ್ರೆಸೆಂಟೇಶನ್ (CNAP) ಎಂಬ ಹೊಸ ನಿಯಮ ಜಾರಿಗೆ ತರುತ್ತಿದೆ. ಇದರ ಮೂಲಕ ಅಪರಿಚಿತ ಕರೆಗಳು ಬಂದಾಗ ಸಿಮ್ ಹೊಂದಿರುವವರ ಅಧಿಕೃತ ಹೆಸರು ಮೊಬೈಲ್ ಪರದೆಯ ಮೇಲೆ ಕಾಣಿಸಲಿದೆ. ಸೈಬರ್ ವಂಚನೆ ಮತ್ತು ಅಪರಿಚಿತ ಕರೆಗಳ ಹಾವಳಿ ತಡೆಯುವುದು ಈ ಹೊಸ ಸೇವೆಯ ಮುಖ್ಯ ಉದ್ದೇಶವಾಗಿದೆ.
ಬೆಂಗಳೂರು: ಮೊಬೈಲ್ ಬಳಕೆ ವಿಚಾರದಲ್ಲಿ ನವೆಂಬರ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಕೋಟ್ಯಾಂತರ ಮೊಬೈಲ್ ಬಳಕೆದಾರರಿಗೆ ಈ ಹೊಸ ನಿಯಮವು ಉಪಯೋಗ ಆಗಲಿದೆ.
ಏನಿದು ಹೊಸ ನಿಯಮ?
ಈ ಹಿಂದೆ ನಿಮಗೆ ಯಾವುದೋ ಅಪರಿಚಿತ ಕರೆ ಬಂದರೆ.. ಯಾರು ಕರೆ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಿರಲಿಲ್ಲ. ಟ್ರೂಕಾಲರ್ ಆನ್ ಆಗಿದ್ದರೂ..ಅಧಿಕೃತವಾಗಿ ಕರೆ ಮಾಡಿದ್ದು ಯಾರೆಂದು ಗೊತ್ತೇ ಆಗುತ್ತಿಲಿಲ್ಲ. ನವೆಂಬರ್ ಒಂದರಿಂದ ಹಾಗೆ ಆಗೋದಿಲ್ಲ. ಅಪರಿಚಿತ ಕರೆಗಳು ನಿಮ್ಮ ಮೊಬೈಲ್ಗೆ ಬಂದರೆ.. ಸಿಮ್ ಯಾರ ಹೆಸರಲ್ಲಿದೆ ಅನ್ನೋದನ್ನ ಸ್ಪಷ್ಟವಾಗಿ ನಿಮ್ಮ ಮೊಬೈಲ್ನಲ್ಲಿ ಡಿಸ್ಪ್ಲೇ ಆಗಲಿದೆ. ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಈ ಸಂಬಂಧ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ.
ಹೊಸ ನಿಯಮಗಳ ಪ್ರಕಾರ.. ನವೆಂಬರ್ 1 ರಿಂದ ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರು ಕಾಲರ್ ನೇಮ್ ಪ್ರೆಸೆಂಟೇಶನ್ (CNAP) ಪರಿಚಯಿಸಲಿದ್ದಾರೆ. CNAP ಭಾರತದ ಪರಿಶೀಲಿಸಿದ ಕಾಲರ್ ಸಿಸ್ಟಮ್ ಆಗಿದೆ. ಇದು ಕರೆ ಮಾಡುವವರ ಸಂಖ್ಯೆಯನ್ನು ಪ್ರದರ್ಶಿಸಲು ಮತ್ತಯ ಅವರ ಹೆಸರನ್ನು ಡಿಸ್ಪ್ಲೇನಲ್ಲಿ ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ.
