PM Modi Banaskantha Visit: ಬನಸ್ಕಾಂತದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು PM-KISAN ಕಂತು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಬಿಕ್ಕಟ್ಟು ಎದುರಿಸುವಾಗ ವಿರೋಧ ಪಕ್ಷಗಳು ಸಂತೋಷಪಡುತ್ತವೆ ಎಂದು ವಾಗ್ದಾಳಿ ನಡೆಸಿದರು.

PM Modi Banaskantha Visit: ದೇಶ ಬಿಕ್ಕಟ್ಟು ಎದುರಿಸವಾಗ ಅವರು ಸಂತೋಷ ಪಡುತ್ತಾರೆ. ಇತ್ತೀಚೆಗೆ ಇರಾನ್ ಉದ್ವಿಗ್ನತೆಯಿಂದ ತೈಲ ಬಿಕ್ಕಟ್ಟು ಎದುರಿಸಿದ ಉದಾಹರಣೆ ನೀಡುವ ಮೂಲಕ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಇಂದು ಬನಸ್ಕಾಂತದಲ್ಲಿ ಸುಮಾರು ₹14,000 ಕೋಟಿಗೂ ಹೆಚ್ಚಿನ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ಮಾಡಿದರು. ಇದೇ ವೇಳೆ ಅವರು ಸುಮಾರು ₹19,000 ಕೋಟಿ ಮೌಲ್ಯದ PM-KISAN ಯೋಜನೆಯ 24 ನೇ ಕಂತನ್ನು ಬಿಡುಗಡೆ ಮಾಡಿದರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶ ತೊಂದರೆಗೆ ಸಿಲುಕಿದ್ರೆ ಅವರಿಗೆ ಸಂತೋಷ

ಅವರು(ವಿರೋಧ ಪಕ್ಷಗಳು) ಯಾವಾಗ ದೇಶ ತೊಂದರೆಯಲ್ಲಿರೋದನ್ನ ನೋಡಲು ಬಯಸುತ್ತಾರೆ. ದೇಶವು ಯಾವಾಗೆಲ್ಲ ಬಿಕ್ಕಟ್ಟು ಎದುರಿಸಿದೆಯೋ ಹಾಗೆಲ್ಲ ಅವರು ನಡೆದುಕೊಂಡ ರೀತಿಯನ್ನ ಗಮನಿಸಬಹುದು. ಇತ್ತೀಚಿನ ಉದಾಹರಣೆಯಾಗಿ ಇರಾನ್‌ನೊಂದಿಗಿನ ಉದ್ವಿಗ್ನತೆ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿಯವರು, ಇರಾನ್ ಉದ್ವಿಗ್ನತೆಯಿಂದ ಉಂಟಾದ ತೈಲ ಬಿಕ್ಕಟ್ಟನ್ನು ದೇಶ ಎದುರಿಸಲು ಒಗ್ಗಟ್ಟಾಗಿ ಪ್ರಯತ್ನಿಸುತ್ತಿದ್ದರೆ ಅವರು ವದಂತಿಗಳನ್ನ ಹರಡುತ್ತಿದ್ದರು. ಇನ್ಮುಂದೆ ರಸಗೊಬ್ಬರ ಸಿಗಲ್ಲ ಎಂದು ರೈತರಲ್ಲಿ ಆತಂಕ ಸೃಷ್ಟಿಸುವ ಪ್ರಯತ್ನ ಮಾಡಿದರು. ಎಲ್‌ಪಿಜಿ ಗ್ಯಾಸ್ ಸಿಗಲ್ಲ ಎಂದು ಸಹೋದರಿಯರನ್ನ ಆತಂಕಪಡುವಂತೆ ಮಾಡಿದರು. ಮೋದಿಯವರ ಹೆಸರು ಕೆಡಿಸಲು ದೇಶದಲ್ಲಿ ಅವ್ಯವಸ್ಥೆ ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು. ಆದರೆ ಜನರು ಅವರ ಕುತಂತ್ರಗಳಿಗೆ ಸೊಪ್ಪು ಹಾಕಲಿಲ್ಲ. ಪ್ರಧಾನಿ ಮೋದಿ ತಮ್ಮ ಕೊನೆಯ ಉಸಿರಿನವರೆಗೂ ಜನರ ಸೇವೆ ಸಲ್ಲಿಸಲಿದ್ದಾರೆ ಎಂದು ಎಂದು ಭರವಸೆ ನೀಡಿದರು.

