ನ್ಯೂಜಿಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಬಿಹಾರದ ತಾಜ್‌ಪುರದಲ್ಲಿರುವ ಪೂರ್ವಜರ ಮನೆಯ ಬಗ್ಗೆ ಇಲ್ಲಿದೆ ಮಾಹಿತಿ. ಸುಮಾರು 40 ಲಕ್ಷ ಮೌಲ್ಯದ ಈ ಮನೆಯಲ್ಲಿಯೇ ಅವರ ತಂದೆ ನಿರ್ಮಿಸಿದ ಪಿಚ್‌ನಲ್ಲಿ ವೈಭವ್ ತಮ್ಮ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದರು.
ವೈಭವ್ ಸೂರ್ಯವಂಶಿ.. ಈ ಹೆಸರು ಕೇಳುತ್ತಿದ್ದಂತೆಯೇ ಕ್ರಿಕೆಟ್ ಜಗತ್ತಿನ ದಿಗ್ಗಜ ಬೌಲರ್‍ಗಳೆಲ್ಲ ಒಂದು ಕ್ಷಣ ಬೆಚ್ಚಿ ಬೀಳ್ತಾರೆ. ಅಷ್ಟರಮಟ್ಟಿಗೆ ಕ್ರಿಕೆಟ್ ಜಗತ್ತಿಗೆ ತಮ್ಮ ಹೆಸರನ್ನು ಕೊಂಡೊಯ್ದಿದ್ದಾರೆ. ಇವತ್ತೂ ಕೂಡ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದರು. ನಾಲ್ಕು ಸಿಕ್ಸರ್, ನಾಲ್ಕು ಬೌಂಡರಿಯೊಂದಿಗೆ ಕೇವಲ 19 ಬಾಲ್‌ನಲ್ಲಿ 45 ರನ್‌ಗಳನ್ನ ಚಚ್ಚಿದರು. ಆ ಮೂಲಕ ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿಕೊಟ್ಟರು.
ವಿಷಯ ಅದಲ್ಲ! ನಿಮಗೆ ಗೊತ್ತಾ ವೈಭವ್ ಸೂರ್ಯವಂಶಿ ಅವರ ಮನೆ ಹೇಗಿದೆ ಎಂದು. ವೈಭವ್ ಸೂರ್ಯವಂಶಿ ಮೂಲತಃ ಬಿಹಾರದ ಸಮಸ್ತಿಪುರ ಜಿಲ್ಲೆಯ ತಾಜ್‌ಪುರ ಪ್ರದೇಶದವರು. ಇದು ಅವರ ಪೂರ್ವಜರ ಮನೆ. ಸುಮಾರು 40 ಲಕ್ಷ ಮೌಲ್ಯದ ಈ ಮನೆ ತುಂಬಾ ಅದ್ಭುತವಾಗಿದೆ. ಮನೆಯ ಸರಳತೆ, ಸುತ್ತಮುತ್ತಲಿನ ಹಸಿರು ಮತ್ತು ಅದರ ಹಿಂದೆ ಕ್ರಿಕೆಟ್ ಅಭ್ಯಾಸ ಮಾಡುವ ಸ್ಥಳ ಎಲ್ಲರ ಗಮನ ಸೆಳೆಯುತ್ತದೆ..
ಹೇಗಿದೆ ಅರಮನೆ?
ಮನೆ ಎರಡು ಅಂತಸ್ತಿನ ಕಟ್ಟಡ. ಅದರ ಸುತ್ತಲೂ ಸಣ್ಣ ಬಾಲ್ಕನಿ ಮತ್ತು ತೆರೆದ ಸ್ಥಳವಿದೆ. ಮನೆ ಕೂಡ ಹಸಿರಿನಿಂದ ಹೊಳೆಯುತ್ತಿದೆ. ಇದು ಐಷಾರಾಮಿ ಸೆಲೆಬ್ರಿಟಿ ಬಂಗಲೆಯಂತಲ್ಲ, ಬದಲಾಗಿ ವೈಭವ್ ಅವರ ಆರಂಭಿಕ ದಿನಗಳ ನೆನಪುಗಳಿಂದ ತುಂಬಿರುವ ಸಾಮಾನ್ಯ ಕುಟುಂಬದ ಮನೆ.
