07:01 AM (IST) Oct 27

India Latest News Live 27 October 2026 60,000 ಸಿಬ್ಬಂದಿಗೆ VRS - ಮೈಕ್ರೋಸಾಫ್ಟ್‌ ಬಿಗ್ ಆಫರ್‌! 4 ದೇಶದ ಟೆಕ್ಕಿಗಳಿಗೆ ಮಾಹಿತಿ

ಕೃತಕ ಬುದ್ಧಿಮತ್ತೆ (ಎಐ) ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಮೈಕ್ರೋಸಾಫ್ಟ್ ಮುಂದಾಗಿದ್ದು, ಭಾರತ ಸೇರಿದಂತೆ 4 ದೇಶಗಳ 60,000 ಉದ್ಯೋಗಿಗಳಿಗೆ ವಿಆರ್‌ಎಸ್ ಆಫರ್ ನೀಡಿದೆ. ಸ್ವಯಂಪ್ರೇರಿತವಾಗಿ ಕೆಲಸ ಬಿಡುವವರಿಗೆ ಉತ್ತಮ ಪ್ಯಾಕೇಜ್ ಘೋಷಿಸಲಾಗಿದೆ.

Read Full Story
06:50 AM (IST) Oct 27

India Latest News Live 27 October 2026 ₹100 ಕೋಟಿ ವಂಚನೆ - ಡಿಎಂಕೆ ಮಾಜಿ ಸಚಿವ ಅನ್ಬಿಲ್‌ ಮಹೇಶ್ ಬಂಧನದ ಹಿಂದಿನ ರಹಸ್ಯವೇನು?

ಖಾಸಗಿ ಶಾಲೆಗಳಿಗೆ ಮಾನ್ಯತೆ ನೀಡುವ ಹೆಸರಿನಲ್ಲಿ ₹100 ಕೋಟಿ ವಂಚಿಸಿದ ಆರೋಪದ ಮೇಲೆ ಡಿಎಂಕೆ ಮಾಜಿ ಸಚಿವ ಅನ್ಬಿಲ್‌ ಮಹೇಶ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

Read Full Story
06:43 AM (IST) Oct 27

India Latest News Live 27 October 2026 ಶೇ.100ರಷ್ಟು ಶುದ್ಧ ಎಥನಾಲ್‌ ಇಂಧನದಿಂದ ಚಲಿಸುವ ವಾಹನಗಳ ಬಳಕೆಗೆ ಕೇಂದ್ರದ ಅನುಮತಿ

ಶೇ.100ರಷ್ಟು ಶುದ್ಧ ಎಥನಾಲ್‌ (ಇ100) ಇಂಧನದಿಂದ ಚಲಿಸುವ ಫ್ಲೆಕ್ಸ್-ಫ್ಯೂಯೆಲ್ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯಿಂದ ವಾಹನಗಳ ತೂಕದ ಮಿತಿಯನ್ನು 3,500 ಕೆಜಿಗಳಿಗೆ ಹೆಚ್ಚಿಸಲಾಗಿದೆ.

Read Full Story
06:34 AM (IST) Oct 27

India Latest News Live 27 October 2026 ಕರಾವಳಿಯತ್ತ ನುಗ್ಗಿ ಬರುತ್ತಿದೆ ಭೀಕರ ‘ಅರ್ನಬ್‌’ ಚಂಡಮಾರುತ; 3 ರಾಜ್ಯಕ್ಕೆ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಅರ್ನಬ್' ಚಂಡಮಾರುತವು ಬುಧವಾರ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ. ಇದರ ಪ್ರಭಾವದಿಂದ ಆಂಧ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗಲಿದ್ದು, ಭೂಕುಸಿತದ ಆತಂಕ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ನಿಷೇಧಿಸಲಾಗಿದೆ.
Read Full Story