ವಿಶ್ವದ ಅತಿ ಚಿಕ್ಕ ನದಿ: ಜಸ್ಟ್ 20 ಮೀಟರ್ ದೂರ ಹರಿದು ಸಮುದ್ರ ಸೇರುವ ಜೀವಸೆಲೆ ಇದು
Short River: ಅಮೆಜಾನ್ ಮತ್ತು ನೈಲ್ನಂತಹ ಸಾವಿರಾರು ಕಿಲೋಮೀಟರ್ ಹರಿಯುವ ನದಿಗಳ ಬಗ್ಗೆ ನಮಗೆ ತಿಳಿದಿದೆ. ಆದರೆ ಪ್ರಪಂಚದಲ್ಲಿ ಕೇವಲ 20 ರಿಂದ 50 ಮೀಟರ್ ಹರಿದು ಸಮುದ್ರ ಸೇರುವ ನದಿಗಳೂ ಇವೆ.

ಪ್ರಪಂಚದ ಅತಿ ಉದ್ದದ ನದಿ
ಪ್ರಪಂಚದ ಅತಿ ಉದ್ದದ ನದಿ ಅಂದಾಕ್ಷಣ ಅಮೆಜಾನ್ ಅಥವಾ ನೈಲ್ ನದಿ ಹೆಸರು ನೆನಪಾಗುತ್ತೆ. ಇವು ಬರೋಬ್ಬರಿ 6 ಸಾವಿರ ಕಿ.ಮೀ.ಗೂ ಹೆಚ್ಚು ದೂರ ಹರಿಯುತ್ತವೆ. ನಮ್ಮ ಭಾರತದಲ್ಲೂ ಗಂಗಾ, ಸಿಂಧು, ಬ್ರಹ್ಮಪುತ್ರ ನದಿಗಳು 2 ರಿಂದ 3 ಸಾವಿರ ಕಿ.ಮೀ. ಹರಿದು ಸಮುದ್ರ ಸೇರುತ್ತವೆ.
ನದಿಗಳು
ದಕ್ಷಿಣ ಭಾರತದ ಗೋದಾವರಿ, ಕೃಷ್ಣಾ ನದಿಗಳ ಉದ್ದ ಕೂಡ 1000 ಕಿ.ಮೀ.ಗಿಂತ ಹೆಚ್ಚಿದೆ. ಹೀಗಾಗಿ ನೂರಾರು ಕಿಲೋಮೀಟರ್ ಹರಿದರೆ ಮಾತ್ರ ನದಿ, ಇಲ್ಲದಿದ್ದರೆ ಅವು ಬರೀ ಹಳ್ಳ, ಕಾಲುವೆ ಅಂತಲೇ ನಾವೆಲ್ಲಾ ಅಂದುಕೊಂಡಿದ್ದೀವಿ. ಆದ್ರೆ ಕೇವಲ ಕೆಲವೇ ಮೀಟರ್ ಹರಿಯುವ ನೀರಿನ ಸೆಲೆಯನ್ನು ಕೂಡ ನದಿ ಅಂತ ಕರೆಯಬಹುದು. ಇದಕ್ಕೆ ಜಗತ್ತಿನಲ್ಲಿ ಸಾಕಷ್ಟು ಉದಾಹರಣೆಗಳಿವೆ.
ಉದ್ದವಾಗಿ ಹರಿಯುವ, ಅಪಾರ ಪ್ರಮಾಣದ ನೀರು ಹೊತ್ತೊಯ್ಯುವ ದೊಡ್ಡ ನದಿಗಳ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಜಗತ್ತಿನ ಅತಿ ಚಿಕ್ಕ ನದಿ ಯಾವುದು ಗೊತ್ತಾ? ಕೇವಲ ಕೆಲವೇ ಮೀಟರ್ ಹರಿದು ಸಮುದ್ರ ಸೇರುವ ಆ ನದಿಯ ಇಂಟರೆಸ್ಟಿಂಗ್ ವಿಚಾರಗಳನ್ನು ಇಲ್ಲಿ ತಿಳಿಯೋಣ.