ಸೂರ್ಯವಂಶಿಗೆ ಈ ಮನೆ ಯಾವತ್ತೂ ಮರೆಯಲಾಗದ ವಿಶೇಷ ಸ್ಥಳ. ಇನ್ನು ಸೂರ್ಯವಂಶಿ ತಂದೆ ಸಂಜೀವ್ ಅವರು, ತಮ್ಮ ಮಗನಿಗಾಗಿ ಮನೆಯ ಬಳಿ ನೆಟ್‌ಗಳು ಹಾಗೂ ಪಿಚ್‌ಗಳನ್ನ ನಿರ್ಮಿಸಿದ್ದರು. ಅದೂ ಇಂದಿಗೂ ಇದೆ. ಕಾಂಕ್ರೀಟ್ ಮತ್ತು ಟರ್ಫ್ ಪಿಚ್‌ಗಳನ್ನು ಸೂರ್ಯವಂಶಿಗಾಗಿ ಮಾಡಿ ಕೊಟ್ಟಿದ್ದಾರೆ. ಅವರ ಮನೆಯಲ್ಲಿದ್ದ ಈ ಪಿಚ್‌ನಿಂದಲೇ ಸೂರ್ಯವಂಶಿ ನಿಯಮಿತವಾಗಿ ಕ್ರಿಕೆಟ್ ಅಭ್ಯಾಸ ಮಾಡಲು ಸಹಾಯ ಆಗಿದೆ.
ವೈಭವ್ ಕ್ರಿಕೆಟ್ ಜಗತ್ತಿಗೆ ಕಾಲಿಡಲು ಮುಖ್ಯ ಕಾರಣ ಅವರ ತಂದೆಗೆ ಕ್ರಿಕೆಟ್ ಮೇಲಿನ ಆಸಕ್ತಿ. ಅಪ್ಪನಿಂದ ಬಂದ ಕ್ರಿಕೆಟ್ ಮೇಲಿನ ಒಲವಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದೂ ಕೂಡ ಅವರ ತಂದೆಯೇ. ಮಗನ ಕಠಿಣ ಪರಿಶ್ರಮವನ್ನು ನೋಡಿ.. ಅದಕ್ಕೆ ಬೇಕಾದ ವೇದಿಕೆಯನ್ನ ಒದಗಿಸಿಕೊಟ್ಟರು. ಸ್ಥಳೀಯ ಮತ್ತು ವಿಶ್ವವಿದ್ಯಾಲಯ ಮಟ್ಟದ ಬೌಲರ್‌ಗಳ ಜೊತೆ ಅಭ್ಯಾಸ ನಡೆಸಲು ಅನುಕೂಲ ಮಾಡಿಕೊಡುತ್ತಿದ್ದರು. ನಂತರ ಹೆಚ್ಚಿನ ತರಬೇತಿಗಾಗಿ ಕುಟುಂಬ ಪಾಟ್ನಾಗೆ ಶಿಫ್ಟ್ ಆಯಿತು. ಹೀಗಾಗಿ.. ವೈಭವ್ ಚಿಕ್ಕ ವಯಸ್ಸಿನಿಂದಲೇ ಆಟದ ಮೇಲೆ ಹೆಚ್ಚು ಕೇಂದ್ರೀಕರಿಸಲು ಸಹಾಯ ಆಯಿತು. ವೈಭವ್ ಪೂರ್ವಜರ ಮನೆಯ ಮೌಲ್ಯ 40 ರಿಂದ 60 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಮನೆಯ ಬೆಲೆಗಿಂತ ಹೆಚ್ಚಾಗಿ, ಮನೆಯ ವಿಶಿಷ್ಟತೆಯು ವೈಭವ್ ಅವರ ಕ್ರಿಕೆಟ್ ಪ್ರಯಾಣ ಪ್ರಾರಂಭವಾದ ಸ್ಥಳವಾಗಿದೆ..






