ಬಾಂಗ್ಲಾದೇಶದ ಗಲಭೆ ವೇಳೆ ಅಂದಿನ ಪ್ರಧಾನಿ ಶೇಕ್ ಹಸಿನಾ ಹೆಲಿಕಾಪ್ಟರ್ ಮೂಲಕ ದೇಶ ತೊರೆಯುತ್ತಿರುವ ದೃಶ್ಯ ಸೆರೆ ಹಿಡಿದಿದ್ದ ಮಾಜಿ ವಾಯುಸೇನಾಧಿಕಾರಿ ಶವವಾಗಿ ಪತ್ತೆಯಾಗಿದ್ದಾರೆ. ನದೀ ತೀರದಲ್ಲಿ ಶವ ಪತ್ತೆಯಾಗಿದೆ.

ಢಾಕಾ(ಅ.29) ಬಾಂಗ್ಲಾದೇಶದಲ್ಲಿ ನಡೆದ ಗಲಭೆಯಲ್ಲಿ ಚುನಾಯಿತ ಪ್ರಧಾನಿ ಶೇಕ್ ಹಸೀನಾ ದೇಶ ತೊರೆಯಬೇಕಾಯಿತು. ಹಿಂಸೆ ಮೂಲಕ ಸರ್ಕಾರವನ್ನು ಉರುಳಿಸಿ ಹಂಗಾಮಿ ಸರ್ಕಾರ ರಚನೆಗೊಂಡಿತು. ಪ್ರಧಾನಿ ನಿವಾಸಕ್ಕೆ ಪ್ರತಿಭಟನಕಾರರು ನುಗ್ಗಿದ್ದರು. ಹೀಗಾಗಿ ಶೇಕ್ ಹಸೀನಾ ಪ್ರಾಣ ಉಳಿಸಿಕೊಳ್ಳಲು ಬಾಂಗ್ಲಾದೇಶ ತೊರೆದು ಹೆಲಿಕಾಪ್ಟರ್ ಮೂಲಕ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ಶೇಕ್ ಹಸೀನಾ ಹೆಲಿಕಾಪ್ಟರ್ ಮೂಲಕ ಬಾಂಗ್ಲಾದೇಶ ತೊರೆಯುತ್ತಿರುವ ವಿಡಿಯೋವನ್ನು ಬಾಂಗ್ಲಾ ಮಾಜಿ ವಾಯುಸೇನಾಧಿಕಾರಿ ರಹಸ್ಯವಾಗಿ ಚಿತ್ರೀಕರಣ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಈ ಅಧಿಕಾರಿ ಶವವಾಗಿ ಪತ್ತೆಯಾಗಿದ್ದಾರೆ.

ಸೇನಾ ಹೆಲಿಕಾಪ್ಟರ್ ಮೂಲಕ ಶೇಕ್ ಹಸಿನಾ ಪರಾರಿ

ಆಗಸ್ಟ್ 2024ರಂದು ಶೇಕ್ ಹಸೀನಾ ಹೆಲಿಕಾಪ್ಟರ್ ಮೂಲಕ ಬಾಂಗ್ಲಾದೇಶ ತೊರೆದಿದ್ದರು. ಬಾಂಗ್ಲಾದೇಶದ ಸಂಸತ್ತು, ಪ್ರಧಾನಿ ನಿವಾಸ, ಕಚೇರಿ ಮೇಲೆ ದಾಳಿಯಾಗಿತ್ತು. 1500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಶೇಕ್ ಹಸೀನಾ ಬಾಂಗ್ಲಾದೇಶ ಸೇನಾ ಹೆಲಿಕಾಪ್ಟರ್ ಮೂಲಕ ಪರಾರಿಯಾಗಿದ್ದರು. ಈ ಘಟನೆಯನ್ನು ಬಾಂಗ್ಲಾದೇಶ ಮಾಜಿ ವಾಯುಸೇನಾಧಿಕಾರಿ ಕೆಎಂ ತಹಸಿಫ್ ಸೌರಿ ಮೊಬೈಲ್ ಮೂಲಕ ಸೆರೆ ಹಿಡಿದಿದ್ದರು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ತೊಂಗಿ ಬಂದರ್ ಘಾಟ್ ಬಳಿ ಅಧಿಕಾರಿ ಶವ ಪತ್ತೆ

ಶೇಕ್ ಹಸಿನಾ ಬಾಂಗ್ಲಾದೇಶ ತೊರೆಯುವ ವಿಡಿಯೋ ಹರಿಬಿಟ್ಟಿದ್ದ ತಹಸಿಫ್ ಸೌರಿ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದರು. ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು. ಎಲ್ಲಾ ಕಡೆ ಹುಡುಕಾಡಿದ್ದರೂ ಸಹಸಿಫ್ ಪತ್ತೆಯಾಗಿರಲಿಲ್ಲ. ತೊಂಗಿ ಬಂದರ್ ಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಎಂಬಿ ರಾಕೀಬ್‌ಗೆ ಅಪರಿಚಿತ ಶವದ ಕುರಿತು ಮಾಹಿತಿ ಬಂದಿತ್ತು. ಹೀಗಾಗಿ ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಮೃತದೇಹ ಪತ್ತೆಯಾಗಿತ್ತು.

ಮೃತದೇಹ ವಶಕ್ಕೆ ಪಡೆದ ಪೊಲೀಸರು ನೇರವಾಗಿ ಶಹೀದ್ ಸುಹ್ರವಾಡಿ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ದಾಖಲಿಸಲಾಗಿತ್ತು. ಮೃತದೇಹ ಜೊತೆ ಪರ್ಸ್, ವಾಚ್ ಸೇರಿದಂತೆ ಇತರ ಕೆಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ತಪಾಸಣೆ ವೇಳೆ ಇದು ಮಾಜಿ ವಾಯುಸೇನಾಧಿಕಾರಿ ತಹಸಿಪ್ ಸೌರಿ ಎಂದು ಖಚಿತವಾಗಿದೆ. ಕಿಡ್ನಾಪ್ ಮಾಡಿ ದುಷ್ಕೃತ್ಯ ಎಸಗಲಾಗಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ ರಾಕಿಬ್ ಹೇಳಿದ್ದಾರೆ.

ನಿವೃತ್ತ ವಾಯುಸೇನಾಧಿಕಾರಿ ಸಾವಿನ ಹಿಂದೆ ಪ್ರಭಾವಿಗಳ ಕೈವಾಡವಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ ಬೆಂಬಲಿಗರು, ನಾಯಕರು, ಹಸೀನಾ ಪರವಿದ್ದ ಹಲವರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಲಾಗಿದೆ. ಇದೀಗ ರಾಕೀಬ್ ಸಾವಿಗೆ ಕಾರಣವೇನು ಅನ್ನೋದು ಚರ್ಚೆಯಾಗುತ್ತಿದೆ.