ಈ ಕಾರ್ಯಕ್ರಮಕ್ಕೆ ಬಂದಿರುವ ಪ್ರತಿಯೊಬ್ಬರು ಹಾಸಿಗೆ(ಚಾರ್ಪೈಸ್) ಮೇಲೆ ಕುಳಿತಿರುವುದು ದೇಶದ ಜನರಿಗೆ ಆಶ್ಚರ್ಯವಾಗಿರುತ್ತದೆ. ಬನಸ್ಕಾಂತ ನಮ್ಮ ಹಳ್ಳಿಗಳ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಿದೆ. ಒಂದು ವೇಳೆ ಈ ಬಗ್ಗೆ ವಿಶ್ವದಾಖಲೆಗಳಿಗೆ ತಿಳಿಸಿದ್ದರೆ ಇಂದು ಅವರು ಇದನ್ನು ವರ್ಲ್ಡ್ ರೆಕಾರ್ಡಗೆ ಸೇರಿಸಿರುತ್ತಿದ್ದರು ಎಂದರು.

ಕೃಷಿ ಬಜೆಟ್ 5 ಪಟ್ಟು ಹೆಚ್ಚಳ

ಇಂದು, ಮಹಿಳೆಯರು, ಮಕ್ಕಳು, ರೈತರು ಮತ್ತು ಪಶುಪಾಲಕರಿಗಾಗಿ ಹಲವಾರು ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮಾಡಲಾಗಿದೆ. ಇದಲ್ಲದೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್(PM Kisan) ನಿಧಿಯ ಹೊಸ ಕಂತು ದೇಶಾದ್ಯಂತ ಲಕ್ಷಾಂತರ ಸಣ್ಣ ರೈತರ ಖಾತೆಗಳನ್ನು ತಲುಪಿದೆ ಎಂದರು ನಮ್ಮ ರೈತರು, ಆಹಾರ ಪೂರೈಕೆದಾರರು ಅಭಿವೃದ್ಧಿ ಹೊಂದಿದ ಭಾರತದ ಪ್ರಬಲ ಸ್ತಂಭಗಳಲ್ಲಿ ಒಂದಾಗಿದೆ. ನಮ್ಮ ಸರ್ಕಾರ ರೈತರ ಸಬಲೀಕರಣಕ್ಕೆ ಆದ್ಯತೆ ನೀಡಿದೆ. 2013 ಕ್ಕೆ ಹೋಲಿಸಿದರೆ ಇಂದು ಕೃಷಿ ಬಜೆಟ್ ಐದು ಪಟ್ಟು ಹೆಚ್ಚಾಗಿದೆ. ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಲಕ್ಷಾಂತರ ರೈತರ ಜೀವನದ ಒಂದು ಭಾಗವಾಗಿದೆ ಎಂದರು.

ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಸಮ್ಮಾನ್ ಯೋಜನೆ

ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಸಮ್ಮಾನ್ ಯೋಜನೆ: 4.5 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ಸಣ್ಣ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಸ್ವಾತಂತ್ರ್ಯದ ನಂತರ ಸಣ್ಣ ರೈತರ ಅಗತ್ಯಗಳನ್ನು ಎಂದಿಗೂ ಅರ್ಥಮಾಡಿಕೊಳ್ಳಲಾಗಿಲ್ಲ. ದೇಶದ ಶೇ. 85 ರಷ್ಟು ಸಣ್ಣ ರೈತರು ಇದ್ದರೂ ಅವರನ್ನು ಎಂದಿಗೂ ಸಂಪರ್ಕಿಸಲಾಗಿಲ್ಲ. ಆದರೆ ನಮ್ಮ ಸರ್ಕಾರ ಈ ರೈತರ ಕಷ್ಟ ಅರ್ಥ ಮಾಡಿಕೊಂಡಿದೆ. ಅವರಿಗೆ ನಮ್ಮ ಸರ್ಕಾರ ಸ್ಪಂದಿಸಿದೆ. ಹಿಂದಿನ ಸರ್ಕಾರಗಳು MSP ವಿಚಾರದಲ್ಲಿ ಸಣ್ಣ ರೈತರನ್ನು ವಂಚಿಸುತ್ತಿದ್ದವು. ನಮ್ಮ ಸರ್ಕಾರ MSP ಯ ಭರವಸೆಯನ್ನು ಪೂರೈಸಿದೆ. MSP ಮೂಲಕ 24 ಲಕ್ಷ ಕೋಟಿ ರೂಪಾಯಿಗಳು ರೈತರ ಖಾತೆಗಳಿಗೆ ಹೋಗಿದೆ ಎಂದರು.

Scroll to load tweet…