20 ಮೀಟರ್ ದೂರ ಹರಿದು ಸಮುದ್ರ ಸೇರುವ ನದಿ
ಪ್ರಪಂಚದ ಅತಿ ಚಿಕ್ಕ ನದಿ ಇರೋದು ಇಂಡೋನೇಷ್ಯಾದಲ್ಲಿ. ಆಗ್ನೇಯ ಸುಲವೇಸಿ ಪ್ರದೇಶದಲ್ಲಿರುವ ತಂಬೋರಾಸಿ ನದಿ ಕೇವಲ 20 ಮೀಟರ್ ದೂರ ಹರಿದು ಸಮುದ್ರ ಸೇರುತ್ತೆ. ಫ್ಲೋರೆಸ್ ಸಮುದ್ರ ತೀರದಲ್ಲಿರುವ ಒಂದು ನೀರಿನ ಬುಗ್ಗೆಯಿಂದ ಈ ನದಿ ಹುಟ್ಟುತ್ತೆ. ಬುಗ್ಗೆ ತುಂಬಿದ ತಕ್ಷಣ ನೀರು ಸಮುದ್ರದ ಕಡೆಗೆ ಹರಿಯಲು ಶುರುವಾಗುತ್ತೆ. ನೋಡನೋಡುತ್ತಿದ್ದಂತೆ ಸಮುದ್ರ ಸೇರಿಬಿಡುತ್ತೆ. ಹೀಗೆ ಅತಿ ಕಡಿಮೆ ದೂರ ಹರಿಯುವ ನದಿ ಎಂಬ ಹೆಗ್ಗಳಿಕೆ ತಂಬೋರಾಸಿ ನದಿಯದ್ದು.
ಸ್ವಚ್ಛವಾದ ನೀರು ಹಾಗೂ ಸುಂದರ ಪರಿಸರ
ಸ್ವಚ್ಛವಾದ ನೀರು ಹಾಗೂ ಸುಂದರ ಪರಿಸರ ಈ ನದಿಯ ಸ್ಪೆಷಾಲಿಟಿ. ಸುಣ್ಣದ ಕಲ್ಲಿನ ಬೆಟ್ಟಗಳ ಹತ್ತಿರವಿರುವ ಬುಗ್ಗೆಯಿಂದ ನೀರು ಹೊರಬಂದು ಸಣ್ಣ ನದಿಯಾಗಿ ಹರಿಯುತ್ತೆ. ಹಸಿರು ಮತ್ತು ನೀಲಿ ಬಣ್ಣದಲ್ಲಿ ಕಾಣುವ ಈ ನೀರು ಪ್ರವಾಸಿಗರನ್ನು ಸಖತ್ ಆಕರ್ಷಿಸುತ್ತೆ.
ತಂಬೋರಾಸಿ ಮಾತ್ರವಲ್ಲ, ಪ್ರಪಂಚದ ಬೇರೆ ಬೇರೆ ದೇಶಗಳಲ್ಲೂ ಇಂತಹ ಪುಟ್ಟ ನದಿಗಳಿವೆ. ಸಮುದ್ರ ತೀರದಲ್ಲಿ ಹುಟ್ಟಿ, ಕೆಲವೇ ಮೀಟರ್ ಹರಿದು ಸಮುದ್ರ ಸೇರುವುದು ಇವುಗಳ ವಿಶೇಷ. ಅಂತಹ ಕೆಲವು ನದಿಗಳ ಮಾಹಿತಿ ಇಲ್ಲಿದೆ.
ಚಿಕ್ಕ ನದಿಗಳು
ರೆಪ್ರುವಾ ನದಿ
ಜಾರ್ಜಿಯಾ ಸಮೀಪದ ಅಬ್ಖಾಜಿಯಾ ಪ್ರದೇಶದಲ್ಲಿ ರೆಪ್ರುವಾ ನದಿ ಹರಿಯುತ್ತೆ. ಇದು ಕೂಡ ಜಗತ್ತಿನ ಅತಿ ಚಿಕ್ಕ ನದಿಗಳಲ್ಲಿ ಒಂದು. ಇದರ ಉದ್ದ ಕೇವಲ 27 ಮೀಟರ್. ಅಂತರ್ಜಲದ ಬುಗ್ಗೆಯಿಂದ ಹುಟ್ಟುವ ಈ ನದಿ ಕಪ್ಪು ಸಮುದ್ರವನ್ನು ಸೇರುತ್ತೆ. ಉದ್ದ ಕಡಿಮೆಯಿದ್ದರೂ, ನೀರಿನ ಹರಿವು ಮಾತ್ರ ಭಾರಿ ಪ್ರಮಾಣದಲ್ಲಿರುತ್ತೆ.