DoT ಆದೇಶದ ಪ್ರಕಾರ.. 4G ಪೀಳಿಗೆಗಿಂತ ಹೆಚ್ಚಿನ ಸೇವೆಗಳ ಎಲ್ಲಾ ಬಳಕೆದಾರರಿಗೆ CNAP ಸೇವೆಯನ್ನು ಸಕ್ರಿಯಗೊಳಿಸಲಾಗುವುದು. CNAP ಸೇವೆಯನ್ನು 2G ಮತ್ತು 3G ಸೇವಾ ಬಳಕೆದಾರರಿಗೆ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಸಂಬಂಧ ಪ್ರತ್ಯೇಕ ಪ್ರಕಟಣೆ ಮಾಡೋದಾಗಿ ತಿಳಿಸಿದೆ.
ಕಾಲರ್ ಐಡಿ ಹೇಗೆ ಕೆಲಸ ಮಾಡುತ್ತದೆ?
DoT ಆದೇಶದ ಪ್ರಕಾರ.. ಒಬ್ಬ ವ್ಯಕ್ತಿಯು ತಮ್ಮ ಸ್ಮಾರ್ಟ್ಫೋನ್ಗೆ ಕರೆ ಸ್ವೀಕರಿಸಿದಾಗಲೆಲ್ಲಾ ಕರೆ ಮಾಡಿದವರ ಸಂಖ್ಯೆ ಸ್ಮಾರ್ಟ್ಫೋನ್ ಡಿಸ್ಪ್ಲೇಯ ಮೇಲ್ಭಾಗದಲ್ಲಿ ಗೋಚರಿಸುತ್ತದೆ. ನಂತರ ಕರೆ ಮಾಡಿದವರ ಹೆಸರು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಸೇರಿಸುತ್ತದೆ. ಒಂದು ವೇಳೆ ನೀವು ಆ ನಂಬರ್ ಅನ್ನು ಸೇವ್ ಮಾಡಿಕೊಳ್ಳದಿದ್ದರೆ.. ಟೆಲಿಕಾಂ ಸರ್ವರ್ನಲ್ಲಿ ಸೇವ್ ಆಗಿರುವ ಹೆಸರನ್ನೇ ನಿಮ್ಮ ಮೊಬೈಲ್ನಲ್ಲೂ ತೋರಿಸುತ್ತದೆ.
ಅಷ್ಟೇ ಅಲ್ಲದೇ CNAP ಸೇವೆಯು ಅಂತಾರಾಷ್ಟ್ರೀಯ ಕರೆಗಳ ಬಗ್ಗೆ ಮಾಹಿತಿ ನೀಡಲಿದೆ. ಅದಕ್ಕಾಗಿ ಡೇಟಾ ಬೇಸ್ ರಚಿಸುವಂತೆ ಟೆಲಿಕಾಂ ಕಂಪನಿಗಳಿಗೆ DoT ಹೇಳಿದೆ. ಸದ್ಯ ಇದರ ಮೇಲೆ ಪ್ರಯೋಗ ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕರೆಗಳ ಬಗ್ಗೆಯೂ ನಿಮಗೆ ಮಾಹಿತಿ ಸಿಗಲಿದೆ.
ಇನ್ನು ಯಾಕೆ CNAP ಸೇವೆ ಪರಿಚಯ ಮಾಡಲಾಗುತ್ತಿದೆ ಅಂದರೆ.. ಅದರ ಮೂಲ ಉದ್ದೇಶ ಸೈಬರ್ ವಂಚಕರಿಂದ ದೂರ ಇರೋದಾಗಿದೆ. ಸೈಬರ್ ಅಪರಾಧ ಮತ್ತು ಕರೆ ವಂಚನೆಗಳನ್ನ ನಿಗ್ರಹಿಸುವುದು DoTಯ ಪ್ರಮುಖ ಗುರಿಯಾಗಿದೆ. ಸಾರ್ವಜನರಿಕರಿಗೆ ಜಾಗೃತಿ ಮೂಡಿಸಲು ಮತ್ತು ಮುನ್ನೆಚ್ಚರಿಕೆ ತೆಗೆದುಕೊಳ್ಳಲು CNAP ಜಾರಿಗೆ ತರುತ್ತಿದೆ.