ಈ ನದಿಯ ಮತ್ತೊಂದು ವಿಶೇಷ ಅಂದ್ರೆ ನೀರಿನ ತಾಪಮಾನ. ಇಲ್ಲಿನ ನೀರು ಯಾವಾಗಲೂ 10-11 ಡಿಗ್ರಿ ಸೆಲ್ಸಿಯಸ್ ಇರುತ್ತೆ, ಅಂದ್ರೆ ಸಖತ್ ತಂಪಾಗಿರುತ್ತೆ.
ಕೊವಾಸೆಲ್ವಾ ನದಿ
ನಾರ್ವೆಯ ಹಿಟ್ರಾ ದ್ವೀಪದಲ್ಲಿರುವ ಕೊವಾಸೆಲ್ವಾ ನದಿಯನ್ನು ಕೂಡ ಜಗತ್ತಿನ ಅತಿ ಚಿಕ್ಕ ನದಿಗಳಲ್ಲಿ ಒಂದು ಅಂತಾರೆ. ಇದರ ಉದ್ದ ಕೇವಲ 20 ರಿಂದ 22 ಮೀಟರ್. ಕೊವಾಸ್ವತ್ನೆಟ್ ಸರೋವರದಿಂದ ಹುಟ್ಟುವ ಈ ನದಿ ನೇರವಾಗಿ ಸಮುದ್ರ ಸೇರುತ್ತೆ.
ಒಂಬ್ಲಾ ನದಿ
ಕ್ರೊಯೇಷಿಯಾದ ಡುಬ್ರೊವ್ನಿಕ್ ಬಳಿ ಒಂಬ್ಲಾ ನದಿ ಇದೆ. ಇದರ ಉದ್ದ ಕೇವಲ 30 ಮೀಟರ್. ಆದ್ರೆ ನೀರಿನ ಪ್ರಮಾಣದಲ್ಲಿ ಇದು ತುಂಬಾನೇ ಸ್ಪೆಷಲ್. ಕಾರ್ಸ್ಟ್ ನೀರಿನ ಬುಗ್ಗೆಯಿಂದ ಈ ನದಿ ಹುಟ್ಟುತ್ತೆ. ಕೇವಲ 30 ಮೀಟರ್ ಹರಿದರೂ, ಪ್ರತಿ ಸೆಕೆಂಡಿಗೆ 23.9 ಘನ ಮೀಟರ್ ನೀರು ಹರಿಯುತ್ತೆ ಅಂತ ಕ್ರೊಯೇಷಿಯಾದ ಜಲಸಂಪನ್ಮೂಲ ಸಂಸ್ಥೆ ಹೇಳಿದೆ. ಇದು ಅಡ್ರಿಯಾಟಿಕ್ ಸಮುದ್ರವನ್ನು ಸೇರುತ್ತೆ.
ಜೆಜೆರ್ನಿಕಾ ನದಿ
ಸ್ಲೊವೇನಿಯಾದ ಇಡ್ರಿಜಾ ಪ್ರದೇಶದಲ್ಲಿ ಜೆಜೆರ್ನಿಕಾ ನದಿ ಹರಿಯುತ್ತೆ. ಇದರ ಉದ್ದ ಸುಮಾರು 55 ಮೀಟರ್. ಡಿವ್ಜೆ ಜೆಜೆರೊ ಎಂಬ ಸರೋವರದಿಂದ ಹುಟ್ಟುವ ಈ ನದಿ ಕೇವಲ 55 ಮೀಟರ್ ಹರಿದು ಮುಕ್ತಾಯವಾಗುತ್ತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ






